Homeಮುಖಪುಟಮಹಿಳೆಯರ ಮೇಲಿನ ದಾಳಿಗಳು ಮತ್ತಷ್ಟು ಹಿಂಸಾತ್ಮಕವಾಗುತ್ತಿವೆ: ಪ್ರಿಯಾಂಕಾ ಗಾಂಧಿ

ಮಹಿಳೆಯರ ಮೇಲಿನ ದಾಳಿಗಳು ಮತ್ತಷ್ಟು ಹಿಂಸಾತ್ಮಕವಾಗುತ್ತಿವೆ: ಪ್ರಿಯಾಂಕಾ ಗಾಂಧಿ

- Advertisement -
- Advertisement -

ದೆಹಲಿ ಮತ್ತು ಬಿಹಾರದಲ್ಲಿ ಮಹಿಳೆಯರ ಮೇಲೆ ಇತ್ತೀಚೆಗೆ ನಡೆದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಳವಳ ವ್ಯಕ್ತಪಡಿಸಿದ್ದು, ಇಂತಹ ದಾಳಿಗಳು ಹೆಚ್ಚಾಗುತ್ತಿರುವುದು ಮಾತ್ರವಲ್ಲದೆ ಇನ್ನಷ್ಟು ಹಿಂಸಾತ್ಮಕವಾಗುತ್ತಿವೆ ಎಂದು ಹೇಳಿದ್ದಾರೆ.

ಮಹಿಳೆಯರು ರಸ್ತೆಗಳಲ್ಲಿ ಸುರಕ್ಷಿತವಾಗಿ ಓಡಾಡುವುದನ್ನು ಖಚಿತಪಡಿಸಿಕೊಳ್ಳುವಂತೆ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದ್ದಾರೆ.

ಮಹಿಳೆಯರಿಗೆ ಯಾವಾಗಲೂ ಅಭದ್ರತೆಯ ವಾತಾವರಣವಿತ್ತು, ಈಗ ಅದು ಇನ್ನಷ್ಟು ಅಪಾಯಕಾರಿಯಾಗುತ್ತಿದೆ ಎಂದು ಪ್ರಿಯಾಂಕಾ ಹೇಳಿದರು.

“ಹಿಂಸೆ ಹೆಚ್ಚಾಗುತ್ತಿದೆ. ಮಹಿಳೆಯರಿಗೆ ಯಾವಾಗಲೂ ಸುರಕ್ಷತೆ ಇರಲಿಲ್ಲ, ಈಗ ಮಹಿಳೆಯರ ವಿರುದ್ಧದ ಹಿಂಸಾಚಾರವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮ ರಸ್ತೆಗಳಲ್ಲಿ ಮಹಿಳೆಯರ ಸುರಕ್ಷತೆಯನ್ನೇ ಖಚಿತಪಡಿಸಲು ಸಾಧ್ಯವಾಗದಿದ್ದರೆ ದೊಡ್ಡ ದೊಡ್ಡ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾತನಾಡಿ ಯಾವುದೇ ಪ್ರಯೋಜನವಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಅವರು ವಯನಾಡಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕೆಲವು ದಿನಗಳ ಪ್ರವಾಸಕ್ಕಾಗಿ ಕೇರಳಕ್ಕೆ ಆಗಮಿಸಿರುವ ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ, ಮಹಿಳಾ ಸುರಕ್ಷತೆಯ ವಿಷಯದ ಬಗ್ಗೆ ಪ್ರತಿಯೊಬ್ಬರೂ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ ಎಂದು ಹೇಳಿದರು.

“ಇದು ನಾವೆಲ್ಲರೂ ನಿಜವಾಗಿಯೂ ಆಲೋಚಿಸಬೇಕಾದ ವಿಷಯವಾಗಿದೆ. ಎಲ್ಲಿ ರಾಜ್ಯ ಸರ್ಕಾರಗಳಿವೆಯೋ ಅಲ್ಲಿ ಮತ್ತು ವಿಶೇಷವಾಗಿ ಕೇಂದ್ರ ಸರ್ಕಾರವು, ಮಹಿಳೆಯರು ಸುರಕ್ಷಿತವಾಗಿರುವುದನ್ನು ಹೇಗೆ ಖಚಿತಪಡಿಸಿಕೊಳ್ಳಲಿದ್ದೇವೆ ಎಂಬುದರ ಕುರಿತು ಆಲೋಚಿಸುವ ಅಗತ್ಯವಿದೆ” ಎಂದು ಅವರು ಹೇಳಿದರು.

ವಯನಾಡ್ ಪ್ರವಾಸದ ತಮ್ಮ ಯೋಜನೆಗಳ ಕುರಿತು ಮಾತನಾಡಿದ ಕಾಂಗ್ರೆಸ್ ಸಂಸದೆ, ಇದು ಸುದೀರ್ಘ ಪ್ರವಾಸವಾಗಿರುವುದರಿಂದ ಸಾಧ್ಯವಾದಷ್ಟು ಹೆಚ್ಚು ಜನರನ್ನು ಭೇಟಿಯಾಗಲು ಮತ್ತು ಸೂಕ್ತ ಕ್ರಮ ಕೈಗೊಳ್ಳಲು ಅವರ ಸಮಸ್ಯೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಆಶಿಸುವುದಾಗಿ ತಿಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್ ಅಂತಿಮ ಪಟ್ಟಿ 192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್ ಕಾಂಗ್ರೆಸ್- 115, ಬಿಜೆಪಿ-58 ಹಾಗೂ ಜೆಡಿ(ಎಸ್)ನ 19 ಕ್ಷೇತ್ರಗಳಲ್ಲಿ ಭಾರೀ ವ್ಯತ್ಯಾಸ

ಜನಪರ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ವಿರೋಧ, ಆತಂಕ ಹಾಗೂ ಆರೋಪಗಳ ಹೊರತಾಗಿಯೂ ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಗಿದಿದೆ. ದಿನಾಂಕ: 2026ರ ಅಕ್ಟೋಬರ್ 27 ರಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಾದ ಅನ್ಬುಕುಮಾರ್...

ಉತ್ತರ ಪ್ರದೇಶದಲ್ಲಿ 1.27 ಕೋಟಿ ಹಿಂದೂ ಮತದಾರರ ಹೆಸರು ಅಳಿಸಿದ ಆರೋಪ: ಯೋಗಿ ಆದಿತ್ಯನಾಥ್ ಅವರಿಂದ ದಾಖಲೆ, ದತ್ತಾಂಶ ಕೇಳಿದ ಸ್ವತಂತ್ರ ಆಯೋಗ

ನವದೆಹಲಿ: ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸುಮಾರು 1.27 ಕೋಟಿ ಹಿಂದೂ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಇದೀಗ...

ಐಸಿಜೆಯ ‘ನರಮೇಧ’ ತೀರ್ಪಿಗೆ ರೋಹಿಂಗ್ಯಾ ನಿರಾಶ್ರಿತರಿಂದ ಸ್ವಾಗತ: ತಾಯ್ನಾಡು ಮ್ಯಾನ್ಮಾರ್‌ಗೆ ಮರಳುವ ಇಂಗಿತ

ನವೆಂಬರ್ 19, 2026ರಂದು, ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯವಾದ ಇಂಟರ್‌ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ (ಐಸಿಜೆ) ರೋಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಮ್ಯಾನ್ಮಾರ್ ನರಮೇಧ ನಡೆಸಿದೆ ಎಂದು ಐತಿಹಾಸಿಕ ತೀರ್ಪು ನೀಡಿದೆ. ಅಂತಾರಾಷ್ಟ್ರೀಯ...

‘ಬಸವ ಮಂಟಪ’ ವಿವಾದ: ವಿದೇಶಕ್ಕೆ ತೆರಳಲು ಯತ್ನಿಸಿದ ಲೇಖಕ ರವಿ ಹಂಜ್ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ವಶಕ್ಕೆ; ಕೃತಿ ಮುಟ್ಟುಗೋಲು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಿಎಂ ಡಿಕೆಶಿ ಆದೇಶ

ಬೆಂಗಳೂರು, ನವೆಂಬರ್ 21: 12ನೇ ಶತಮಾನದ ಸಮಾಜ ಸುಧಾರಕ, ವಚನ ಚಳವಳಿಯ ಮುಂಚೂಣಿ ನಾಯಕ ಜಗಜ್ಯೋತಿ ಬಸವಣ್ಣನವರ ಕುರಿತು ಅವಹೇಳನಕಾರಿ ಮತ್ತು ಅವಮಾನಕರ ವಿಚಾರಗಳನ್ನು ಬರೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ‘ಬಸವ ಮಂಟಪ’...

ಸ್ಥಳಾಂತರಗೊಂಡ ರೋಹಿಂಗ್ಯಾಗಳ ಸುರಕ್ಷಿತ, ತ್ವರಿತ ವಾಪಸಾತಿಗೆ ಬೆಂಬಲ : ಭಾರತ ಪುನರುಚ್ಚಾರ

ಸ್ಥಳಾಂತರಗೊಂಡ ರೋಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್‌ಗೆ ಸುರಕ್ಷಿತವಾಗಿ ಮತ್ತು ಸುಸ್ಥಿರವಾಗಿ ವಾಪಸ್ ಕಳುಹಿಸುವುದಕ್ಕೆ ತನ್ನ ಬೆಂಬಲವನ್ನು ಭಾರತ ಶುಕ್ರವಾರ (ನ.20) ಪುನರುಚ್ಚರಿಸಿದೆ. ಮ್ಯಾನ್ಮಾರ್ ವಿರುದ್ಧದ ನರಮೇಧ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತನ್ನ ಐತಿಹಾಸಿಕ...

“ತೆರಿಗೆ ಇಳಿಸಿದರೂ ಉದ್ಯಮ ವಲಯ ಸಂಬಳ ಹೆಚ್ಚಿಸಿಲ್ಲ”: ಪ್ರಧಾನಿ ಮೋದಿ ಮಾತುಗಳಲ್ಲೇ ಸಾಬೀತಾಯ್ತು ‘ಟ್ರಿಕಲ್-ಡೌನ್’ ಆರ್ಥಿಕತೆಯ ವೈಫಲ್ಯ!

ಕೇಂದ್ರ ಸರ್ಕಾರವು ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿ ಉದ್ಯಮ ವಲಯಕ್ಕೆ ಭಾರಿ ರಿಯಾಯಿತಿ ನೀಡಿದ್ದರೂ, ಕಂಪನಿಗಳು ತಮ್ಮ ಲಾಭವನ್ನು ಕಾರ್ಮಿಕರೊಂದಿಗೆ ಹಂಚಿಕೊಳ್ಳದೆ ಕೇವಲ ತಮ್ಮ ತಿಜೋರಿ ತುಂಬಿಸಿಕೊಂಡಿವೆ ಎಂಬುದನ್ನು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ...

ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 13 ಮಂದಿ ಸಾವು; 346 ಜನರು ಆಸ್ಪತ್ರೆಗೆ ದಾಖಲು, ಹಲವರ ಸ್ಥಿತಿ ಗಂಭೀರ

ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಕಲುಷಿತ ಮದ್ಯ ಸೇವನೆಯಿಂದ ಸಂಭವಿಸಿರುವ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ನಕಲಿ ಮದ್ಯ ಸೇವನೆಯಿಂದ ಮೆಥನಾಲ್ ವಿಷಪೂರಿತಕ್ಕೆ ಒಳಗಾಗಿರುವ ಶಂಕೆಯ ಹಿನ್ನೆಲೆಯಲ್ಲಿ 346ಕ್ಕೂ ಹೆಚ್ಚು ಜನರನ್ನು...

SIR ಪೂರ್ವದ ಮತದಾರರ ಪಟ್ಟಿ ಬಳಕೆ : ರಾಜಸ್ಥಾನ ಪಂಚಾಯತ್ ಸಮರದಲ್ಲಿ ಕಾಂಗ್ರೆಸ್​ಗೆ ಭರ್ಜರಿ ಜಯ; ಬಿಜೆಪಿಗೆ ಹಿನ್ನಡೆ

ರಾಜಸ್ಥಾನದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ (ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್) ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಪ್ರತಿಪಕ್ಷ ಕಾಂಗ್ರೆಸ್ ಭರ್ಜರಿ ಮೇಲುಗೈ ಸಾಧಿಸಿದೆ. ಈ ಫಲಿತಾಂಶವು ರಾಜ್ಯದ ಆಡಳಿತಾರೂಢ ಬಿಜೆಪಿಗೆ ದೊಡ್ಡ ಮಟ್ಟದ...

ಎಸ್‌ಐಆರ್‌ನಲ್ಲಿ ಅಳಿಸುವಿಕೆಗೆ ಗುರುತಿಸಿದ್ದ 1,635 ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಮತ್ತೆ ಪ್ರತ್ಯಕ್ಷ; ಹಳೆಯ EPIC ಸಂಖ್ಯೆಗಳೇ ಮುಂದುವರಿಕೆ

ಬೆಂಗಳೂರು: ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಹೆಸರಿನಲ್ಲಿ ನಡೆದಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳು ನಡೆದಿರುವುದನ್ನು ದಿ ವೈರ್ ವರದಿ ಬಹಿರಂಗಪಡಿಸಿದೆ. ಬೆಂಗಳೂರಿನಲ್ಲಿ ಎಸ್‌ಐಆರ್ ವೇಳೆ ಗೈರುಹಾಜರಿ, ಸ್ಥಳಾಂತರ, ಮರಣ...

ದಲಿತ ತಾರತಮ್ಯ ಪ್ರಕರಣ: ತನಿಖಾಧಿಕಾರಿಯನ್ನು ಬದಲಿಸಲು ಮದ್ರಾಸ್ ಹೈಕೋರ್ಟ್ ಆದೇಶ

ರಾಮನಾಥಪುರಂ ಜಿಲ್ಲೆಯ ಗ್ರಾಮದೊಂದರಲ್ಲಿ ಸಾರ್ವಜನಿಕ ರಸ್ತೆಯನ್ನು ಬಳಸಲು ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ ಜನರು ಎದುರಿಸುತ್ತಿರುವ ತೊಂದರೆಗಳ ಕುರಿತು ಸಲ್ಲಿಸಲಾದ ದೂರಿನ ಬಗ್ಗೆ ಹೊಸದಾಗಿ ತನಿಖೆ ನಡೆಸಲು, ಪೊಲೀಸ್ ಉಪ ಅಧೀಕ್ಷಕ (ಡಿವೈಎಸ್‌ಪಿ)...