Homeಮುಖಪುಟನನ್ನನ್ನು ವಿಷವುಣಿಸಿ ಕೊಲ್ಲಲು ಪ್ರಯತ್ನಿಸಲಾಗಿತ್ತು: ಇಸ್ರೋ ಹಿರಿಯ ವಿಜ್ಞಾನಿ ಆರೋಪ

ನನ್ನನ್ನು ವಿಷವುಣಿಸಿ ಕೊಲ್ಲಲು ಪ್ರಯತ್ನಿಸಲಾಗಿತ್ತು: ಇಸ್ರೋ ಹಿರಿಯ ವಿಜ್ಞಾನಿ ಆರೋಪ

- Advertisement -
- Advertisement -

ಮೂರು ವರ್ಷಗಳ ಹಿಂದೆ ತನ್ನನ್ನು ವಿಷವುಣಿಸಿ ಕೊಲೆ ಮಾಡುವ ಪ್ರಯತ್ನ ಮಾಡಲಾಗಿತ್ತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಹಿರಿಯ ವಿಜ್ಞಾನಿಯಾಗಿರುವ ತಪನ್ ಮಿಶ್ರಾ ಅವರು ಆರೋಪಿಸಿದ್ದಾರೆ.

ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ’ಲಾಂಗ್‌ ಕೆಪ್ಟ್‌ ಸಿಕ್ರೆಟ್’ ಎಂಬ ಬರಹವನ್ನು ಬರೆದಿರುವ ತಮಪ‌‌ನ್ ಮಿಶ್ರಾ, “2017 ಮೇ 23 ರಂದು ಇಸ್ರೋ ಕೇಂದ್ರ ಕಚೇರಿಯಲ್ಲಿ ನಡೆದ ಪ್ರಚಾರ ಸಂದರ್ಶನದಲ್ಲಿ ಮಾರಣಾಂತಿಕ ಆರ್ಸೆನಿಕ್ ಟ್ರೈ ಆಕ್ಸೆೈಡ್‌ ನೀಡಿ ತನ್ನನ್ನು ಕೊಲೆ ಯತ್ನ ನಡೆಸಲಾಗಿತ್ತು. ವಿಷವನ್ನು ಬಹುಶಃ ದೋಸೆ, ಚಟ್ನಿ ಹಾಗೂ ಊಟದ ಬಳಿಕದ ಸ್ನ್ಯಾಕ್‌ಗಳಲ್ಲಿ ಬೆರೆಸಿರಬಹುದು” ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಖಾಸಗಿ ವಲಯಕ್ಕೆ ಬಾಹ್ಯಾಕಾಶ ಚಟುವಟಿಕೆಯಲ್ಲಿ ಅವಕಾಶ: ಇಸ್ರೋ ಮುಖ್ಯಸ್ಥ ಕೆ.ಶಿವನ್

ತಪನ್ ಮಿಶ್ರಾ ಈ ಹಿಂದೆ ಅಹಮದಾಬಾದ್‌ನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಪ್ಲಿಕೇಷನ್ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಇಸ್ರೋದಲ್ಲಿ ಹಿರಿಯ ಸಲಹೆಗಾರನಾಗಿ ದುಡಿಯುತ್ತಿರುವ ಅವರು ಈ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ ಎಂದು ತಿಳಿಸಿದ್ದಾರೆ.

ತಮ್ಮ ಆರೋಪಗಳಿಗೆ ಅವರು ಸಾಕ್ಷಿಯನ್ನೂ ನೀಡಿದ್ದು, ದೆಹಲಿ ಏಮ್ಸ್ ವೈದ್ಯಕೀಯ ವರದಿ ಸೇರಿದಂತೆ, ತಮ್ಮ ದೇಹಗಳಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಗಳ ಚಿತ್ರಗಳನ್ನೂ ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ವಿಷವುಣಿಸಿರುವ ಘಟನೆಯ ನಂತರ ತನಗೆ ತೀವ್ರ ಉಸಿರಾಟದ ತೊಂದರೆ, ಚರ್ಮದಲ್ಲಿ ಸೋಂಕು, ಶಿಲಿಂಧ್ರಗಳ ಸೋಂಕು ಸೇರಿದಂತೆ ತನಗೆ ಗಂಭೀರ ಆರೋಗ್ಯ ಸಮಸ್ಯೆ ಕಾಡಿರುವುದಾಗಿ ಹೇಳಿದ್ದಾರೆ.

ಒಬ್ಬ ಪರಿಣಿತಿ ಹೊಂದಿರುವ ವಿಜ್ಞಾನಿಯನ್ನು ನಾಶ ಮಾಡುವ ಉದ್ದೇಶದಿಂದ ಈ ದಾಳಿಯನ್ನು ಬೇಹುಗಾರಿಕಾ ಸಂಸ್ಥಗಳು ನಡೆಸಿರಬಹುದು ಎಂದು ಆರೋಪಿಸಿರುವ ಅವರು, ಘಟನೆಗಳ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ವಿಜ್ಞಾನಿಯ ಹೇಳಿಕಗೆ ಇಸ್ರೋ ಯಾವುದೇ ಪ್ರತಿಕ್ರಿಯೆಯನ್ನು ಇನ್ನೂ ನೀಡಿಲ್ಲ.

ಇದನ್ನೂ ಓದಿ: ರಾತ್ರಿಯ ಹೊತ್ತಿನಲ್ಲಿ ಸೂರ್ಯಗ್ರಹಣ ಮಾಡಿಸುವ ಮಾಧ್ಯಮಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...