Homeಮುಖಪುಟಮೊಘಲ್‌ ಕಾಲದ ಹೆಸರುಳ್ಳ 40 ಗ್ರಾಮಗಳ ಮರುನಾಮಕರಣಕ್ಕೆ ದೆಹಲಿ ಬಿಜೆಪಿ ಆಗ್ರಹ

ಮೊಘಲ್‌ ಕಾಲದ ಹೆಸರುಳ್ಳ 40 ಗ್ರಾಮಗಳ ಮರುನಾಮಕರಣಕ್ಕೆ ದೆಹಲಿ ಬಿಜೆಪಿ ಆಗ್ರಹ

ಸಿಬಿಎಸ್‌ಇ ಪಠ್ಯದಲ್ಲಿ ಮೊಘಲ್‌ ಇತಿಹಾಸಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ. ಈಗ ದೆಹಲಿಯಲ್ಲಿ ಅಧಿಕಾರದಲ್ಲಿರುವ ಎಎಪಿ ಸರ್ಕಾರದ ಮುಂದೆ ಹೆಸರು ಬದಲಾವಣೆಯ ಒತ್ತಾಯವನ್ನು ಬಿಜೆಪಿ ಮಾಡಿದೆ.

- Advertisement -
- Advertisement -

ಮೊಘಲ್ ಸಾಮ್ರಾಟರ ಅವಧಿಯ ಹೆಸರುಗಳನ್ನು ಸೂಚಿಸುವ 40 ಗ್ರಾಮಗಳಿಗೆ ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿ ದೆಹಲಿ ಬಿಜೆಪಿಯು ಎಎಪಿ ನೇತೃತ್ವದ ದೆಹಲಿ ಸರ್ಕಾರವನ್ನು ಆಗ್ರಹಿಸಿದೆ.

2020ರ ಈಶಾನ್ಯ ದೆಹಲಿ ಗಲಭೆಯಲ್ಲಿ ಸಾವಿಗೀಡಾದ ಐಬಿ ಸಿಬ್ಬಂದಿ ಅಂಕಿತ್ ಶರ್ಮಾ ಮತ್ತು ಕಾನ್‌ಸ್ಟೆಬಲ್ ರತನ್ ಲಾಲ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು, ಕಲಾವಿದರು ಮತ್ತು ಹುತಾತ್ಮರ ಹೆಸರನ್ನು ಆ ಗ್ರಾಮಗಳಿಗೆ ಇಡಬೇಕು ಎಂದು ಆಗ್ರಹಿಸಲಾಗಿದೆ.

ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ದೆಹಲಿ ಪೊಲೀಸ್ ಅಧಿಕಾರಿ ಮೋಹನ್ ಚಂದ್ ಶರ್ಮಾ, ಕಾರ್ಗಿಲ್ ಯುದ್ಧದ ಸಮಯದಲ್ಲಿ ಹುತಾತ್ಮರಾದ ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಮಹರ್ಷಿ ವಾಲ್ಮೀಕಿ, ಗಾಯಕರಾದ ಲತಾ ಮಂಗೇಶ್ಕರ್ ಮತ್ತು ಮೊಹಮ್ಮದ್ ರಫಿ, ಕ್ರಿಕೆಟಿಗ ಯಶಪಾಲ್ ಶರ್ಮಾ, ಅಥ್ಲೀಟ್ ಮಿಲ್ಕಾ ಸಿಂಗ್ ಅವರ ಹೆಸರುಗಳನ್ನು ಬಿಜೆಪಿ ಪ್ರಾಸ್ತಾಪಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಜನರು ಮೊಘಲರ ಕಾಲದ ಹೆಸರುಗಳನ್ನು ಬದಲಾಯಿಸಬೇಕೆಂದು ಬಯಸುತ್ತಿರುವ ಕಾರಣ ನಾವು ಹಳ್ಳಿಗಳಿಗೆ ಬೇರೆ ಹೆಸರು ಇಡಲು ಪ್ರಸ್ತಾವನೆಯನ್ನು ಕಳುಹಿಸುತ್ತಿದ್ದೇವೆ” ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ತಿಳಿಸಿದ್ದಾರೆ.

“ಮೊಘಲ ಸಾಮ್ರಾಜ್ಯಕ್ಕೆ ಸಂಬಂಧಿಸಿದ” ಮತ್ತು “ಗುಲಾಮತನದ ಮನಸ್ಥಿತಿಯನ್ನು ಸಂಕೇತಿಸುವ” ಹೆಸರುಗಳನ್ನು ಹೊಂದಿರುವ 40 ಹಳ್ಳಿಗಳಿವೆ ಎಂದು ಅವರು ಆರೋಪಿಸಿದ್ದಾರೆ.

“ಜಿಯಾ ಸರೈ, ಜಮ್ರೂದ್‌ಪುರ, ಮಸೂದ್‌ಪುರ್, ಜಾಫರ್‌ಪುರ್ ಕಲಾನ್, ತಾಜ್‌ಪುರ, ನಜಾಫ್‌ಗಢ್, ನೆಬ್ ಸರೈ ಮುಂತಾದ ಹೆಸರುಗಳಿರುವ ಗ್ರಾಮಗಳಿವೆ” ಎಂದು ಗುಪ್ತಾ ಹೇಳಿದ್ದಾರೆ.

“ಇನ್ನು ಮುಂದೆ ಈ ಗುಲಾಮಗಿರಿಯ ಸಂಕೇತಗಳನ್ನು ಮುಂದುವರಿಸಲು ಈ ಹಳ್ಳಿಗಳ ಯುವಕರು ಬಯಸುವುದಿಲ್ಲ. ದೇಶದ ಮಹಾನ್ ಪುತ್ರರು, ಪ್ರಖ್ಯಾತ ವ್ಯಕ್ತಿಗಳ ಹೆಸರಿನಿಂದ ಗುರುತಿಸಲ್ಪಡಬೇಕು ಎಂದು ಈ ಗ್ರಾಮಗಳ ಯುವಕರು ಬಯಸುತ್ತಾರೆ” ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಒಂದು ದಿನ ಮೊದಲು ಮೊಹಮ್ಮದ್‌ಪುರ ಗ್ರಾಮದ ಹೆಸರನ್ನು ಮಾದವಪುರ ಎಂದು ಬದಲಾಯಿಸುವಂತೆ ಒತ್ತಾಯಿಸಿ ಬೋರ್ಡ್ ಕೂಡ ಹಾಕಲಾಗಿತ್ತು. ಗುಪ್ತಾ ಸೈಯದ್ ಉಲ್ ಅಜೈಬ್, ಹೌಜ್ ಖಾಸ್ ಮತ್ತು ನಜಾಫ್‌ಗಢ್ ಹೆಸರನ್ನು ಸಹ ಬದಲಾಯಿಸಬೇಕು ಎಂದು ಒತ್ತಾಯಿಸಿದ್ದರು.

ಪಂಚಾಯಿತಿಗಳು ಮತ್ತು ಸ್ಥಳೀಯರೊಂದಿಗೆ ಸಮಾಲೋಚಿಸಿದ ನಂತರ ಪ್ರಸ್ತಾವನೆಯನ್ನು ಮುಂದಿಡಲಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ. “ದಿಲ್ಲಿ ಸಿಎಂ ರಾಜಕೀಯ ಮಾಡುವುದಿಲ್ಲ. ನಮ್ಮ ಪ್ರಸ್ತಾಪವನ್ನು ಸ್ವೀಕರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ” ಎಂದು ತಿಳಿಸಿದ್ದಾರೆ.

ಸ್ಥಳೀಯ ಬಿಜೆಪಿ ಕೌನ್ಸಿಲರ್ ಭಗತ್ ಸಿಂಗ್ ಟೋಕಾಸ್ ಅವರು ಮೊಹಮ್ಮದ್‌ಪುರ ಗ್ರಾಮವನ್ನು ಮಾಧವಪುರ ಎಂದು ಘೋಷಿಸುವ ಫಲಕಗಳನ್ನು ಹಾಕಿದ್ದರು. ಈ ಪ್ರದೇಶವನ್ನು ಮರುನಾಮಕರಣ ಮಾಡಲು ಕೆಲವು ಸ್ಥಳೀಯರೊಂದಿಗೆ ಗುಪ್ತಾ ಕಾರ್ಯಕ್ರಮದಲ್ಲಿ ಹಾಜರಿದ್ದರು. ಹೆಸರುಗಳನ್ನು ಬದಲಾಯಿಸುವ ಅಂತಿಮ ಅಧಿಕಾರವು ದೆಹಲಿ ಸರ್ಕಾರಕ್ಕಿದೆ.

ಅಭಿವೃದ್ಧಿ ರಾಜಕೀಯವನ್ನು ಬದಿಗೆಸೆದಿರುವ ಬಿಜೆಪಿ ಕೋಮು ಕೇಂದ್ರಿತ ಹೆಸರು ಬದಲಾವಣೆಯ ರಾಜಕೀಯವನ್ನು ಮುಂದುವರಿಸಿದೆ ಎಂಬ ಆರೋಪಗಳು ಸಾಮಾನ್ಯವಾಗಿವೆ.

ಸಿಬಿಎಸ್‌ಇ ಪಠ್ಯದಲ್ಲಿ ಮೊಘಲ್ ಇತಿಹಾಸಕ್ಕೆ ಕತ್ತರಿ

ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಶನ್‌ (ಸಿಬಿಎಸ್‌ಇ) ಪಠ್ಯದಲ್ಲಿ ಮೊಘಲ್‌ ಇತಿಹಾಸಕ್ಕೆ ಕಡಿವಾಣ ಹಾಕುವ ನಿರ್ಧಾರವನ್ನು ಇತ್ತೀಚೆಗೆ ತೆಗೆದುಕೊಳ್ಳಲಾಗಿತ್ತು.

ಮೊಘಲ್‌ ಸಾಮ್ರಾಜ್ಯವನ್ನು ವೈಭವೀಕರಿಸುವ ಮತ್ತು ಇಸ್ಲಾಂ ಧರ್ಮದ ವಿಸ್ತರಣೆಯ ಕುರಿತು ಪಾಕಿಸ್ತಾನಿ ಕವಿಯ ನಜ್ಮ್‌ ಅವರ ಪಠ್ಯವನ್ನು ಹೈಯರ್‌ ಸೆಕೆಂಡರಿ ಪಠ್ಯಕ್ರಮದಿಂದ ಸಿಬಿಎಸ್‌ಇ ತೆಗೆದಿದೆ.

ಹೊಸ ಶೈಕ್ಷಣಿಕ ಅವಧಿಗೆ ಪ್ರಕಟಿಸಿದ ಪಠ್ಯಕ್ರಮದಲ್ಲಿ ಇತಿಹಾಸಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ. ಎನ್‌ಸಿಇಆರ್‌ಟಿ ಪುಸ್ತಕದ 10 ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕಗಳಿಂದ ಫೈಜ್ ಅಹಮದ್ ಫೈಜ್ ಅವರ ಶಾಯರಿ ಮತ್ತು 11ನೇ ತರಗತಿಯ ಇತಿಹಾಸ ಪುಸ್ತಕದಿಂದ ಇಸ್ಲಾಂ ಧರ್ಮದ ಸ್ಥಾಪನೆ, ಉದಯ ಮತ್ತು ವಿಸ್ತರಣೆಯ ಪಠ್ಯವನ್ನು ತೆಗೆದುಹಾಕಲಾಗಿದೆ. ಅದೇ ಸಮಯದಲ್ಲಿ, 12ನೇ ತರಗತಿ ಪುಸ್ತಕದಿಂದ ಮೊಘಲ್ ಸಾಮ್ರಾಜ್ಯದ ಆಡಳಿತ ಅಧ್ಯಾಯದಲ್ಲಿ ತಿದ್ದುಪಡಿಗಳನ್ನು ಮಾಡಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...