Homeಮುಖಪುಟಸರಕಾರಿ ಉದ್ಯೋಗದ ಖಾಸಗೀಕರಣಕ್ಕೆ ವಿರೋಧ: ಸಚಿವರ ಮೇಲೆ ಶಾಯಿ ಎರಚಿದ ಭೀಮ್ ಆರ್ಮಿ ಕಾರ್ಯಕರ್ತ

ಸರಕಾರಿ ಉದ್ಯೋಗದ ಖಾಸಗೀಕರಣಕ್ಕೆ ವಿರೋಧ: ಸಚಿವರ ಮೇಲೆ ಶಾಯಿ ಎರಚಿದ ಭೀಮ್ ಆರ್ಮಿ ಕಾರ್ಯಕರ್ತ

- Advertisement -
- Advertisement -

ಸಾರ್ವಜನಿಕ ವಲಯದ ಉದ್ಯೋಗಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ನೀತಿ ವಿರುದ್ಧ ಪ್ರತಿಭಟಿಸಿದ ಭೀಮ್ ಆರ್ಮಿಯ ಕಾರ್ಯಕರ್ತನೋರ್ವ ಮಹಾರಾಷ್ಟ್ರದ ಸಚಿವ ಚಂದ್ರಕಾಂತ ಪಾಟೀಲ ಅವರ ಮೇಲೆ ನೀಲಿ ಶಾಯಿ ಎರಚಿರುವ ಘಟನೆ ನಡೆದಿದೆ.

ಸೊಲ್ಲಾಪುರದ ಸರ್ಕಾರಿ ತಂಗುದಾಣದಲ್ಲಿ ಭೀಮ್ ಆರ್ಮಿಯ ಕಾರ್ಯಕರ್ತ ಅಜಯ್ ಮೆಂಡರ್ಗಿಕರ್ ಸೋಲಾಪುರ ಜಿಲ್ಲೆಯ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಮೇಲೆ ನೀಲಿ ಶಾಯಿ ಎರಚಿದ್ದಾರೆ. ಅವರನ್ನು ತಕ್ಷಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಚಂದ್ರಕಾಂತ ಪಾಟೀಲ ಅವರು ಇತ್ತೀಚೆಗೆ ಸೋಲಾಪುರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು ಮತ್ತು ಸೋಲಾಪುರಕ್ಕೆ ಅವರ ಮೊದಲ ಭೇಟಿಯ ವೇಳೆಯೇ ಘಟನೆ ನಡೆದಿದೆ.

ಚಂದ್ರಕಾಂತ ಪಾಟೀಲ ಅವರ ಆಗಮನದ ಸಂದರ್ಭದಲ್ಲಿ ಪೊಲೀಸರು ವಿಶ್ರಾಂತಿ ಗೃಹಕ್ಕೆ ಭೇಟಿ ನೀಡುವವರಿಗೆ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ನಡೆಸಿದ್ದರು. ಭದ್ರತಾ ಕ್ರಮಗಳ ನಡುವೆಯೂ ಅಜಯ್ ಮೆಂಡರ್ಗಿಕರ್ ಅವರು ಪೊಲೀಸ್ ಸರ್ಪಗಾವಲನ್ನು ದಾಟಿ ಸಚಿವರತ್ತ ಮಸಿ ಎರಚಿದ್ದಾರೆ. ಮಸಿ ಎಸೆದ ಘಟನೆಗೂ ಮುನ್ನ ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

ಚಂದ್ರಕಾಂತ ಪಾಟೀಲ ಸೊಲ್ಲಾಪುರ ಜಿಲ್ಲೆಗೆ ಎರಡು ದಿನಗಳ ಕಾಲ ವಾಸ್ತವ್ಯಕ್ಕೆ ಬಂದಿದ್ದರು. ಬಿಗಿ ಭದ್ರತೆಯ ನಡುವೆ ಸರ್ಕಾರಿ ತಂಗುದಾಣಕ್ಕೆ ಆಗಮಿಸಿದ ಬಳಿಕ ಈ ಘಟನೆ ನಡೆದಿದೆ. ಪ್ರತಿಭಟನಾಕಾರರು ಗುತ್ತಿಗೆ ಆಧಾರಿತ ಉದ್ಯೋಗ ನೇಮಕಾತಿಗೆ ವಿರೋಧ ವ್ಯಕ್ತಪಡಿಸಿದ್ದು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.

ಇದನ್ನು ಓದಿ: ಗಾಝಾವನ್ನು ರಕ್ಷಿಸಿ, ಸಾವಿರಾರು ಮಂದಿ ಸಾಯುತ್ತಾರೆ: ತುರ್ತು ಸಹಾಯಕ್ಕೆ ಮನವಿ ಮಾಡಿದ UNRWA ಸಿಬ್ಬಂದಿಗಳು

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...