Homeಅಂತರಾಷ್ಟ್ರೀಯಡಾ. ವಿವೇಕ್ ಮೂರ್ತಿ ನಾಯಕತ್ವದಲ್ಲಿ ’ಕೊರೊನಾ ಟಾಸ್ಕ್‌‌‌ಫೋರ್ಸ್‌’ ಘೋಷಿಸಲಿರುವ ಬೈಡೆನ್!

ಡಾ. ವಿವೇಕ್ ಮೂರ್ತಿ ನಾಯಕತ್ವದಲ್ಲಿ ’ಕೊರೊನಾ ಟಾಸ್ಕ್‌‌‌ಫೋರ್ಸ್‌’ ಘೋಷಿಸಲಿರುವ ಬೈಡೆನ್!

ಬರಾಕ್ ಒಬಾಮಾ ಆಡಳಿತದಲ್ಲಿ ನಾಲ್ಕು ವರ್ಷಗಳ ಕಾಲ ಅಮೆರಿಕದ ಉನ್ನತ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಇವರನ್ನು 2017 ರಲ್ಲಿ ಡೊನಾಲ್ಡ್ ಟ್ರಂಪ್ ವಜಾಗೊಳಿಸಿದ್ದರು.

- Advertisement -
- Advertisement -

ಅಮೆರಿಕದ ಹೊಸ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್ ಇಂದು ತನ್ನದೇ ಆದ ಕೊರೊನಾ ವೈರಸ್ ತಡೆ ಕಾರ್ಯಪಡೆಯ 12 ವ್ಯಕ್ತಿಗಳ  ಹೆಸರನ್ನು ಘೋಷಿಸಲಿದ್ದಾರೆ ಎಂದು ಬೈಡೆನ್ ಪರವಾಗಿ ಪ್ರಚಾರಾಭಿಯಾನ ಮಾಡಿದ ತಂಡ ಹೇಳಿದೆ.

ಅಮೆರಿಕದ ಮಾಜಿ ಶಸ್ತ್ರಚಿಕಿತ್ಸಕ ಜನರಲ್ ಡಾ. ವಿವೇಕ್ ಮೂರ್ತಿ ಮತ್ತು ಮಾಜಿ ಆಹಾರ ಮತ್ತು ಔಷಧ ಆಡಳಿತ ಆಯುಕ್ತ ಡಾ. ಡೇವಿಡ್ ಕೆಸ್ಲರ್ ಈ ಕಾರ್ಯನಿರತ ಗುಂಪಿನ ಸಹ-ಅಧ್ಯಕ್ಷರಾಗಿರುತ್ತಾರೆ ಎಂದು NBS ವರದಿ ಮಾಡಿದೆ.

“ಬೈಡೆನ್ ತನ್ನ ಚುನಾವಣಾ ಪ್ರಚಾರದ ಭರವಸೆಯನ್ನು ಈಡೇರಿಸುವ ಗುರಿಯನ್ನು ಹೊಂದಿದ್ದು, ಕೊರೊನಾ ವಿರುದ್ಧದ ಹೋರಾಟವನ್ನು ಗೆಲ್ಲುತ್ತಾರೆ” ಎಂದು ಬೈಡೆನ್ ಪರ ಪ್ರಚಾರ ಅಭಿಯಾನ ನಡೆಸಿದ ತಂಡದ ಉಪ ವ್ಯವಸ್ಥಾಪಕ ಕೇಟ್ ಬೆಡಿಂಗ್‌ಫೀಲ್ಡ್ ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಟ್ರಂಪ್ ಸೋತಂತೆ ಬಿಹಾರದಲ್ಲಿ ಬಿಜೆಪಿ ಸೋಲುತ್ತದೆ: ಶಿವಸೇನೆ

“ಅವರು ನಾಳೆ ಅಧಿಕೃತವಾಗಿ ತಮ್ಮ ಕೆಲಸ ಪ್ರಾರಂಭಿಸಲಿದ್ದು, ಮಾಜಿ ಸರ್ಜನ್ ಜನರಲ್ ವಿವೇಕ್ ಮೂರ್ತಿ ಸೇರಿದಂತೆ ಮೂರು ಸಹ-ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಪಡೆಯೊಂದನ್ನು ಘೋಷಿಸಲಿದ್ದಾರೆ” ಎನ್ನಲಾಗಿದೆ.

ವಿವೇಕ್ ಮೂರ್ತಿ 2015 ರಲ್ಲಿ ಬರಾಕ್ ಒಬಾಮಾ ಆಡಳಿತದಲ್ಲಿ ನಾಲ್ಕು ವರ್ಷಗಳ ಕಾಲ ಅಮೆರಿಕದ ಉನ್ನತ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಆದರೆ 2017 ರಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದರು. ವಿವೇಕ್ ಮೂರ್ತಿ 19 ನೇ ಸರ್ಜನ್ ಜನರಲ್ ಆಗಿದ್ದು, ಈ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ.

ಇಬ್ಬರು ಅಧಿಕಾರಿಗಳನ್ನು ಉಲ್ಲೇಖಿಸಿರುವ CNN, ತಂಡಲ್ಲಿ ವಿವೇಕ್ ಮೂರ್ತಿ ಮತ್ತು ಡೇವಿಡ್ ಕೆಸ್ಲರ್ ಅವರ ಜೊತೆಗೆ ಯೇಲ್ ವಿಶ್ವವಿದ್ಯಾಲಯದ ಮಾರ್ಸೆಲ್ಲಾ ನುನೆಜ್-ಸ್ಮಿತ್ ಕೂಡಾ ಇರಲಿದ್ದಾರೆ ಎಂದು ವರದಿ ಮಾಡಿದೆ.

ಟ್ರಂಪ್ ಕೊರೊನಾ ಬಿಕ್ಕಟ್ಟು ನಿಭಾಯಿಸಿರುವುದು ಸೇರಿದಂತೆ, ಮಾಸ್ಕ್ ಧರಿಸಲು ನಿರಾಕರಿಸಿರುವುದು ಹಾಗೂ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಸಂಕಷ್ಟವನ್ನು ಕಡಿಮೆಗೊಳಿಸದೇ ಇರುವುದನ್ನು ಟೀಕಿಸಿದ್ದ ಬೈಡೆನ್, ಕೊರೊನಾವನ್ನು ನಿಭಾಯಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ವಿಜಯೋತ್ಸವ ಭಾಷಣದಲ್ಲಿ ಹೇಳಿದ್ದರು. “ನಮ್ಮ ಕೆಲಸವು ಕೊರೊನಾವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ” ಎಂದಿದ್ದರು.

ಇದನ್ನೂ ಓದಿ: ಭಾರತ ಮೂಲದ ಕಮಲಾ ಹ್ಯಾರಿಸ್; ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷೆಯಾದ ಕಥೆ!

ವಿಶ್ವದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣ ವರದಿಯಾಗಿರುವ ಅಮೆರಿಕದಲ್ಲಿ 1.2 ಕೋಟಿ ಕೊರೊನಾ ಪ್ರಕರಣಗಳು ದಾಖಲಾಗಿದವೆ. ಇದುವರೆಗೂ ಅಲ್ಲಿ 2.4 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಈ ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆ(WHO)ಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ , ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಅವರನ್ನು ಅಭಿನಂದಿಸಿದ್ದು, ಅವರೊಂದಿಗೆ ಕೆಲಸ ಮಾಡಲು WHO ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಂಬಂಧ ಹೊಂದಲು ನಿರಾಕರಿಸಿದ್ದ ಟ್ರಂಟ್ ಆರೋಗ್ಯ ಸಂಸ್ಥೆಯೂ ಚೀನಾದ ಗುಲಾಮನಾಗಿದೆ ಎಂದು ಆರೋಪಿಸಿದ್ದರು. ಆದರೆ ಜೋ ಬೈಡೆನ್ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಅಮೆರಿಕದ ಸದಸ್ಯತ್ವವನ್ನು ಮರುಸ್ಥಾಪಿಸುವುದಾಗಿ ಹೇಳಿದ್ದಾರೆಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿದೆ.


ಇದನ್ನೂ ಓದಿ: ಅಮೆರಿಕದ 46 ನೇ ಅಧ್ಯಕ್ಷರಾಗಿ ಜೋ ಬಿಡೆನ್ – ಯಾರಿವರು? ; ಸಂಕ್ಷಿಪ್ತ ಪರಿಚಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಬಡವರೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಮುಸ್ಲಿಮರ ಬಗ್ಗೆ ಮಾತ್ರ ಏಕೆ ಮಾತನಾಡುತ್ತಾರೆ..’; ಪ್ರಧಾನಿ ಮೋದಿ...

0
'ದೇಶದ ಬಡವರು ಅವರ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಟೀಕಿಸಿದ್ದಾರೆ. 'ಪ್ರತಿಪಕ್ಷಗಳ ಇಂಡಿಯಾ...