Homeಮುಖಪುಟಬಿಹಾರ : ಶೇ.75 ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

ಬಿಹಾರ : ಶೇ.75 ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

- Advertisement -
- Advertisement -

ಬಿಹಾರದಲ್ಲಿ ಮೀಸಲಾತಿ ಕೋಟವನ್ನು ಶೇಖಡಾ 65ರಿಂದ ಶೇ.75ಕ್ಕೆ ಹೆಚ್ಚಳ ಮಾಡುವ ಮಸೂದೆಗೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅಂಕಿತ ಹಾಕಿದ್ದಾರೆ. ರಾಜ್ಯಪಾಲರ ಅನುಮೋದನೆ ದೊರೆಯುತ್ತಿದ್ದಂತೆ ಸರ್ಕಾರ ಅಧಿಸೂಚನೆ ಬಿಡುಗಡೆ ಮಾಡಿದೆ ಎಂದು ವರದಿಗಳು ಹೇಳಿವೆ.

ಇದರೊಂದಿಗೆ, ಬಿಹಾರದ ಎಲ್ಲಾ ಸರ್ಕಾರಿ ಉದ್ಯೋಗಗಳು ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಪ್ರಕ್ರಿಯೆಗಳಲ್ಲಿ ಮೀಸಲು ವರ್ಗದ ಜನರಿಗೆ ಶೇ.65 ಮತ್ತು ಆರ್ಥಿಕವಾಗಿ ದುರ್ಬಲರಿಗೆ ಶೇ.10 ಮೀಸಲಾತಿಗೆ ಅವಕಾಶ ದೊರೆಯಲಿದೆ.

ನವೆಂಬರ್‌ 8ರಂದು ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ, ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ), ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿ) ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಅಸ್ತಿತ್ವದಲ್ಲಿರುವ ಮೀಸಲಾತಿಯ ಮಿತಿಯನ್ನು ಶೇ. 50 ರಿಂದ ಶೇ. 65ಕ್ಕೆ ಹೆಚ್ಚಿಸುವ ಮಸೂದೆಯನ್ನು ಮಂಡಿಸಲಾಗಿತ್ತು. ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಹೆಚ್ಚಿಸುವ ಈ ಮಸೂದೆಗಳನ್ನು ಧ್ವನಿ ಮತದ ಮೂಲಕ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿತ್ತು.

ಮಸೂದೆಯ ಪ್ರಕಾರ, ಎಸ್‌ಟಿಗಳಿಗೆ ಈಗಿರುವ ಮೀಸಲಾತಿ ಪ್ರಮಾಣ ದ್ವಿಗುಣಗೊಳ್ಳಲಿದೆ ಮತ್ತು ಎಸ್‌ಸಿಗಳಿಗೆ ಶೇಕಡಾ 16 ರಿಂದ 20 ಕ್ಕೆ ಹೆಚ್ಚಾಗಲಿದೆ. ಇಬಿಸಿ ಮೀಸಲಾತಿ ಶೇ. 18 ರಿಂದ ಶೇ. 25ಕ್ಕೆ ಮತ್ತು ಒಬಿಸಿ ಮೀಸಲಾತಿ ಶೇ. 12ರಿಂದ ಶೇ.15 ಕ್ಕೆ ಹೆಚ್ಚಳವಾಗಲಿದೆ.

ಸಮೀಕ್ಷೆಯ ಪ್ರಕಾರ ಜನಸಂಖ್ಯೆಯ ಶೇ.19.7 ರಷ್ಟಿರುವ ಎಸ್‌ಸಿಗಳು ಶೇ.20ರಷ್ಟು ಮೀಸಲಾತಿ ಪಡೆಯಬೇಕು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಸದನದಲ್ಲಿ ಪ್ರಸ್ತಾಪಿಸಿದ್ದರು. ಇದು ಈಗಿರುವ ಶೇ.16ಕ್ಕಿಂತ ಹೆಚ್ಚು. ಜನಸಂಖ್ಯೆಯಲ್ಲಿ ಶೇ. 1.7 ರಷ್ಟಿರುವ ಎಸ್ಟಿಗಳಿಗೆ ಮೀಸಲಾತಿಯನ್ನು ಶೇ 1ರಿಂದ 2ಕ್ಕೆ ದ್ವಿಗುಣಗೊಳಿಸಬೇಕು. ಜನಸಂಖ್ಯೆಯ ಶೇ. 27 ರಷ್ಟಿರುವ ಒಬಿಸಿಗಳು ಶೇ. 12 ಮೀಸಲಾತಿ ಪಡೆಯಲಿದ್ದಾರೆ ಮತ್ತು ಜನಸಂಖ್ಯೆಯ ಶೇ. 36 ರಷ್ಟಿರುವ ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿಗಳು) ಶೇ 18 ರ ಮೀಸಲಾತಿ ಪಡೆಲಿದ್ದಾರೆ ಎಂದು ಸಿಎಂ ಹೇಳಿದ್ದರು.

ಇದನ್ನೂ ಓದಿ : ಲೈಂಗಿಕ ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರಿಗೆ 5 ಕೋಟಿ ರೂ.: ಸುಪ್ರೀಂ ಕೋರ್ಟ್‌ಗೆ ಮಣಿಪುರ ಸರ್ಕಾರದ ಹೇಳಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...