Homeಮುಖಪುಟಬಿಜೆಪಿ ಹೇಳಿದಷ್ಟು ಸುಳ್ಳನ್ನು ವಿಶ್ವದಲ್ಲಿ ಯಾರೂ ಹೇಳಿಲ್ಲ: ಅಖಿಲೇಶ್ ಯಾದವ್

ಬಿಜೆಪಿ ಹೇಳಿದಷ್ಟು ಸುಳ್ಳನ್ನು ವಿಶ್ವದಲ್ಲಿ ಯಾರೂ ಹೇಳಿಲ್ಲ: ಅಖಿಲೇಶ್ ಯಾದವ್

- Advertisement -
- Advertisement -

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಕ್ಕಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿಶ್ವದಾದ್ಯಂತ ನಾಚಿಕೆಪಡುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಹೇಳಿದ್ದಾರೆ.

ವಿರೋಧ ಪಕ್ಷವಾದ ಇಂಡಿಯಾ ಬ್ಲಾಕ್‌ನ ಮೆಗಾ ರ್ಯಾಲಿಯಲ್ಲಿ ಭಾಗವಹಿಸಲು ರಾಷ್ಟ್ರ ರಾಜಧಾನಿಗೆ ಆಗಮಿಸಿದ ಅಖಿಲೇಶ್ ಯಾದವ್, ಚುನಾವಣಾ ಬಾಂಡ್‌ಗಳ ವಿಷಯವಾಗಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ಬಿಜೆಪಿ ಹೇಳಿದಷ್ಟು ಸುಳ್ಳುಗಳನ್ನು ವಿಶ್ವದಲ್ಲಿ ಯಾರೂ ಹೇಳುವುದಿಲ್ಲ ಎಂದು ಹೇಳಿದ್ದಾರೆ.

ಅಧಿಕಾರ ಕಳೆದುಕೊಳ್ಳುತ್ತದೆ ಎಂಬ ಕಳವಳ ಬಿಜೆಪಿಗೆ ಇದೆ. ಇಂದು ಮೀರತ್‌ನಲ್ಲಿ ನಿಗದಿಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿ ಮತ್ತು ದೆಹಲಿಯಲ್ಲಿ ಪ್ರತಿಪಕ್ಷಗಳ ರ್ಯಾಲಿಯನ್ನು ಉಲ್ಲೇಖಿಸಿದ ಎಸ್‌ಪಿ ಮುಖ್ಯಸ್ಥರು, ಇದು ಯಾರು ಅಧಿಕಾರಕ್ಕೆ ಬರುತ್ತಾರೆ ಮತ್ತು ಯಾರು ಹೊರಬರುತ್ತಾರೆ ಎಂಬುವುದರ ಸಂಕೇತವಾಗಿದೆ ಎಂದು ಹೇಳಿದ್ದಾರೆ.

ಇಡಿ, ಸಿಬಿಐ ಮತ್ತು ಐಟಿ ನಿಯೋಜಿಸಲಾಗಿದೆ ಮತ್ತು ದೇಣಿಗೆ ಸಂಗ್ರಹಿಸಲಾಗಿದೆ, ಇದು ಹೊಸ ಆವಿಷ್ಕಾರವಾಗಿದೆ. ವಿಶ್ವದಲ್ಲಿ ಬಿಜೆಪಿಯವರಷ್ಟು ಸುಳ್ಳು ಯಾರೂ ಹೇಳಿಲ್ಲ. ಅರವಿಂದ್ ಕೇಜ್ರಿವಾಲ್ ಬಂಧನದ ನಂತರ ಬಿಜೆಪಿಗೆ ವಿಶ್ವದಾದ್ಯಂತ ನಾಚಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

ಕೇಜ್ರಿವಾಲ್ ಅವರ ಬಂಧನ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಇಂಡಿಯಾ ಬ್ಲಾಕ್‌ ನಾಯಕರು ತಮ್ಮ ‘ಲೋಕತಂತ್ರ ಬಚಾವೋ’ (ಪ್ರಜಾಪ್ರಭುತ್ವ ಉಳಿಸಿ) ರ್ಯಾಲಿಗಾಗಿ ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನಕ್ಕೆ ಆಗಮಿಸಿದ್ದಾರೆ.

ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್, ಉದ್ಧವ್ ಠಾಕ್ರೆ ಮತ್ತು ತೇಜಸ್ವಿ ಯಾದವ್ ಸೇರಿದಂತೆ ಇಂಡಿಯಾ ಮೈತ್ರಿ ಕೂಟದ ಪ್ರಮುಖ ನಾಯಕರು ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸಿದ್ಧರಾಗಿದ್ದಾರೆ.

ಕೆಲವು ಷರತ್ತುಗಳೊಂದಿಗೆ ದೆಹಲಿ ಪೊಲೀಸರು ರ್ಯಾಲಿಗೆ ಅನುಮತಿ ನೀಡಿದ್ದಾರೆ. ಸ್ಥಳದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಅವಕಾಶ ನೀಡಬಹುದಾದರೂ,  20,000 ಜನರಿಗೆ ಮಾತ್ರ ಭಾಗವಹಿಸಲು ಅನುಮತಿಸಲಾಗಿದೆ. 30,000ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯನ್ನು ಪೊಲೀಸರು ಇಟ್ಟುಕೊಂಡಿದ್ದಾರೆ. ಆದರೆ AAP ಪಕ್ಷವು ಮೈದಾನವು ಸಂಪೂರ್ಣವಾಗಿ ತುಂಬಲಿದೆ ಎಂದು ಹೇಳಿಕೊಂಡಿದೆ.

ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಮತ್ತು ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಸೇರಿದಂತೆ ಇಂಡಿಯಾ ಬ್ಲಾಕ್‌ನ ಬಹುತೇಕ ಎಲ್ಲಾ ಉನ್ನತ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಭೂ ಹಗರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮಾಜಿ ಸಿಎಂ ಅವರನ್ನು ಜನವರಿಯಲ್ಲಿ ಇಡಿ ಬಂಧಿಸಿತ್ತು.

ಇದನ್ನು ಓದಿ: ಪ್ರಮುಖ ಸಮಸ್ಯೆಗಳ ಬಗ್ಗೆ ಮೌನ; ಉತ್ತರಪ್ರದೇಶದ ಜನರ ಪರವಾಗಿ ಮೋದಿಗೆ ಹಲವು ಪ್ರಶ್ನೆಗಳನ್ನು ಕೇಳಿದ ಜೈರಾಮ್ ರಮೇಶ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...