Homeಮುಖಪುಟಲೈಂಗಿಕ ಕಿರುಕುಳದ ಆರೋಪಿ ಬಿಜೆಪಿಯ ಸಂಸದ ಬ್ರಿಜ್ ಭೂಷಣ್ ಸಿಂಗ್‌ನಿಂದ ಮಹಾ ರ್ಯಾಲಿ

ಲೈಂಗಿಕ ಕಿರುಕುಳದ ಆರೋಪಿ ಬಿಜೆಪಿಯ ಸಂಸದ ಬ್ರಿಜ್ ಭೂಷಣ್ ಸಿಂಗ್‌ನಿಂದ ಮಹಾ ರ್ಯಾಲಿ

- Advertisement -
- Advertisement -

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಮತ್ತು ಬಿಜೆಪಿಯ ಕೈಸರ್‌ಗಂಜ್ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಏಳು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ. ಅವರ ವಿರುದ್ಧ ವಿರೋಧ ಪಕ್ಷಗಳು, ನಾಗರಿಕರು ಮತ್ತು ರೈತ ಸಂಘಟನೆಗಳು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರು ಜೂನ್ 5ರಂದು ಅಯೋಧ್ಯೆಯಲ್ಲಿ ರ್ಯಾಲಿ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ. ಆದರೆ, ಅಯೋಧ್ಯೆ ಬಿಜೆಪಿ ಘಟಕವು ಈ ರ‍್ಯಾಲಿಯಿಂದ ದೂರ ಸರಿದಿದೆ.

ಬ್ರಿಜ್ ಭೂಷಣ್ ಅವರು ಅಯೋಧ್ಯೆಯ ರಾಮ್ ಕಥಾ ಪಾರ್ಕ್‌ನಲ್ಲಿ ಜನ ಚೇತನ ಮಹಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಸಾಧುಗಳು, ಕಾನೂನು ತಜ್ಞರು ಹಾಗೂ ಶಿಕ್ಷಣ ತಜ್ಞರನ್ನು ಆಹ್ವಾನಿಸಲಾಗಿದೆ. ದೆಹಲಿ ಪೊಲೀಸರು ಸಂಸದರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿರುವ ಸಮಯದಲ್ಲಿ ರ್ಯಾಲಿ ನಡೆಸಲಾಗುತ್ತಿದೆ. ಎಫ್‌ಐಆರ್ ದಾಖಲಾದಾಗಿನಿಂದ ಸಿಂಗ್ ರಾಜಕೀಯ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಆದರೆ, ಅವರು ಅಯೋಧ್ಯೆ ರ್ಯಾಲಿಗೆ ಜನರನ್ನು ಆಹ್ವಾನಿಸಲು ಕಳೆದ ವಾರದಿಂದ ಯುಪಿಯ ಅವಧ್ ಪ್ರದೇಶದ ಗೊಂಡಾ, ಅಯೋಧ್ಯೆ, ಬಹ್ರೈಚ್ ಮತ್ತು ಬಸ್ತಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ.

”ಬಿಜೆಪಿಗೂ ಈ ರ್ಯಾಲಿಗೂ ಸಂಬಂಧವಿಲ್ಲ. ಅದರ ನಾಯಕರು ನಮ್ಮನ್ನು ಕೇಳಿದರೆ ಮಾತ್ರ ನಾವು ಭಾಗವಹಿಸುತ್ತೇವೆ. ಇಲ್ಲಿಯವರೆಗೆ ನಮಗೆ ಅಂತಹ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಬಿಜೆಪಿಯ ಅಯೋಧ್ಯೆ ಜಿಲ್ಲಾಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ.

ಈ ಬಗ್ಗೆ ಕೈಸರ್‌ಗಂಜ್ ಸಂಸದ ಸಂಜೀವ್ ಸಿಂಗ್ ಮಾತನಾಡಿ, ”ಇದು ರಾಜಕೀಯ ರ್ಯಾಲಿ ಅಲ್ಲ. ಯಾರನ್ನಾದರೂ ಮಾನಹಾನಿ ಮಾಡಲು ಕಾನೂನನ್ನು ದುರುಪಯೋಗಪಡಿಸಇಕೊಳ್ಳುವವರನ್ನು ನಾವು ಹೇಗೆ ಎದುರಿಸಬೇಕು ಎಂಬುದರ ಕುರಿತು ಸಾಧುಗಳು ಮತ್ತು ಬುದ್ಧಿಜೀವಿಗಳೊಂದಿಗೆ ಈ ಮಹಾ ರ್ಯಾಲಿಯಲ್ಲಿ ಚರ್ಚೆ ನಡೆಯಲಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾರ್ಕೋ ಪರೀಕ್ಷೆಗೆ ಒಳಗಾಗುತ್ತೇನೆ, ಆದರೆ ಒಂದು ಷರತ್ತು.. : ಬ್ರಿಜ್ ಭೂಷಣ್ ಶರಣ್ ಸಿಂಗ್

ಸುಳ್ಳು ಆರೋಪಗಳನ್ನು ಹೊರಿಸುವವರನ್ನು ಪ್ರಸ್ತುತ ಐಪಿಸಿ ಸೆಕ್ಷನ್ 182 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಆದರೆ ಶಿಕ್ಷೆಯು ಅಪರಾಧಕ್ಕೆ ಅನುಗುಣವಾಗಿಲ್ಲ ಎಂದು ಸಂಸದರ ಸಹವರ್ತಿ ಹೇಳಿದರು. ”ಐಪಿಸಿ ಸೆಕ್ಷನ್ 182 ರ ಅಡಿಯಲ್ಲಿ ಒದಗಿಸಲಾದ ಕ್ರಮವು ಸಾಕಾಗುವುದಿಲ್ಲ. ರ್ಯಾಲಿಯಲ್ಲಿ, ಕಾನೂನನ್ನು ತಿದ್ದುಪಡಿ ಮಾಡಲು ಮತ್ತು ಅಂತಹ ಪ್ರಕರಣಗಳಲ್ಲಿ ಶಿಕ್ಷೆಯನ್ನು ಕಠಿಣಗೊಳಿಸುವಂತೆ ಒತ್ತಾಯಿಸಲಾಗುವುದು. ಬ್ರಿಜ್ ಭೂಷಣ್ ವಿರುದ್ಧದ ಆರೋಪಗಳು ಸುಳ್ಳು ಎಂದು ಅವರು ಹೇಳಿದರು. ಈ ರ್ಯಾಲಿಗೆ ಸಾಧುಗಳ ಭ್ರಾತೃತ್ವವು ಕರೆಯನ್ನು ನೀಡಿತು ಮತ್ತು ಸಂಸದರು ಇದರ ವ್ಯವಸ್ಥೆಗಳನ್ನು ಮಾತ್ರ ಮಾಡುತ್ತಿದ್ದಾರೆ” ಎಂದು ಸಂಜೀವ್ ಸಿಂಗ್ ಹೇಳಿದ್ದಾರೆ.

ಬಿಜೆಪಿ ಇದುವರೆಗೆ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಸಂಸದನ ವಿರುದ್ಧ ಕ್ರಮಕೈಗೊಂಡಿಲ್ಲ ಮತ್ತು ಮೂಲಗಳ ಪ್ರಕಾರ ಅವರಿಗೆ ಶೋಕಾಸ್ ನೋಟಿಸ್ ಕೂಡ ನೀಡಿಲ್ಲ. ಕಳೆದ ವಾರ, ಲಕ್ನೋದಲ್ಲಿ ನಡೆದ ಬಿಜೆಪಿಯ ಅವಧ್ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಿಂಗ್ ಭಾಗವಹಿಸಿದ್ದರು.

ಕೈಸರ್‌ಗಂಜ್ ಸಂಸದ ಮತ್ತು ಅವರ ರ್ಯಾಲಿಯ ಬಗ್ಗೆ ಪಕ್ಷದ ಅನೇಕ ನಾಯಕರು ಅಸಹನೀಯರಾಗಿದ್ದಾರೆ ಎಂದು ಬಿಜೆಪಿಯ ಮೂಲಗಳು ಹೇಳಿವೆ. ಮತ್ತೊಂದೆಡೆ ಬಿಜೆಪಿ ನಾಯಕರೊಬ್ಬರು, ”2024ರ ಲೋಕಸಭೆ ಚುನಾವಣೆಗೆ ಮತ್ತೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಆದ್ದರಿಂದ, ಈ ರ್ಯಾಲಿಯನ್ನು ನಡೆಸುವ ಮೂಲಕ ತಮಗಾದ ಹಾನಿಯನ್ನು ನಿಯಂತ್ರಣ ಮಾಡುವ ಕ್ರಮವಾಗಿದೆ. ಇದು ಜನರು ಮತ್ತು ಸಾಧು ಸಮುದಾಯದ ಬೆಂಬಲವನ್ನು ಪಡೆಯುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...