Homeಮುಖಪುಟಬಿಹಾರ: ದೂರು ನೀಡಲು ಬಂದ ಮಹಿಳೆಯಿಂದ ಮಸಾಜ್‌; ಪೊಲೀಸ್‌ ಅಧಿಕಾರಿ ಅಮಾನತು

ಬಿಹಾರ: ದೂರು ನೀಡಲು ಬಂದ ಮಹಿಳೆಯಿಂದ ಮಸಾಜ್‌; ಪೊಲೀಸ್‌ ಅಧಿಕಾರಿ ಅಮಾನತು

ಈ ಅಮಾನವೀಯ ಕೃತ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

- Advertisement -
- Advertisement -

ಬಿಹಾರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೂರು ನೀಡಲು ಹೋದ ಮಹಿಳೆಯಿಂದ ಪೊಲೀಸ್ ಠಾಣೆಯೊಳಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ರಾಜ್ಯದ ಸಹರ್ಸಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನೌಹಟ್ಟಾ ಪೊಲೀಸ್ ಠಾಣೆಯ ದರ್ಹಾರ್ ಔಟ್‌ಪೋಸ್ಟ್‌ನ ಹಿರಿಯ ಅಧಿಕಾರಿ ಶಶಿಭೂಷಣ ಸಿನ್ಹಾ ಅವರು ಅರೆಬೆತ್ತಲೆಯಾಗಿ ಮಸಾಜ್ ಮಾಡಿಸಿಕೊಂಡಿದ್ದಾರೆ. ಜೊತೆಗೆ ಫೋನ್‌ನಲ್ಲಿ ಮಾತನಾಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಪೊಲೀಸ್ ಔಟ್‌ಪೋಸ್ಟ್‌ನಲ್ಲಿರುವ ವಸತಿ ಸಮುಚ್ಛಯದಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ವಿಡಿಯೊದೊಂದಿಗೆ ಸುದ್ದಿಯನ್ನು ಪ್ರಕಟಿಸಿರುವ ಎನ್‌ಡಿಟಿವಿ, “ವೀಡಿಯೊದ ಅಧಿಕೃತತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ” ಎಂದು ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಿಡಿಯೋ ವೈರಲ್ ಆದ ನಂತರ ಸಹರ್ಸಾ ಪೊಲೀಸ್ ವರಿಷ್ಠಾಧಿಕಾರಿ ಲಿಪಿ ಸಿಂಗ್ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ.

ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸ್‌ ವ್ಯವಸ್ಥೆಗೆ ಈ ಘಟನೆಯಿಂದಾಗಿ ಮುಜುಗರ ಉಂಟಾಗಿದೆ. ತನ್ನ ಮಗನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಪೊಲೀಸರಲ್ಲಿ ಮನವಿ ಮಾಡಲು ಹೋದ ಮಹಿಳೆ ದರ್ಹಾರ್ ಪೊಲೀಸ್ ಠಾಣೆಯಲ್ಲಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ‘ಹಿಂದೂಸ್ತಾನ್‌ ಟೈಮ್‌’ ವರದಿ ಮಾಡಿದೆ.

ಪೊಲೀಸ್ ಅಧಿಕಾರಿಯನ್ನು ಎಸ್‌ಐ (ಸಬ್ ಇನ್‌ಸ್ಪೆಕ್ಟರ್) ಶಶಿಭೂಷಣ ಸಿನ್ಹಾ ಎಂದು ಗುರುತಿಸಲಾಗಿದೆ. ಸಹರ್ಸಾ ಜಿಲ್ಲಾ ಎಸ್ಪಿ (ಪೊಲೀಸ್ ಸೂಪರಿಂಟೆಂಡೆಂಟ್) ಲಿಪಿ ಸಿಂಗ್ ಈ ವಿಡಿಯೊವನ್ನು ನೋಡಿ, ತನಿಖೆಗೆ ಆದೇಶಿಸಿದ್ದಾರೆ.

ಇದನ್ನೂ ಓದಿರಿ: ಕೆ.ಆರ್ ಪೇಟೆ: ದಲಿತರು ರಸ್ತೆ ಬಳಸದಂತೆ ಸವರ್ಣಿಯ ಕುಟುಂಬದಿಂದ ಅಡ್ಡಿ – ಕಣ್ಮುಚ್ಚಿ ಕುಳಿತ ತಾಲ್ಲೂಕು ಆಡಳಿತ

“ಎಸ್‌ಡಿಪಿಒ ಸಂತೋಷ್‌ಕುಮಾರ್‌ ಸಲ್ಲಿಸಿದ ತನಿಖಾ ವರದಿಯ ನಂತರ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ನಾವು ಎಸ್‌ಐ ವಿರುದ್ಧ ವಿವರವಾದ ವರದಿಯನ್ನು ಕೋರಿದ್ದೇವೆ. ಅಧಿಕಾರಿಯು ಇಲಾಖೆಯ ತನಿಖಾ ಪ್ರಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ” ಎಂದು ಎಸ್‌ಪಿ ತಿಳಿಸಿದ್ದಾರೆ.

ಒಬ್ಬ ಮಹಿಳೆ ಅಧಿಕಾರಿಗೆ ಮಸಾಜ್ ಮಾಡುತ್ತಿದ್ದರೆ ಇನ್ನೊಬ್ಬರು ಅವರ ಮುಂದೆ ಕುಳಿತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಪೊಲೀಸ್ ಅಧಿಕಾರಿ ವಕೀಲರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ಕೇಳಬಹುದು. ಮಹಿಳೆ ಬಡವರಾಗಿದ್ದು, 10,000 ರೂ.ಗಳನ್ನು ಜಾಮೀನಿಗೆ ವ್ಯವಸ್ಥೆ ಮಾಡಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಎಫ್‌ಐಆರ್ ಪ್ರತಿ, ಸಂಪರ್ಕ ವಿವರಗಳು ಇತ್ಯಾದಿಗಳನ್ನು ಸೋಮವಾರ ಕಳುಹಿಸಲಾಗುವುದು ಎಂದು ಅವರು ಹೇಳುವುದನ್ನು ಕೇಳಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...