Homeಮುಖಪುಟ‘ಹಮ್ ಕಾಗಜ್ ನಹಿ ದಿಖಾಯೇಂಗೆ’: ‘ಸ್ವರಾ ಭಾಸ್ಕರ್‌- ಫಹಾದ್‌’ ಪ್ರೇಮಕತೆ ಬಿಚ್ಚಿಟ್ಟ ವಿನೂತನ ವೆಡ್ಡಿಂಗ್‌ ಕಾರ್ಡ್

‘ಹಮ್ ಕಾಗಜ್ ನಹಿ ದಿಖಾಯೇಂಗೆ’: ‘ಸ್ವರಾ ಭಾಸ್ಕರ್‌- ಫಹಾದ್‌’ ಪ್ರೇಮಕತೆ ಬಿಚ್ಚಿಟ್ಟ ವಿನೂತನ ವೆಡ್ಡಿಂಗ್‌ ಕಾರ್ಡ್

- Advertisement -
- Advertisement -

ಬಾಲಿವುಡ್ ನಟಿ ಸ್ವರಾ ಭಾಸ್ಕರ್‌ ಮತ್ತು ಸಮಾಜವಾದಿ ಪಕ್ಷದ ಯುವ ನಾಯಕ ಫಹಾದ್ ಅಹಮದ್ ಅವರು ಇತ್ತೀಚೆಗೆ ಸರಳವಾಗಿ ವಿವಾಹವಾಗಿದ್ದರು. ಅವರ ವಿವಾಹ ಆಹ್ವಾನ ಪತ್ರಿಕೆಯು ಈಗ ವೈರಲ್‌ ಆಗಿದ್ದು, ಸ್ವಾರಸ್ಯಕರ ಸಂಗತಿಗಳೊಂದಿಗೆ ಗಮನ ಸೆಳೆಯುತ್ತಿದೆ.

ಬಾಲಿವುಡ್‌ ನಟಿ, ನಟರ ವಿವಾಹವೆಂದರೆ ಅದ್ಧೂರಿ, ದುಂದುವೆಚ್ಚವೇ ಮನೆಮಾಡಿರುತ್ತದೆ. ರಾಜಕಾರಣದ ಹಿನ್ನೆಲೆಯುಳ್ಳವರ ಮದುವೆಗಳೂ ಈ ಆಡಂಬರಕ್ಕೆ ಹೊರತಲ್ಲ. ಜನಪರ ಚಳವಳಿಗಳ ಪರವಾಗಿ ದನಿ ಎತ್ತುತ್ತ ಬಂದಿರುವ ಸ್ವರಾ ಭಾಸ್ಕರ್‌ ಮತ್ತು ಸಮಾಜವಾದಿ ಪಕ್ಷದ ಫಹಾದ್‌ ಅಹಮದ್‌ ವಿವಾಹ ಭಿನ್ನವಾಗಿತ್ತು. ಸರಳವಾಗಿ ರಿಜಿಸ್ಟರ್‌ ಮ್ಯಾರೇಜ್‌ ಆಗಿದ್ದರು. ಇದರ ಜೊತೆಗೆ ಇವರ ವಿವಾಹ ಆಮಂತ್ರಣ ಪತ್ರಿಕೆ ಹೊರಬಿದ್ದಿದ್ದು ‘ಸ್ವರಾ ಮತ್ತು ಫಹಾದ್‌’ ಅವರ ಲವ್‌ಸ್ಟೋರಿಯನ್ನು ವಿನೂತನವಾಗಿ ಹೇಳುತ್ತಿದೆ.

ಮದುವೆಯ ಆಮಂತ್ರಣ ಪತ್ರಿಕೆಯ ವಿನ್ಯಾಸ ಮಾಡಿರುವ ಕಲಾವಿದ ಪ್ರತೀಕ್ ಕುಮಾರ್‌ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಮೂರು ಪುಟದ ಆಮಂತ್ರಣ ಪತ್ರಿಕೆಯನ್ನು ಹಂಚಿಕೊಂಡಿದ್ದು, ಸ್ವರಾ ಮತ್ತು ಫಹಾದ್ ಅವರ ಪ್ರೇಮಕಥೆಯನ್ನು ಪರಿಚಯಿಸಿದ್ದಾರೆ.

 

View this post on Instagram

 

A post shared by Prateeq Kumar (@prateeq)

ಕೆಂಪು ಲೆಹೆಂಗಾ ಧಿರಿಸಿನಲ್ಲಿ ವಧು ಮತ್ತು ಬೀಜ್ ಶೇರ್ವಾನಿ ಧಿರಿಸಿನಲ್ಲಿ ವರ ಇರುವುದನ್ನು ಈ ಕಾರ್ಡ್‌ನಲ್ಲಿ ನೋಡಬಹುದು. ಪ್ರತಿಭಟನೆ ನಡೆಯುತ್ತಿರುವುದನ್ನು ಈ ಇಬ್ಬರೂ ಕಿಟಕಿಯ ಮೂಲಕ ನೋಡುತ್ತಿರುವ ಕಲಾಕೃತಿ ಇಲ್ಲಿದೆ.

‘ಹಮ್ ಸಬ್ ಏಕ್ ಹೈ’ (ನಾವು ಒಂದು), ‘ಹಮ್ ಕಾಗಜ್ ನಹಿ ದಿಖಾಯೇಂಗೆ’ (‘ನಮ್ಮ ಕಾಗದಗಳನ್ನು ನಾವು ತೋರಿಸುವುದಿಲ್ಲ’ – ಸಿಎಎ ಚಳವಳಿಯ ವೇಳೆ ಹೊಮ್ಮಿದ ಘೋಷಣೆ) ಮತ್ತು ‘ಪ್ರೀತಿಯೇ ಅತಿದೊಡ್ಡ ಕ್ರಾಂತಿ’, ‘ನಾವು ಭಾರತೀಯರು’ ‘ಇನ್‌ಕ್ವಿಲಾಬ್‌ ಜಿಂದಾಬಾದ್‌’, ‘ಜಾತ್ಯತೀತತೆ’, ‘ದ್ವೇಷದ ವಿರುದ್ಧ ಭಾರತ’, ‘ಹಮ್‌ ದೇಖೇಂಗೆ’ (ನಾವು ನೋಡುತ್ತೇವೆ) ಎಂಬ ಘೋಷಣೆಗಳಿರುವ ಫಲಕಗಳನ್ನು ಪ್ರತಿಭಟನೆ ಮಾಡುತ್ತಿರುವ ಜನರು ಪ್ರದರ್ಶಿಸುತ್ತಿರುವುದನ್ನು ಇಲ್ಲಿ ಕಾಣಬಹುದು. ಭಾರತದ ರಾಷ್ಟ್ರಧ್ವಜ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಬಹುತ್ವವನ್ನು ಸಾರುವ ಜನ ಸಮೂಹ ಸೇರಿದಂತೆ ವಿವಿಧ ಚಿತ್ರಣಗಳನ್ನು ಇಲ್ಲಿ ನೋಡಬಹುದು.

ಪೋಸ್ಟ್‌ ಮಾಡಿರುವ ಕಲಾವಿದರು, “ಧೈರ್ಯವಂತ ಮತ್ತು ಅಸಾಧಾರಣ ವ್ಯಕ್ತಿಗಳಾದ ಸ್ವರಾ ಭಾಸ್ಕರ್‌- ಫಹಾದ್ ಅವರ ವಿವಾಹ ಆಮಂತ್ರಣ ರೂಪಿಸಲು ನಮಗೆ ಅವಕಾಶ ಸಿಕ್ಕಿದೆ” ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿರಿ: ಒಬ್ಬ ಹಿಂದೂವಾಗಿ ನನಗೆ ನಾಚಿಕೆಯಾಗುತ್ತಿದೆ!: ಮುಸ್ಲಿಮರ ಮೇಲಿನ ದಾಳಿಗೆ ನಟಿ ಸ್ವರಾ ಭಾಸ್ಕರ್‌ ಪ್ರತಿಕ್ರಿಯೆ

ಮುಂದುವರಿದು, “ಜನರ ಪ್ರತಿಭಟನೆಯ ವೇಳೆ ತಾವಿಬ್ಬರು ಭೇಟಿಯಾಗಿದ್ದು ಹೇಗೆ, ಪರಸ್ಪರ ಇಷ್ಟಪಟ್ಟಿದ್ದು ಹೇಗೆ, ಮುಂಬೈ ಮತ್ತು ಮರೀನ್‌ಡ್ರೈವ್‌ನ ನೆನಪುಗಳು, ಸಿನಿಮಾ ಮೇಲಿನ ಇಬ್ಬರ ಪ್ರೀತಿ ಮತ್ತು ಅವರ ಸುಂದರವಾದ ಬೆಕ್ಕು ಗಾಲಿಬ್‌‌ ಕುರಿತು ಕಲಾಕೃತಿ ರಚಿಸಲು ಈ ಇಬ್ಬರೂ ಆಹ್ವಾನಿಸಿದ್ದರು” ಎಂದು ಬರೆದುಕೊಳ್ಳಲಾಗಿದೆ.

ಇನ್‌ಸ್ಟಾದಲ್ಲಿ ಹಂಚಿಕೊಳ್ಳಲಾಗಿರುವ ಈ ವಿನ್ಯಾಸವನ್ನು ನೋಡಿರುವ ಫೇಜ್‌ನ ಫಾಲೋಯರ್‌ಗಳು ಮನಸೋತಿದ್ದಾರೆ. “ಇದು ತುಂಬಾ ಅದ್ಭುತವಾಗಿದೆ .. ವಾವ್‌… ನಿರ್ಭೀತ, ಶಕ್ತಿಯುತ… ಪ್ರೀತಿ” ಎಂದೆಲ್ಲ ಕಮೆಂಟ್ ಮಾಡಿದ್ದಾರೆ.

ಕಾಮೆಂಟ್‌ ವಿಭಾಗದಲ್ಲಿ ಮತ್ತೊಬ್ಬರು, “ನೀವು ಅದ್ಭುತ ಕೆಲಸ ಮಾಡಿದ್ದೀರಿ! ತುಂಬಾ ಧನ್ಯವಾದಗಳು” ಎಂದು ಶ್ಲಾಘಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...