Homeಮುಖಪುಟಬಿಜೆಪಿ, ಆರ್‌ಎಸ್‌ಎಸ್‌ನವರು ಶ್ರೀರಾಮನಂತೆ ಜೀವನ ನಡೆಸಲ್ಲ: ರಾಹುಲ್‌

ಬಿಜೆಪಿ, ಆರ್‌ಎಸ್‌ಎಸ್‌ನವರು ಶ್ರೀರಾಮನಂತೆ ಜೀವನ ನಡೆಸಲ್ಲ: ರಾಹುಲ್‌

- Advertisement -
- Advertisement -

ಬಿಜೆಪಿ ಮತ್ತು ಆರೆಸ್ಸೆಸ್ ಜನರು ಭಗವಾನ್ ರಾಮನು ನಡೆಸಿದ ರೀತಿಯಲ್ಲಿ ತಮ್ಮ ಜೀವನವನ್ನು ನಡೆಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

ತಮ್ಮ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, “ಮಹಾತ್ಮ ಗಾಂಧಿಯವರು ಬಳಸಿದ ‘ಹೇ ರಾಮ್’ ಎಂಬ ನುಡಿಗಟ್ಟು ‘ಜೀವನದ ಮಾರ್ಗ’ವನ್ನು ಸೂಚಿಸುತ್ತದೆ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪ್ರಸ್ತುತ ಮಧ್ಯಪ್ರದೇಶದ ಮೂಲಕ ಹಾದು ಹೋಗುತ್ತಿರುವ ಭಾರತ್ ಜೋಡೋ ಪಾದಯಾತ್ರೆಯು ಶುಕ್ರವಾರ ಸಂಜೆ ಅಗರ್ ಮಾಲ್ವಾ ಜಿಲ್ಲೆಯಲ್ಲಿ ವಿರಾಮ ಪಡೆಯಿತು. “ಮಧ್ಯಪ್ರದೇಶದಲ್ಲಿ ಯಾತ್ರೆಯ ವೇಳೆ ನನ್ನನ್ನು ಭೇಟಿಯಾಗಲು ಬಂದಿದ್ದ ಅರ್ಚಕರೊಬ್ಬರು ಗಾಂಧೀಜಿಯವರು ಆಗಾಗ ಬಳಸುತ್ತಿದ್ದ ‘ಹೇ ರಾಮ್’ ಪದದ ಅರ್ಥವನ್ನು ಹೇಳಿದರು. ಹೇ ರಾಮ್ ಒಂದು ಜೀವನ ವಿಧಾನ. ಇದು ಇಡೀ ಜಗತ್ತಿಗೆ ಪ್ರೀತಿ, ಭ್ರಾತೃತ್ವ, ಗೌರವ ಮತ್ತು ತಪಸ್ಸಿನ ಅರ್ಥವನ್ನು ಕಲಿಸಿತು” ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

“ಅದೇ ರೀತಿ, ‘ಜೈ ಸಿಯಾ ರಾಮ್’ ಎಂದರೆ ಸೀತೆ ಮತ್ತು ರಾಮರು ಒಬ್ಬರೇ. ಶ್ರೀರಾಮನು ಸೀತೆಯ ಗೌರವಕ್ಕಾಗಿ ಹೋರಾಡಿದನು” ಎಂದು ಅವರು ತಿಳಿಸಿದ್ದಾರೆ.

“ಜೈ ಶ್ರೀರಾಮ್ ಎಂದರೆ ಭಗವಾನ್ ರಾಮನನ್ನು ಸ್ತುತಿಸುವುದಾಗಿದೆ. ಆದರೆ ಬಿಜೆಪಿ ಮತ್ತು ಆರೆಸ್ಸೆಸ್ ಜನರು ಭಗವಾನ್‌ ರಾಮನಂತೆ ತಮ್ಮ ಜೀವನವನ್ನು ನಡೆಸುತ್ತಿಲ್ಲ. ಮಹಿಳೆಯರ ಗೌರವಕ್ಕಾಗಿ ಹೋರಾಡುತ್ತಿಲ್ಲ” ಎಂದು ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಗುರುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. “ಭಗವಾನ್ ರಾಮನ ಅಸ್ತಿತ್ವವನ್ನು ಎಂದಿಗೂ ನಂಬದವರು ಈಗ ಅವನನ್ನು ನಿಂದಿಸಲು ‘ರಾವಣನನ್ನು ಕರೆತಂದಿದ್ದಾರೆ’” ಎಂದು ಮೋದಿ ಪ್ರತಿಕ್ರಿಯಿಸಿದ್ದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಮೋದಿ ಉಲ್ಲೇಖಿಸಿದ್ದರು. “ಎಲ್ಲಾ ಚುನಾವಣೆಗಳಲ್ಲಿಯೂ ತಮ್ಮ ಮುಖವನ್ನು ನೋಡಿಕೊಂಡು ಮತ ಚಲಾಯಿಸುವಂತೆ ಪ್ರಧಾನಿ ಕೇಳುತ್ತಾರೆ” ಎಂದು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. “ನೀವು ರಾವಣನಂತೆ 100 ತಲೆ ಹೊಂದಿದ್ದೀರಾ?” ಎಂದು ಖರ್ಗೆ ಪ್ರಶ್ನಿಸಿದ್ದರು.

ಇದೇ ವೇಳೆ, ಕೇಂದ್ರ ಹಾಗೂ ಮಧ್ಯಪ್ರದೇಶದ ಬಿಜೆಪಿ ಸರ್ಕಾರಗಳನ್ನು ಗುರಿಯಾಗಿಸಿಕೊಂಡು ಮಾತನಾಡಿರುವ ರಾಹುಲ್ ಗಾಂಧಿ, “ರೈತರಿಗೆ ರಸಗೊಬ್ಬರ ಸಿಗುತ್ತಿಲ್ಲ ಮತ್ತು 50 ಸಾವಿರದಿಂದ ಒಂದು ಲಕ್ಷ ರೂಪಾಯಿ ಸಾಲ ಮರುಪಾವತಿ ಮಾಡದೆ ಸತಾಯಿಸಲಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.

“ಪಾಲಕರು ತಮ್ಮ ಮಗನನ್ನು ಇಂಜಿನಿಯರ್ ಮಾಡಲು ಶೈಕ್ಷಣಿಕ ಸಾಲವನ್ನು ತೆಗೆದುಕೊಳ್ಳುತ್ತಾರೆ, ಆದರೆ ಪದವಿ ಪಡೆದ ನಂತರ, ಯುವ ಇಂಜಿನಿಯರ್‌ಗಳು ಉದ್ಯೋಗದ ಕೊರತೆಯಿಂದಾಗಿ ಕಾರ್ಮಿಕರಾಗಿ ದುಡಿಯುತ್ತಾರೆ” ಎಂದು ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

“ಚಿಕ್ಕಪುಟ್ಟ ಅಂಗಡಿಗಳು, ಗೃಹ ಸಂಬಂಧಿ ಕೆಲಸಗಳು ದೊಡ್ಡ ಉದ್ಯೋಗ ಮೂಲವಾಗಿವೆ. ಆದರೆ ಇವುಗಳನ್ನು ಅವಲಂಬಿಸಿರುವವರು ಜಿಎಸ್‌ಟಿ ಮತ್ತು ನೋಟ್‌ ಬ್ಯಾನ್‌ನಿಂದ ತೀವ್ರವಾಗಿ ಹೊಡೆತ ತಿಂದಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.

“ಉದ್ಯೋಗದ ಮತ್ತೊಂದು ಪ್ರಮುಖ ಮೂಲವೆಂದರೆ ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‌ಯು). ಆದರೆ ಅವುಗಳನ್ನು ಸಹ ಮುಚ್ಚಲಾಗುತ್ತಿದೆ. ಆಸ್ಪತ್ರೆಗಳು ಮತ್ತು ಶಾಲೆಗಳನ್ನು ಸಹ ಖಾಸಗೀಕರಣಗೊಳಿಸಲಾಗುತ್ತಿದೆ, ಹೀಗಾಗಿ ಎಲ್ಲಾ ಉದ್ಯೋಗಾವಕಾಶಗಳನ್ನು ಕೊನೆಗೊಳಿಸಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ಪ.ಬಂಗಾಳ: ಟಿಎಂಸಿ ಮುಖಂಡನ ಮನೆಯಲ್ಲಿ ಬಾಂಬ್ ಸ್ಫೋಟ, ಮೂರು ಸಾವು

ಬೆಲೆ ಏರಿಕೆಯನ್ನು ಉಲ್ಲೇಖಿಸಿದ ಅವರು, “ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 60 ರೂ. ಇತ್ತು. ಆದರೆ ಈಗ ಅದು ಲೀಟರ್‌ಗೆ 107 ರೂ.ಗೆ ಏರಿಕೆಯಾಗಿದೆ. 400 ರೂಪಾಯಿ ಬೆಲೆಯ ಎಲ್‌ಪಿಜಿ ಸಿಲಿಂಡರ್ ಈಗ 1,000 ರೂಪಾಯಿಗಿಂತ ಹೆಚ್ಚಿದೆ” ಎಂದು ಟೀಕಿಸಿದ್ದಾರೆ.

“ಸಾಮಾನ್ಯ ಜನರ ಜೇಬಿನಿಂದ ಹಣ ತೆಗೆದು ಕೈಗಾರಿಕೋದ್ಯಮಿಗಳಿಗೆ ನೀಡಲಾಗುತ್ತಿದೆ. ಇದರ ಪರಿಣಾಮವಾಗಿ, ಈಗ ದೇಶದಲ್ಲಿ ಎರಡು ವಿಭಾಗಗಳಿವೆ. ಒಂದು ವಿಭಾಗದಲ್ಲಿ ಬಿಲಿಯನೇರ್ ಕೈಗಾರಿಕೋದ್ಯಮಿಗಳು ಇದ್ದಾರೆ. ಮತ್ತೊಂದು ವಿಭಾಗದಲ್ಲಿ ರೈತರು, ಕಾರ್ಮಿಕರು ಮತ್ತು ಸಣ್ಣ ಅಂಗಡಿ ಮಾಲೀಕರು ಇದ್ದಾರೆ” ಎಂದು ಎಚ್ಚರಿಸಿದ್ದಾರೆ.

“ಜನರು ಈ ಪರಿಸ್ಥಿತಿಯನ್ನು ಬಯಸುವುದಿಲ್ಲ. ಅವರು ನ್ಯಾಯವನ್ನು ಬಯಸುತ್ತಾರೆ. ಅವರಿಗೆ ನ್ಯಾಯವನ್ನು ದೊರಕಿಸುವುದು ಭಾರತ್ ಜೋಡೋ ಯಾತ್ರೆಯ ಮುಖ್ಯ ಗುರಿಯಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...