Homeಕರ್ನಾಟಕಹಿಂದುತ್ವಕ್ಕೆ ಪರ್ಯಾಯವಾಗಿ ಅಂಬೇಡ್ಕರ್ ವಾದ ಪ್ರಚಾರ ಮಾಡಬೇಕು: ಸಚಿವ ಸಂತೋಷ್‌ ಲಾಡ್‌

ಹಿಂದುತ್ವಕ್ಕೆ ಪರ್ಯಾಯವಾಗಿ ಅಂಬೇಡ್ಕರ್ ವಾದ ಪ್ರಚಾರ ಮಾಡಬೇಕು: ಸಚಿವ ಸಂತೋಷ್‌ ಲಾಡ್‌

- Advertisement -
- Advertisement -

ಹಿಂದುತ್ವಕ್ಕೆ ಪರ್ಯಾಯವಾಗಿ ಅಂಬೇಡ್ಕರ್ ವಾದವನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದು ರಾಜ್ಯದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ.

ಗಾಂಧಿ ಭವನದಲ್ಲಿ ಗದಗದ ಲಡಾಯಿ ಪ್ರಕಾಶನ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನವೀನ್‌ ಸೂರಿಂಜೆ ಅವರು ಬರೆದಿರುವ ‘ಮಹೇಂದ್ರ ಕುಮಾರ್, ನಡು ಬಗ್ಗಿಸದ ಎದೆಯ ದನಿ. ಹಿಂದುತ್ವವಾದಿಯ ಅನುಭವ ಕಥನ’ ಕೃತಿ ಬಿಡುಗಡೆ ಮಾಡಿದ ಸಚಿವ ಸಂತೋಷ್‌ ಲಾಡ್‌, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಹಿಂದುತ್ವದ ಆಧಾರದಲ್ಲೇ ರಾಜಕೀಯ ಮಾಡುತ್ತಿವೆ. ಯುವಜನರನ್ನು ದುರುಪಯೋಗ ಮಾಡುತ್ತಿದೆ. ಇಂತಹ ಸಮಯದಲ್ಲಿ ಸಂವಿಧಾನದ ಮೂಲಕ ದೇಶದ ಎಲ್ಲ ಜನರಿಗೂ ಸ್ವಾಭಿಮಾನದ ಬದುಕುಕೊಟ್ಟ ಅಂಬೇಡ್ಕರ್‌ ವಾದವನ್ನು ಪರ್ಯಾಯ ಅಸ್ತ್ರವಾಗಿ ಬಳಸಬೇಕಿದೆ, ಹಾಗೆಯೇ ಅಂಬೇಡ್ಕರ್‌ ಅವರ ಆಶಯದ ‘ಹಿಂದೂ ಕೋಡ್‌ ಬಿಲ್ಸ್’ ಕುರಿತು ವ್ಯಾಪಕ ಚರ್ಚೆಗಳು ನಡೆಯಬೇಕು. ಬಿಜೆಪಿ, ಆರೆಸ್ಸೆಸ್‌ನ್ನು ಬೈಯುತ್ತಾ ಕೂರುವುದು ಒಂದು ಹಂತದವರಿಗೆ ಸರಿ. ಆದರೆ ನಮ್ಮಲ್ಲಿ ಒಂದು ನರೇಷನ್ ಬೇಕು ಆ ನರೇಷನ್‍ಗೆ ಒಬ್ಬ ಹೀರೋ ಬೇಕು. ನನ್ನ ಅಭಿಪ್ರಾಯದಲ್ಲಿ ಈ ನರೇಷನ್‍ಗೆ, ಹಿಂದುತ್ವವಾದಕ್ಕೆ ಪರ್ಯಾಯವಾಗಿ ಯಾವುದಾದರೂ ವಾದ ಇದ್ದರೆ ಅದು ಅಂಬೇಡ್ಕರ್ ವಾದ  ಎಂದು ಹೇಳಿದ್ದಾರೆ.

ನಟ ಪ್ರಕಾಶ್‌ ರಾಜ್‌ ಮಾತನಾಡಿ, ‘ರೈತರು, ಬಡವರ ವಿರೋಧಿ ಮನೋಸ್ಥಿತಿಯ ಅಧಿಕಾರಸ್ಥರನ್ನು ಏಕವಚನದಲ್ಲಿ ಟೀಕಿಸಿದ್ದಕ್ಕೆ ಕೆಲವರು ಬೇಸರ ಮಾಡಿಕೊಂಡಿದ್ದಾರೆ. ಹಾಗಾಗಿ, ಇನ್ನು ಮುಂದೆ ಅವರನ್ನು ‘ಮಹಾಪ್ರಭುಗಳು’ ಎಂದೇ ಸಂಬೋಧಿಸುವೆ, ಜನರ ಪರವಾಗಿರುವ ನಾನು ಎಂದಿಗೂ ಪ್ರತಿಪಕ್ಷದ ಸ್ಥಾನದಲ್ಲಿರುತ್ತೇನೆ. ಜನರ ಧ್ವನಿಯಾಗಿ ಆಡಳಿತ ನಡೆಸುವವರನ್ನು ಟೀಕಿಸುತ್ತೇನೆ. ಅದು ಯಾವ ಪಕ್ಷವೇ ಆಗಿರಲಿ. ಕರ್ನಾಟಕದಲ್ಲಿ ಬಿಜೆಪಿ ತನ್ನ ಕಪಟತನದಿಂದ ಸೋಲು ಕಂಡಿತು. ಈಗ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಸೋಲದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ ಎಂದು ಹೇಳಿದ್ದಾರೆ.

ಮಹಾಪ್ರಭುಗಳ ಅಂತಪುರದಲ್ಲಿ ವಿಡಿಯೊ ಗ್ರಾಫರ್, ಫೋಟೊ ಗ್ರಾಫರ್, ವಸ್ತ್ರವಿನ್ಯಾಸಕರೇ ತುಂಬಿದ್ದಾರೆ. ಅವರ ಸಂಘ ಪರಿವಾರದಲ್ಲಿ ಬಡವರು, ರೈತರು, ಮಣಿಪುರಿಗಳಿಗೆ ಸ್ಥಾನವಿಲ್ಲ, ಅವರ ರಾಮನೂ ಕುಟುಂಬದ ರಾಮನಲ್ಲ, ಕೊಲ್ಲುವ ರಾಮ, ಕುಟುಂಬ ದ್ವೇಷಿ ಮನೋಭಾವದ ಮಹಾನುಭಾವರು ಅದಕ್ಕಾಗಿಯೇ ಸೀತೆ ಹೊರತಾದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಪೂರ್ಣಗೊಳ್ಳದ ದೇವಸ್ಥಾನ, ಆಸ್ಪತ್ರೆ ಉದ್ಘಾಟಿಸಿ ವಾಸ್ತವ ಮರೆಮಾಚುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ವಕೀಲ ಎಸ್‌.ಬಾಲನ್‌, ಕಾಂಗ್ರೆಸ್‌ ಮುಖಂಡರಾದ ಸುಧೀರ್ ಮುರೋಳ್ಳಿ, ನಿಕೇತ್‌ ರಾಜ್‌ ಮೌರ್ಯ, ಶಾಸಕಿ ನಯನಾ ಮೋಟಮ್ಮ, ಡಿವೈಎಫ್‌ಐ ರಾಜ್ಯ ಉಪಾಧ್ಯಕ್ಷ ಮುನೀರ್‌ ಕಾಟಿಪಳ್ಳ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನು ಓದಿ: ಜೈಪುರ ರೈಲಿನಲ್ಲಿ RPF ಪೇದೆ ನಾಲ್ವರನ್ನು ಹತ್ಯೆ ಮಾಡುವಾಗ ಅಡಗಿ ಕುಳಿತಿದ್ದ ಪೇದೆಗಳು: ತಡವಾಗಿ ಕರ್ತವ್ಯದಿಂದ ವಜಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...