Homeಮುಖಪುಟಹೋಳಿ ವೇಳೆ ತಲೆ ಮೇಲೆ ಮೊಟ್ಟೆ ಹೊಡೆಯದಿರಿ ಎಂದ ಸ್ವಿಗ್ಗಿ; ‘ಹಿಂದೂಪೊಬಿಕ್‌’ ಹ್ಯಾಷ್‌ಟ್ಯಾಗ್ ಟ್ರೆಂಡ್

ಹೋಳಿ ವೇಳೆ ತಲೆ ಮೇಲೆ ಮೊಟ್ಟೆ ಹೊಡೆಯದಿರಿ ಎಂದ ಸ್ವಿಗ್ಗಿ; ‘ಹಿಂದೂಪೊಬಿಕ್‌’ ಹ್ಯಾಷ್‌ಟ್ಯಾಗ್ ಟ್ರೆಂಡ್

- Advertisement -
- Advertisement -

“ಹೋಳಿ ಹಬ್ಬದ ವೇಳೆಯಲ್ಲಿ ತಲೆಯ ಮೇಲೆ ಹೊಡೆಯದಿರಿ. ಆಮ್ಲೆಟ್‌ ಮಾಡಿಕೊಂಡು ತಿನ್ನಿರಿ” ಎಂದು ಆಹಾರ ಡೆಲಿವರಿ ಸಂಸ್ಥೆ ಸ್ವಿಗ್ಗಿ ನೀಡಿರುವ ಜಾಹೀರಾತಿನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. “#ಹಿಂದೂಪೊಬಿಕ್‌ಸ್ವಿಗ್ಗಿ” (#HinduPhobicSwiggy) ಹ್ಯಾಷ್‌ ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

ಹಿಂದೂಗಳಲ್ಲಿ ಭಯ ಹುಟ್ಟಿಸಲಾಗುತ್ತಿದೆ ಎಂದು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಜಾಹೀರಾತನ್ನು ಹಂಚಿಕೊಳ್ಳಲಾಗುತ್ತಿದೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಮೊಟ್ಟೆಗಳನ್ನು ಹೊಡೆಯಬೇಡಿ ಎಂದಿರುವುದು ಅನಗತ್ಯವಾಗಿದೆ. ಇದು ಹಿಂದೂ ವಿರೋಧಿ ನಿಲುವು ಎಂದು ನಿರೂಪಣೆಗಳನ್ನು ಕಟ್ಟಲಾಗುತ್ತಿದೆ.

“ಸ್ವಿಗ್ಗಿ, ನಿಮ್ಮ ಕ್ರಮಗಳು ಲಕ್ಷಾಂತರ ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಎಲ್ಲಾ ಹಬ್ಬಗಳಿಗೆ ಗೌರವವನ್ನು ತೋರಿಸಲು ಕಲಿಯಿರಿ ಮತ್ತು ಆಕ್ಷೇಪಾರ್ಹ ಜಾಹೀರಾತು ತೆಗೆದುಹಾಕಿ. ಹಿಂದೂಯೇತರ ಹಬ್ಬಗಳಲ್ಲಿ ಇಂತಹದ್ದನ್ನು ಏಕೆ ಮಾಡುವುದಿಲ್ಲ?” ಎಂದು ಪ್ರಶ್ನಿಸಲಾಗುತ್ತಿದೆ.

ತಿನ್ನುವ ಅನ್ನವನ್ನು ಹಾಳು ಮಾಡಬೇಡಿ ಎಂಬ ಸಂದೇಶವನ್ನು ನೀಡಿರುವುದನ್ನು ಬಲಪಂಥೀಯ ಗುಂಪಿನ ಟ್ವಿಟರ್‌ ಬಳಕೆದಾರರು ವಿರೋಧಿಸುತ್ತಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...