Homeಮುಖಪುಟಮೋದಿ ಹೆಸರು ಜಪಿಸುವ ಪತಿಗೆ ಊಟ ಹಾಕ್ಬೇಡಿ: ಅರವಿಂದ್ ಕೇಜ್ರಿವಾಲ್

ಮೋದಿ ಹೆಸರು ಜಪಿಸುವ ಪತಿಗೆ ಊಟ ಹಾಕ್ಬೇಡಿ: ಅರವಿಂದ್ ಕೇಜ್ರಿವಾಲ್

- Advertisement -
- Advertisement -

ಮನೆಯಲ್ಲಿ ಮೋದಿ ಹೆಸರನ್ನು ಜಪ ಮಾಡಿದರೆ ಪತಿಗೆ ರಾತ್ರಿ ಊಟವನ್ನು ಹಾಕ್ಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಹಿಳೆಯರಿಗೆ ಹೇಳಿದ್ದಾರೆ.

‘ಮಹಿಳಾ ಸಮ್ಮಾನ್ ಸಮರೋಹ್’ ಕಾರ್ಯಕ್ರಮದಲ್ಲಿ ಮಾತನಾಡಿದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಅನೇಕ ಪುರುಷರು ಪ್ರಧಾನಿ ಮೋದಿಯವರ ಹೆಸರನ್ನು ಜಪಿಸುತ್ತಿದ್ದಾರೆ, ಆದರೆ ನೀವು ಅವರನ್ನು ಸರಿಪಡಿಸಬೇಕು. ನಿಮ್ಮ ಪತಿ ಮೋದಿಯವರ ಹೆಸರನ್ನು ಜಪಿಸಿದರೆ, ನೀವು ಅವರಿಗೆ ರಾತ್ರಿಯ ಊಟವನ್ನು ನೀಡುವುದಿಲ್ಲ ಎಂದು ಹೇಳಬೇಕು ಎಂದು ಹೇಳಿದ್ದಾರೆ.

ಸರ್ಕಾರವು 2024-25ರ ಬಜೆಟ್‌ನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಮಾಸಿಕ ಮೊತ್ತ 1,000 ರೂ.ಗಳನ್ನು ಒದಗಿಸುವ ಯೋಜನೆಯನ್ನು ಘೋಷಿಸಿದ ನಂತರ ಮಹಿಳೆಯರೊಂದಿಗೆ ಸಂವಾದ ನಡೆಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಹೇಳಿಕೆಯನ್ನು ನೀಡಲಾಗಿದೆ. ಅರವಿಂದ್ ಕೇಜ್ರಿವಾಲ್ ಅವರು ಕಾರ್ಯಕ್ರಮದಲ್ಲಿ, ಮಹಿಳೆಯರು ಎಎಪಿ ಪಕ್ಷಕ್ಕೆ ಬೆಂಬಲಿಸಬೇಕು ಮತ್ತು ತಮ್ಮ ಕುಟುಂಬಸ್ಥರನ್ನು ಆಪ್‌ಗೆ ಬೆಂಬಲಿಸುವಂತೆ ಮನವೊಲಿಕೆ ಮಾಡಬೇಕು,  ಬಿಜೆಪಿಯನ್ನು ಬೆಂಬಲಿಸುವ ಇತರ ಮಹಿಳೆಯರಿಗೆ ನಿಮ್ಮ ಸಹೋದರ ಕೇಜ್ರಿವಾಲ್ ಮಾತ್ರ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಹೇಳುವಂತೆ ಅವರು ಮಹಿಳೆಯರಿಗೆ  ಆಗ್ರಹಿಸಿದ್ದಾರೆ.

ನಾನು ಕರೆಂಟ್ ಫ್ರೀ ಮಾಡಿದ್ದೇನೆ, ಬಸ್ ಟಿಕೆಟ್ ಉಚಿತ ಮಾಡಿದ್ದೇನೆ, ಈಗ ನಾನು ಪ್ರತಿ ತಿಂಗಳು ಮಹಿಳೆಯರಿಗೆ ಈ 1,000 ರೂಗಳನ್ನು ನೀಡುತ್ತಿದ್ದೇನೆ, ಬಿಜೆಪಿ ಅವರಿಗೆ ಏನು ಮಾಡಿದೆ? ಬಿಜೆಪಿಗೆ ಏಕೆ ಮತ ಹಾಕಬೇಕು? ಈ ಬಾರಿ ಕೇಜ್ರಿವಾಲ್‌ಗೆ ಮತ ಹಾಕಿ, ಅವರು ಮಹಿಳಾ ಸಬಲೀಕರಣದ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಅವರು ಪಕ್ಷದಲ್ಲಿ ಮಹಿಳೆಯರಿಗೆ ಕೆಲ ಹುದ್ದೆ ನೀಡಿ ಮಹಿಳಾ ಸಬಲೀಕರಣ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಮಹಿಳೆಯರಿಗೆ ಹುದ್ದೆ ಬೇಡ, ದೊಡ್ಡ ಹುದ್ದೆ, ಟಿಕೇಟ್ ಎಲ್ಲ ಸಿಗಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಇದರಿಂದ ಕೇವಲ ಎರಡ್ಮೂರು ಮಹಿಳೆಯರಿಗೆ ಮಾತ್ರ ಲಾಭ. ಉಳಿದ ಮಹಿಳೆಯರಿಗೆ ಏನು ಸಿಗುತ್ತದೆ? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ತಮ್ಮ ಸರ್ಕಾರದ ಹೊಸ ಯೋಜನೆ  ‘ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ’ ನಿಜವಾದ ಮಹಿಳಾ ಸಬಲೀಕರಣವನ್ನು ಮಾಡುತ್ತದೆ ಎಂದು ಹೇಳಿದ್ದಾರೆ.

ಹಣವಿದ್ದಾಗ ಸಬಲೀಕರಣವಾಗುತ್ತದೆ, ಪ್ರತಿ ಮಹಿಳೆಗೆ ಪ್ರತಿ ತಿಂಗಳು 1,000ರೂ. ಸಿಕ್ಕಾಗ ನಿಜವಾದ ಸಬಲೀಕರಣವಾಗುತ್ತದೆ. ಇಡೀ ವಿಶ್ವದಲ್ಲಿ ಈ ಯೋಜನೆಯು “ಅತಿದೊಡ್ಡ ಮಹಿಳಾ ಸಬಲೀಕರಣದ ಕಾರ್ಯಕ್ರಮ” ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.

ಇದನ್ನು ಓದಿ: ಜೈಪುರ ರೈಲಿನಲ್ಲಿ RPF ಪೇದೆ ನಾಲ್ವರನ್ನು ಹತ್ಯೆ ಮಾಡುವಾಗ ಅಡಗಿ ಕುಳಿತಿದ್ದ ಪೇದೆಗಳು: ತಡವಾಗಿ ಕರ್ತವ್ಯದಿಂದ ವಜಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಕ್ಕಳಿಗೆ ಟಿಫಿನ್ ಬಾಕ್ಸ್‌ಗಳಲ್ಲಿ ಮಾಂಸಾಹಾರ ತರದಂತೆ ಸೂಚಿಸಿದ ಶಾಲೆ: ಆರೋಪ

0
ಜೈಪುರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಮಕ್ಕಳಿಗೆ ಟಿಫಿನ್ ಬಾಕ್ಸ್‌ಗಳಲ್ಲಿ ಮಾಂಸಾಹಾರವನ್ನು ತರದಂತೆ ನಿಷೇಧಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಈ ಬಗೆಗಿನ ಆರೋಪವನ್ನು ಶಾಲೆಯ ಮುಖ್ಯೋಪಾಧ್ಯಾಯರು ನಿರಾಕರಿಸಿದ್ದಾರೆ. ಕಥೆಗಾರ ಮತ್ತು ಚಿತ್ರಕಥೆಗಾರ, ದರಾಬ್...