Homeಮುಖಪುಟಎಲೆಕ್ಟೋರಲ್ ಟ್ರಸ್ಟ್‌ಗಳ ಮೂಲಕ ₹259 ಕೋಟಿ ದೇಣಿಗೆ ಪಡೆದ ಬಿಜೆಪಿ: ಎಡಿಆರ್ ವರದಿ

ಎಲೆಕ್ಟೋರಲ್ ಟ್ರಸ್ಟ್‌ಗಳ ಮೂಲಕ ₹259 ಕೋಟಿ ದೇಣಿಗೆ ಪಡೆದ ಬಿಜೆಪಿ: ಎಡಿಆರ್ ವರದಿ

- Advertisement -
- Advertisement -

2022-2023ರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಎಲೆಕ್ಟೋರಲ್ (ಚುನಾವಣಾ) ಟ್ರಸ್ಟ್ ಮೂಲಕ ₹259.08 ಕೋಟಿ ದೇಣಿಗೆಯಾಗಿ ಸ್ವೀಕರಿಸಿದೆ. ಇದು ಟ್ರಸ್ಟ್‌ ಮೂಲಕ ನೀಡಿದ ದೇಣಿಗೆಗಳಲ್ಲಿ ಶೇ.70.69 ರಷ್ಟಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ(ಎಡಿಆರ್) ವಿಶ್ಲೇಷಣೆ ತಿಳಿಸಿದೆ. ಬಿಜೆಪಿ ನಂತರ, ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಎರಡನೇ ಅತಿ ಹೆಚ್ಚು ದೇಣಿಗೆ ಸ್ವೀಕರಿಸಿದ್ದು, ₹90 ಕೋಟಿ ಹಣ ಸಂದಾಯವಾಗಿದೆ. ಇದು ಚುನಾವಣಾ ಟ್ರಸ್ಟ್ ದೇಣಿಗೆಯ ಶೇ.24.56ರಷ್ಟು ಎಂದು ಎಡಿಆರ್ ವರದಿ ತಿಳಿಸಿದೆ.

ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಪಡೆದ ಕೊಡುಗೆಗಳನ್ನು ರಾಜಕೀಯ ಪಕ್ಷಗಳಿಗೆ ವಿತರಿಸುವ ಉದ್ದೇಶದಿಂದ ‘ಎಲೆಕ್ಟೋರಲ್ ಟ್ರಸ್ಟ್’ಗಳನ್ನು ಸ್ಥಾಪಿಸಲಾಗಿದೆ. ಅವರು ಹಣಕಾಸಿನ ವರ್ಷದಲ್ಲಿ ಸ್ವೀಕರಿಸಿದ ಶೇ.95ರಷ್ಟು ಕೊಡುಗೆಗಳನ್ನು ಜನತಾ ಪ್ರಾತಿನಿಧ್ಯ ಕಾಯಿದೆ, 1951ರ ಅಡಿಯಲ್ಲಿ ನೋಂದಾಯಿಸಲಾದ ರಾಜಕೀಯ ಪಕ್ಷಗಳಿಗೆ ದಾನ ಮಾಡಬೇಕು. ಚುನಾವಣಾ ಟ್ರಸ್ಟ್‌ಗಳು ಅವರಿಗೆ ಕೊಡುಗೆ ನೀಡುವ ಕಂಪನಿಗಳು ಮತ್ತು ವ್ಯಕ್ತಿಗಳನ್ನು ಪಟ್ಟಿಮಾಡುತ್ತವೆ.

ಚುನಾವಣಾ ಬಾಂಡ್‌ಗಳ ಖರೀದಿದಾರರು ಅನಾಮಧೇಯರಾಗಿರುತ್ತಾರೆ. ಆದರೆ, ಚುನಾವಣಾ ಟ್ರಸ್ಟ್‌ಗಳು ಹೆಚ್ಚು ಪಾರದರ್ಶಕವಾಗಿರುತ್ತವೆ. ಏಕೆಂದರೆ, ಅವುಗಳು ಕೊಡುಗೆದಾರರಿಗೆ ವರದಿ ಮಾಡುವುದನ್ನು ಕಡ್ಡಾಯಗೊಳಿಸುತ್ತವೆ. ವಿಶ್ಲೇಷಣೆಯ ಪ್ರಕಾರ ವೈಎಸ್ಆರ್ ಕಾಂಗ್ರೆಸ್ ₹16 ಕೋಟಿ, ಆಮ್ ಆದ್ಮಿ ಪಕ್ಷ ₹90 ಲಕ್ಷ ಮತ್ತು ಕಾಂಗ್ರೆಸ್ ₹50 ಲಕ್ಷ ಚುನಾವಣಾ ಟ್ರಸ್ಟ್ ಮೂಲಕ ದೇಣಿಗೆ ಪಡೆದಿವೆ.

ತಮ್ಮ ಕೊಡುಗೆ ವರದಿಗಳನ್ನು ಸಲ್ಲಿಸಿದ ಹದಿಮೂರು ಚುನಾವಣಾ ಟ್ರಸ್ಟ್‌ಗಳಲ್ಲಿ ಕೇವಲ ಐದು ಮಾತ್ರ. ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್, ಸಮಾಜ್ ಎಲೆಕ್ಟೋರಲ್ ಟ್ರಸ್ಟ್ ಅಸೋಸಿಯೇಷನ್, ಪರಿಬಾರ್ಟನ್ ಎಲೆಕ್ಟೋರಲ್ ಟ್ರಸ್ಟ್, ಟ್ರಯಂಫ್ ಎಲೆಕ್ಟೋರಲ್ ಟ್ರಸ್ಟ್ ಮತ್ತು ಐಂಜಿಗಾರ್ಟಿಗ್ ಎಲೆಕ್ಟೋರಲ್ ಟ್ರಸ್ಟ್, ಕಾರ್ಪೊರೇಟ್ ಕಂಪನಿಗಳು ಮತ್ತು ವ್ಯಕ್ತಿಗಳಿಂದ ಕೊಡುಗೆಗಳನ್ನು ಘೋಷಿಸಿವೆ. ಈ ಐದು ಚುನಾವಣಾ ಟ್ರಸ್ಟ್‌ಗಳ ಕೊಡುಗೆಗಳು ₹366.495 ಕೋಟಿ ಮೌಲ್ಯದ್ದಾಗಿದೆ.

ಟ್ರಸ್ಟ್ ತಾನು ಸಂಗ್ರಹಿಸಿದ ಹಣದ 99.09%, ₹363.15 ಕೋಟಿಗಳನ್ನು ನಾಲ್ಕು ರಾಜಕೀಯ ಪಕ್ಷಗಳಿಗೆ ವಿತರಿಸಿದೆ. ಬಿಜೆಪಿ (₹256.25 ಕೋಟಿ), ಬಿಆರ್‌ಎಸ್‌ (₹90 ಕೋಟಿ), ವೈಎಸ್ಆರ್‌ಸಿಪಿ (₹16 ಕೋಟಿ) ಮತ್ತು ಎಎಪಿ (₹90 ಲಕ್ಷ). ಸಮಾಜ ಎಲೆಕ್ಟೋರಲ್ ಟ್ರಸ್ಟ್ ಅಸೋಸಿಯೇಷನ್‌ನಿಂದ ಕಾಂಗ್ರೆಸ್ ತನ್ನ ಏಕೈಕ ದೇಣಿಗೆ ₹50 ಲಕ್ಷವನ್ನು ಪಡೆದುಕೊಂಡಿದೆ. ಬಹು ಚುನಾವಣಾ ಟ್ರಸ್ಟ್‌ಗಳಿಂದ ದೇಣಿಗೆ ಪಡೆದ ಏಕೈಕ ಪಕ್ಷ ಬಿಜೆಪಿಯಾಗಿದೆ.

ಇದನ್ನೂ ಓದಿ; ಸರ್ಕಾರಿ ಮನೆ ತೆರವು ನೋಟಿಸ್ ಪ್ರಶ್ನಿಸಿದ್ದ ಮಹುವಾ ಮೊಯಿತ್ರಾ ಅರ್ಜಿ ವಜಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...