Homeಮುಖಪುಟಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಬೆಟ್ಟಿಂಗ್ ದಂಧೆ ಆರೋಪ: ಬಿಜೆಪಿಯ ಉಚ್ಛಾಟಿತ ನಾಯಕನ ಬಂಧನ

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಬೆಟ್ಟಿಂಗ್ ದಂಧೆ ಆರೋಪ: ಬಿಜೆಪಿಯ ಉಚ್ಛಾಟಿತ ನಾಯಕನ ಬಂಧನ

ಬಿಜೆಪಿಯ ಮಾಜಿ ನಾಯಕ ರಾಮ್ ಬಿಹಾರಿ ರಾಠೋಡ್ ಹಲವಾರು ಕ್ರಿಮಿನಲ್ ದಂಧೆಗಳಲ್ಲಿ ನಿರತರಾಗಿದ್ದರು. ಪೊಲೀಸರು ಈತನ ಅರೆಸ್ಟ್ ಮಾಡುತ್ತಿದ್ದಂತೆ ಬಿಜೆಪಿಯಿಂದ ಉಚ್ಛಾಟಿಸಲಾಗಿದೆ.

- Advertisement -
- Advertisement -

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಕಳೆದ ವಾರ ಜನವರಿ 13ರಂದು ಉತ್ತರ ಪ್ರದೇಶ ಪೊಲೀಸರಿಂದ ಬಂಧಿತನಾಗಿದ್ದ ರಾಮ್ ಬಿಹಾರಿ, ಕ್ರಿಕೆಟ್ ಬೆಟ್ಟಿಂಗ್ ಜಾಲ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಯುಪಿಯ ಉನ್ನತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕಳೆದ ವಾರ ಇಬ್ಬರು ಅಪ್ರಾಪ್ತ ಬಾಲಕರು ತಮ್ಮ ಮೇಲೆ ನಿರಂತರವಾಗಿ ನಡೆದ ಲೈಂಗಿಕ ದೌರ್ಜನ್ಯದ ಕುರಿತು ದೂರು ನೀಡಿದ ನಂತರ, ರಾಮ್ ಬಿಹಾರಿಯನ್ನು ಜನವರಿ 13 ರಂದು ಬಂಧಿಸಲಾಗಿತ್ತು. ಆಗಲೇ ಬಿಜೆಪಿ ಈತನನ್ನು ಉಚ್ಛಾಟನೆ ಮಾಡಿದೆ.

ಬಂಧನದ ನಂತರ ಇನ್ನೊಂದು ದೂರು ದಾಖಲಾಗಿದೆ. ಇದಲ್ಲದೇ ಕಳೆದ 6-7 ವರ್ಷಗಳಿಂದ ರಾಮ್ ಬಿಹಾರಿ ರಾಠೋಡ್ ಹಲವಾರು ಕ್ರಿಮಿನಲ್ ದಂಧೆಗಳಲ್ಲಿ ನಿರತನಾಗಿದ್ದ ವಿವರಗಳು ಪೊಲೀಸರಿಗೆ ಲಭ್ಯವಾಗಿವೆ.
ಜಲೌನ್ ಜಿಲ್ಲೆಯ ಕೊಂಚ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ತನ್ನ ಮನೆಯಿಂದ ಈತ ಕ್ರಿಕೆಟ್ ಬೆಟ್ಟಿಂಗ್ ಜಾಲ ನಡೆಸುತ್ತಿದ್ದ ಎಂಬ ಆರೋಪವನ್ನು ಪೊಲೀಸರು ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಂಚ್ ಠಾಣಾಧಿಕಾರಿ ಇಮ್ರಾನ್ ಖಾನ್, ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಸಾಕ್ಷ್ಯ ಗಳನ್ನು ಕಲೆ ಹಾಕುತ್ತಿದ್ದೇವೆ. ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯೂ ಪ್ರಕರಣ ದಾಖಲಿಸುವ ಚಿಂತನೆ ನಡೆದಿದೆ’ ಎಂದಿದ್ದಾರೆ.

ಈತನ ವಿರುದ್ಧ ಇನ್ನೂ ಹಲವಾರು ಅಪ್ರಾಪ್ತ ಬಾಲಕರು ಮತ್ತು ಕೆಲವು ಮಹಿಳೆಯರು ಕೂಡ ದೂರು ನೀಡಲು ಮುಂದೆ ಬಂದಿದು, ಪೊಲೀಸರನ್ನು ಸಂರ್ಕಿಸಿದ್ದಾರೆ.

ಜಲೌನ್ ಜಿಲ್ಲೆಯ ಬಿಜೆಪಿ ಅಧ್ಯಕ್ಷ ರಾಮೇಂದ್ರ ಸಿಂಗ್, ‘ಈತನನ್ನು ಕೊಂಚ್ ಘಟಕದ ಉಪಾಧ್ಯಕ್ಷನನ್ನಾಗಿ ಹೇಗೆ ನೇಮಿಸಲಾಯಿತು, ಇದರ ಹಿಂದೆ ಯಾರ ಶಿಫಾರಸು ಇದೆ ಎಂದು ಪರಿಶೀಲಿಸುತ್ತಿದ್ದೇವೆ’ ಎಂದಿದ್ದಾರೆ.


ಇದನ್ನೂ ಓದಿ: ’ತಲೆಗಳನ್ನು ಕತ್ತರಿಸುವ ಸಮಯ’ – ಹಿಂಸಾಚಾರಕ್ಕೆ ಕರೆ ನೀಡಿದ ನಟಿ ಕಂಗನಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...