Homeಮುಖಪುಟಭೂಪೇಶ್ ಬಘೇಲ್ ನನಗೆ ದುಬೈಗೆ ತೆರಳುವಂತೆ ಹೇಳಿದ್ದರು: ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ಆರೋಪಿ ಹೇಳಿಕೆ

ಭೂಪೇಶ್ ಬಘೇಲ್ ನನಗೆ ದುಬೈಗೆ ತೆರಳುವಂತೆ ಹೇಳಿದ್ದರು: ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ಆರೋಪಿ ಹೇಳಿಕೆ

- Advertisement -
- Advertisement -

ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ಪ್ರಮುಖ ಆರೋಪಿ ಶುಭಂ ಸೋನಿ ತನ್ನ ವಿಡಿಯೋ ಹೇಳಿಕೆಯಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ದುಬೈಗೆ ಹೋಗುವಂತೆ ಸಲಹೆ ನೀಡಿದ್ದಾರೆ ಎಂದು  ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಎನ್‌ಡಿಟಿವಿ ವರದಿಯ ಪ್ರಕಾರ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಬೇಕಾಗಿರುವ ಮಹದೇವ್ ಬೆಟ್ಟಿಂಗ್ ಆಪ್ ಪ್ರಕರಣದ ಆರೋಪಿ ಶುಭಂ ಸೋನಿ ದುಬೈನಿಂದ ವಿಡಿಯೋ ವೈರಲ್‌ ಮಾಡಿದ್ದಾರೆ.

ವೀಡಿಯೊ ಸಂದೇಶದಲ್ಲಿ ಮಹದೇವ್ ಬೆಟ್ಟಿಂಗ್ ಆಪ್ ಪ್ರಕರಣದ ಪ್ರಮುಖ ಆರೋಪಿ ಹೇಳಿಕೆಯನ್ನು ನೀಡಿದ್ದು, ಬಂಧನಕ್ಕೆ ಸಂಬಂಧಿಸಿದಂತೆ ಸಹಾಯಕ್ಕಾಗಿ ಕಾಂಗ್ರೆಸ್ ನಾಯಕನನ್ನು ಸಂಪರ್ಕಿಸಿದಾಗ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ದುಬೈಗೆ ತೆರಳುವಂತೆ ಹೇಳಿದ್ದಾರೆ ಮತ್ತು ಅಲ್ಲಿ ಜೂಜಾಟವನ್ನು ಸ್ಥಾಪಿಸಲು ಪ್ರೋತ್ಸಾಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಯುಎಇ ಮೂಲದ ಮಹಾದೇವ್ ಆಪ್ ಪ್ರವರ್ತಕರಿಂದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ 508 ಕೋಟಿ ರೂಪಾಯಿ ನಗದು ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಈ ಹಿಂದೆ ಹೇಳಿಕೊಂಡಿತ್ತು.

ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರೊಂದಿಗೆ ಸಭೆ ನಾನು ನಡೆಸಿದ್ದು, ಛತ್ತೀಸ್‌ಗಢ ಮುಖ್ಯಮಂತ್ರಿಯ ರಾಜಕೀಯ ಸಲಹೆಗಾರ ವಿನೋದ್ ವರ್ಮಾ ಅವರು ಸಭೆಯನ್ನು ಏರ್ಪಡಿಸಿದ್ದರು ಎಂದು ಶುಭಂ ಸೋನಿ ವಿಡಿಯೋ ಸಂದೇಶದಲ್ಲಿ ಆರೋಪಿಸಿದ್ದಾರೆ.

ಸೋನಿ ಮಾತು ಮುಂದುವರಿಸುತ್ತಾ, ಮಹಾದೇವ್ ಬೆಟ್ಟಿಂಗ್ ಅಪ್ಲಿಕೇಶನ್‌ನ ಮಾಲೀಕ ನಾನೇ ಆಗಿದ್ದು, ಅದನ್ನು 2021ರಲ್ಲಿ ಸ್ಥಾಪಿಸಲಾಗಿದೆ. ಅದನ್ನು ಸಾಬೀತುಪಡಿಸಲು ತಮ್ಮ ಬಳಿ ದಾಖಲೆಗಳಿವೆ ಎಂದು ಹೇಳಿದ್ದಾರೆ.

ನಾನು 2021ರಲ್ಲಿ ಅಪ್ಲಿಕೇಶನನ್ನು ಪ್ರಾರಂಭಿಸಿದೆ ಮತ್ತು ಭಿಲಾಯ್‌ನಲ್ಲಿ ನನ್ನ ಜೂಜಿನ ವ್ಯವಹಾರವು ಉತ್ತಮವಾಗಿ ನಡೆಯುತ್ತಿತ್ತು. ಅದು ಚಿಕ್ಕದಾಗಿ ಪ್ರಾರಂಭವಾಯಿತು ಆದರೆ ದೊಡ್ಡದಾಗಿ ಬೆಳೆಯಿತು. ನಮ್ಮ ಬಳಿ ಹೆಚ್ಚು ಹಣ ಬಂದಿದೆ. ಕೆಲವು ಸಮಯ ವ್ಯವಹಾರ ಸುಗಮವಾಗಿ ನಡೆಯಿತು. ಆದರೆ ನಂತರ ನನ್ನ ಸ್ನೇಹಿತರು ತೊಂದರೆಗೆ ಸಿಲುಕಿದರು. ನಾನು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಮತ್ತು ವಿನೋದ್ ವರ್ಮಾ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ನನ್ನ ವ್ಯವಹಾರವನ್ನು ದುಬೈಗೆ ವಿಸ್ತರಿಸಲು ಅವರು ನನಗೆ ಹೇಳಿದರು ಎಂದು ಅವರು ಹೇಳಿದ್ದಾರೆ.

ದುಬೈಗೆ ತೆರಳಿದ ನಂತರ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಭಿಲಾಯ್‌ನ ಇಬ್ಬರು ವ್ಯಕ್ತಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದೇನೆ. ದುಬೈನಲ್ಲಿ ನನ್ನ ಜೂಜಾಟದ ವ್ಯವಹಾರವು ಉತ್ತಮವಾಗಿ ನಡೆಯುತ್ತಿರುವಾಗ, ಸಹಚರರು ಭಿಲಾಯ್‌ನಲ್ಲಿ ಬಂಧಿಸಲ್ಪಟ್ಟಿದ್ದರು. ಆದ್ದರಿಂದ ಮತ್ತೆ ಛತ್ತೀಸ್‌ಗಢಕ್ಕೆ ಬಂದು ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಅಗರವಾಲ್ ಅವರನ್ನು ಭೇಟಿಯಾದೆ. ಅವರು ಭಾಗೇಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುಂತೆ ಹೇಳಿದ್ದರು ಮತ್ತು 508 ಕೋಟಿ ರೂ.ಕೊಡುವಂತೆ ಕೇಳಿದ್ದರು ಎಂದು ಹೇಳಿದ್ದಾರೆ.

508 ಕೋಟಿ ನೀಡುವುದರ ಜೊತೆಗೆ ಪ್ರಶಾಂತ್ ಜೀ ನನಗೆ ಹೇಳಿದ್ದನ್ನು ನಾನು ಮಾಡಿದ್ದೇನೆ ಆದರೂ ನಾನು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ನಾನು ನನ್ನ ಲಿಖಿತ ಹೇಳಿಕೆಯಲ್ಲಿ ಎಲ್ಲಾ ವಿವರಗಳನ್ನು ನೀಡಿದ್ದೇನೆ. ರಾಜಕೀಯ ವ್ಯವಸ್ಥೆಯಲ್ಲಿನ ಈ ಪರಿಸ್ಥಿತಿಯಿಂದ ಭಾರತಕ್ಕೆ ಹಿಂತಿರುಗಿ ಬರಲು ನನಗೆ ಸಹಾಯ ಬೇಕು ಎಂದು ಅವರು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಇದನ್ನು ಓದಿ: ರಾಜ್ಯಪಾಲರು ಬಿಲ್‌ಗೆ ಅಂಕಿತ ಹಾಕಲು ವಿಳಂಬದ ಬಗ್ಗೆ ಸುಪ್ರೀಂ ಅಸಮಾಧಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...