Homeಮುಖಪುಟಬಿಜೆಪಿಗೆ 10 ವರ್ಷಗಳ ಕಾಲ 'ಮಿಯಾ' ಮತಗಳ ಅಗತ್ಯವಿಲ್ಲ: ಅಸ್ಸಾಂ ಸಿಎಂ ಶರ್ಮಾ

ಬಿಜೆಪಿಗೆ 10 ವರ್ಷಗಳ ಕಾಲ ‘ಮಿಯಾ’ ಮತಗಳ ಅಗತ್ಯವಿಲ್ಲ: ಅಸ್ಸಾಂ ಸಿಎಂ ಶರ್ಮಾ

- Advertisement -
- Advertisement -

ಮುಂದಿನ 10 ವರ್ಷಗಳವರೆಗೆ ಬಾಲ್ಯವಿವಾಹದಂತಹ ಆಚರಣೆಗಳನ್ನು ಕೈಬಿಡುವವರೆಗೆ “ಮಿಯಾ” ಜನರ ಮತಗಳು ಬಿಜೆಪಿಗೆ ಅಗತ್ಯವಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

“ಮಿಯಾ” ಎಂಬ ಪದವನ್ನು ದಕ್ಷಿಣ ಏಷ್ಯಾದಾದ್ಯಂತ ಮುಸ್ಲಿಮರು “ಸಂಭಾವಿತ” ಎಂದು ಅರ್ಥೈಸಲು ಬಳಸಿದರೆ, ಅಸ್ಸಾಂನಲ್ಲಿ ಈ ಪದವನ್ನು ಬಂಗಾಳಿ ಮೂಲದ ಮುಸ್ಲಿಮರನ್ನು ವಿವರಿಸಲು ಜನಾಂಗೀಯ ನಿಂದನೆಯಾಗಿ ನೋಡಲಾಗುತ್ತದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮಾ, ”ಚುನಾವಣೆಗಳು ಬಂದಾಗ, ನಮಗೆ ಮತ ಹಾಕಬೇಡಿ ಎಂದು ನಾನು ಅವರನ್ನು ವಿನಂತಿಸುತ್ತೇನೆ. ನೀವು ಯಾವಾಗ ಕುಟುಂಬ ಯೋಜನೆಯನ್ನು ಅನುಸರಿಸುತ್ತೀರಿ, ಬಾಲ್ಯ ವಿವಾಹವನ್ನು ನಿಲ್ಲಿಸುತ್ತೀರಿ ಮತ್ತು ಮೂಲಭೂತವಾದವನ್ನು ಹೊರಹಾಕುತ್ತೀರಿ, ಆಗ ನೀವು ನಮಗೆ ಮತ ಹಾಕಿ. ಇದು ಸಾಧ್ಯವಾಗಲು ಸುಮಾರು 10 ವರ್ಷಗಳು ಬೇಕಾಗುತ್ತದೆ. ನಾವು 10 ವರ್ಷಗಳ ನಂತರ ಅವರಲ್ಲಿ ಮತ ಕೇಳುತ್ತೇವೆ, ಈಗ ಮತ ಕೇಳುವುದಿಲ್ಲ” ಎಂದು ಹೇಳಿದ್ದಾರೆ.

”ಬಿಜೆಪಿ ಪರವಾಗಿ ಮತ ಚಲಾಯಿಸುವವರು ಎರಡು ಅಥವಾ ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬಾರದು, ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ಬಾಲ್ಯವಿವಾಹದಲ್ಲಿ ಪಾಲ್ಗೊಳ್ಳಬಾರದು ಮತ್ತು ಸೂಫಿಸಂ ಅನ್ನು ಅಳವಡಿಸಿಕೊಳ್ಳಲು ಮೂಲಭೂತವಾದವನ್ನು ಬಿಡಬಾರದು. ಈ ಷರತ್ತುಗಳನ್ನು ಅನುಸರಿಸಿದಾಗ ನಾವು ಮತ ಕೇಳಲು ‘ಚಾರ್’ಗೆ ಹೋಗುತ್ತೇನೆ” ಎಂದು ಶರ್ಮಾ ಹೇಳಿದರು.

ಶರ್ಮಾ ಸರ್ಕಾರವು ಫೆಬ್ರವರಿಯಿಂದ ಈ ಬಾಲ್ಯವಿವಾಹಗಳ ವಿರುದ್ಧದ ಕ್ರಮದ ಭಾಗವಾಗಿ 5,000 ಜನರನ್ನು ಬಂಧಿಸಿದೆ. 14 ವರ್ಷದೊಳಗಿನ ಬಾಲಕಿಯರನ್ನು ಮದುವೆಯಾದ ಪುರುಷರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ಮತ್ತು 14 ರಿಂದ 18 ವರ್ಷ ವಯಸ್ಸಿನ ಹುಡುಗಿಯರನ್ನು ಮದುವೆಯಾದವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪೊಲೀಸರು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.

ಬಾಲ್ಯ ವಿವಾಹದ ವಿರುದ್ಧದ ಅಭಿಯಾನದ ಭಾಗವಾಗಿ ರಾಜ್ಯ ಪೊಲೀಸರು ಮುಂದಿನ 10 ದಿನಗಳಲ್ಲಿ ಇನ್ನೂ 2,000 ರಿಂದ 3,000 ಪುರುಷರನ್ನು ಬಂಧಿಸಲಿದ್ದಾರೆ ಎಂದು ಸೆಪ್ಟೆಂಬರ್ 10 ರಂದು ಶರ್ಮಾ ಹೇಳಿದ್ದರು.

”ಮಿಯಾ” ಜನರುಬಿಜೆಪಿಗೆ ಮತ ಹಾಕದೆ, ನಮ್ಮ  ಷರತ್ತುಗಳನ್ನು ಅನುಸರಿಸಿದಾಗ ನಮ್ಮನ್ನು ಬೆಂಬಲಿಸಬಹುದು ಎಂದು ಶರ್ಮಾ ಭಾನುವಾರ ಹೇಳಿದ್ದಾರೆ.

”ಬಿಜೆಪಿ ಸಾರ್ವಜನಿಕರಿಗೆ ಒಳ್ಳೆಯದನ್ನೇ ಮಾಡುತ್ತದೆ. ಹಾಗಾಗಿ ಅವರು ನಮ್ಮನ್ನು ಬೆಂಬಲಿಸುತ್ತಾರೆ, ಆದರೆ ಅವರು ನಮಗೆ ಮತ ಹಾಕುವ ಅಗತ್ಯವಿಲ್ಲ. ನಮ್ಮನ್ನು ಬೆಂಬಲಿಸುವುದರಿಂದ ಯಾವುದೇ ಹಾನಿ ಇಲ್ಲ. ಅವರು ಹಿಮಂತ ಬಿಸ್ವ ಶರ್ಮಾ, ನರೇಂದ್ರ ಮೋದಿ ಮತ್ತು ಬಿಜೆಪಿಗೆ ಜಿಂದಾಬಾದ್ ಎಂದು ಕೂಗಲಿ” ಎಂದು ಶರ್ಮಾ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: ಪ್ರಶ್ನೆ ಕೇಳಿದ ಮಹಿಳಾ ವರದಿಗಾರ್ತಿಗೆ ಅವಮಾನಿಸಲು ಮುಂದಾದ ಅಣ್ಣಾಮಲೈ: ಪತ್ರಕರ್ತರಿಂದ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read