Homeಮುಖಪುಟಪ್ರಯಾಗರಾಜ್ ತಲುಪಿದ ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ನ್ಯಾಯ್ ಯಾತ್ರೆ'

ಪ್ರಯಾಗರಾಜ್ ತಲುಪಿದ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’

- Advertisement -
- Advertisement -

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಭಾನುವಾರ ಸಂಜೆ 4.00 ರ ಸುಮಾರಿಗೆ ಉತ್ತರ ಪ್ರದೇಶದ ಪ್ರಯಾಗ್ರಾಜ್ ತಲುಪಿತು. ರಾಹುಲ್ ಗಾಂಧಿ, ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಮತ್ತು ಇತರ ಪಕ್ಷದ ನಾಯಕರು ಯಾತ್ರೆಯ ವೇಳೆ ತೆರೆದ ಜೀಪಿನಲ್ಲಿ ಚಲಿಸಿದರು.

ವಿಮಾನ ನಿಲ್ದಾಣದಿಂದ ನೇರವಾಗಿ ಸ್ವರಾಜ್ ಭವನ ತಲುಪಿದ ರಾಹುಲ್ ಗಾಂಧಿ, ಅಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಯಾತ್ರೆ ಆರಂಭಿಸಿದರು. ಯಾತ್ರೆಯು ನೇತ್ರಂ ಚೌರಾಹಾದ ಮೂಲಕ ಸಾಗಿ ಲಕ್ಷ್ಮಿ ಟಾಕೀಸ್ ತಲುಪಲಿದ್ದು, ಅಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದು, ಇದಾದ ಬಳಿಕ ಯಾತ್ರೆ ಮುಂದುವರಿಯಲಿದೆ ಎಂದು ಪಕ್ಷದ ಮುಖಂಡರು ತಿಳಿಸಿದರು.

ಆನೆ ದಾಳಿ ಸಂತ್ರದಸ್ತರನ್ನು ಭೇಟಿಯಾಗಲು ವಯನಾಡ್‌ಗೆ ತೆರಳಿದ್ದ ರಾಹುಲ್ ಗಾಂಧಿ, ಇಂದು ಪ್ರಯಾಗ್‌ರಾಜ್‌ನ ‘ಆನಂದ ಭವನ’ದಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಪುನರಾರಂಭಿಸಲಿದ್ದಾರೆ.

ವಯನಾಡಿನಲ್ಲಿ ಕಾಡು ಆನೆಗಳ ದಾಳಿಯಿಂದ ಸಾವನ್ನಪ್ಪಿದ ಸಾರ್ವಜನಿಕ ಪ್ರತಿಭಟನೆಯಿಂದಾಗಿ ವಾರಣಾಸಿಯಲ್ಲಿ ರಾಹುಲ್ ಗಾಂಧಿ ತಮ್ಮ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯನ್ನು ಹಠಾತ್ತನೆ ನಿಲ್ಲಿಸಿದ ನಂತರ, ಆನೆ ದಾಳಿಯಿಂದ ಸಾವನ್ನಪ್ಪಿದ ಅರಣ್ಯ ಇಲಾಖೆ ಸಿಬ್ಬಂದಿ ವಿಪಿ ಪಾಲ್ ಅವರ ಮನೆಗೆ ಭೇಟಿ ನೀಡಿದರು. ನಂತರ ಅವರು ಉತ್ತರ ಪ್ರದೇಶಕ್ಕೆ ಮರಳಿದ್ದು, ಆನಂದ ಭವನದಿಂದ ತಮ್ಮ ಯಾತ್ರೆಯನ್ನು ಪುನರಾರಂಭಿಸುತ್ತಾರೆ.

ಮಾನವ-ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕೋರಿ ಸ್ಥಳೀಯರ ತೀವ್ರ ಪ್ರತಿಭಟನೆಯ ನಂತರ ವಾರಣಾಸಿಯಲ್ಲಿದ್ದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಹಠಾತ್ತನೆ ಸ್ಥಗಿತಗೊಳಿಸಿದ ನಂತರ ಅವರು ಕ್ಷೇತ್ರಕ್ಕೆ ಆಗಮಿಸಿದರು. ವಯನಾಡ್ ವೈದ್ಯಕೀಯ ಕಾಲೇಜಿನಲ್ಲಿ ಸೌಲಭ್ಯಗಳ ಕೊರತೆಯನ್ನು ರಾಹುಲ್ ಗಾಂಧಿ ಎತ್ತಿ ತೋರಿಸಿದರು; ಇದು ಗಮನಿಸಲೇಬಾಎಕಾದ ವಿಷಯವಾಗಿದೆ ಎಂದು ಹೇಳಿದರು.

ನಂತರ, ಜಿಲ್ಲೆಯ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಅವಲೋಕಿಸಿದರು ಮತ್ತು ಸಂತ್ರಸ್ತರಿಗೆ ಖಚಿತವಾದ ಪರಿಹಾರವನ್ನು ಹೆಚ್ಚು ವಿಳಂಬವಿಲ್ಲದೆ ಹಸ್ತಾಂತರಿಸಲು ಪ್ರಯತ್ನಿಸಿದರು. ರಾಹುಲ್ ಗಾಂಧಿ ಅವರು  ವಯನಾಡು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

ಮಂಗಳವಾರ ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯನ್ನು ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸೇರಲಿದ್ದಾರೆ. ಕಾಂಗ್ರೆಸ್ ಮತ್ತು ಎಸ್‌ಪಿ ಶೀಘ್ರದಲ್ಲೆ ರಾಜ್ಯದಲ್ಲಿ ತಮ್ಮ ಸೀಟು ಹಂಚಿಕೆ ವ್ಯವಸ್ಥೆಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಖಿಲೇಶ್ ಅವರು ಕಾಂಗ್ರೆಸ್‌ಗೆ 11 ಸ್ಥಾನಗಳನ್ನು ಘೋಷಿಸಿದಾಗ ಜನವರಿ 27 ರಿಂದ ಎರಡು ಪಕ್ಷಗಳ ನಡುವೆ ಸೀಟು ಹಂಚಿಕೆ ವಿಚಾರ ಚರ್ಚಾ ವಿಷಯವಾಗಿದೆ.

ರಾಹುಲ್ ಅವರ ಯಾತ್ರೆ ಸಂಜೆ ಹರಿಸೆಂಗಂಜ್‌ನಲ್ಲಿ ನಿಲ್ಲುತ್ತದೆ ಮತ್ತು ಮೌಯಿಮಾದ ಸಕ್ರಮೌದಲ್ಲಿ ರಾತ್ರಿ ತಂಗುವ ನಂತರ ಯಾತ್ರೆ ಮರುದಿನ ಪ್ರತಾಪ್‌ಗಢ ಜಿಲ್ಲೆಯನ್ನು ಪ್ರವೇಶಿಸಲಿದೆ. ಶನಿವಾರ, ವಾರಣಾಸಿಯಲ್ಲಿ ಪಕ್ಷದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುವಾಗ ರಾಹುಲ್ ಗಾಂಧಿ ಒಟ್ಟಾಗಿ ಕೆಲಸ ಮಾಡುವ ಶಕ್ತಿಯನ್ನು ಒತ್ತಿ ಹೇಳಿದರು.

ಇಂದು ಮಧ್ಯಾಹ್ನ 3 ಗಂಟೆಗೆ ನೆಹರು ಕುಟುಂಬದ ಪೂರ್ವಿಕರ ಮನೆಯಾದ ಆನಂದ ಭವನದಿಂದ ರಾಹುಲ್ ಗಾಂಧಿ ಅವರು ಯಾತ್ರೆಯ ನೇತೃತ್ವ ವಹಿಸಲಿದ್ದು, ನಗರದ ಕತ್ರಾ, ನೇತ್ರಂ, ಲಕ್ಷ್ಮಿ ಟಾಕೀಸ್, ತೇಲಿಯಾರ್‌ಗಂಜ್ ಮತ್ತು ಮಲಕಾ, ಸೊರಾನ್ ಪ್ರದೇಶದ ಮೂಲಕ ಸಾಗಲಿದ್ದಾರೆ.

ಇದನ್ನೂ ಓದಿ; ಇಂಡಿಯಾ ಬ್ಲಾಕ್‌ ಸೇರುವಂತೆ ಮಾಯಾವತಿ ನೇತೃತ್ವದ ಬಿಎಸ್‌ಪಿಗೆ ಕಾಂಗ್ರೆಸ್ ಆಹ್ವಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...