Homeಮುಖಪುಟಉತ್ತರ ಪ್ರದೇಶ ಪೊಲೀಸರ ಕ್ರೌರ್ಯ: ರೈಲಿಗೆ ಸಿಕ್ಕಿ ಎರಡೂ ಕಾಲು ಕಳೆದುಕೊಂಡ ಬಡ ವ್ಯಾಪಾರಿ

ಉತ್ತರ ಪ್ರದೇಶ ಪೊಲೀಸರ ಕ್ರೌರ್ಯ: ರೈಲಿಗೆ ಸಿಕ್ಕಿ ಎರಡೂ ಕಾಲು ಕಳೆದುಕೊಂಡ ಬಡ ವ್ಯಾಪಾರಿ

- Advertisement -
- Advertisement -

ಪೊಲೀಸರು ಎಸೆದ ತನ್ನ ತಕ್ಕಡಿ ತೆಗೆದುಕೊಳ್ಳಲು ರೈಲ್ವೆ ಹಳಿ ಪ್ರವೇಶಿಸಿದ ಯುವಕನಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಜರುಗಿದೆ.

ಕಾನ್ಪುರದ ಕಲ್ಯಾಣಪುರ್ ಬಳಿಯ ಸಾಹೇಬ್ ನಗರದ ನಿವಾಸಿ 17 ವರ್ಷದ ಅರ್ಸಲಾನ್ ತೀವ್ರ ಗಾಯೊಂಡಿದ್ದು, ಸದ್ಯಕ್ಕೆ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಎಸ್‌ಡಿಪಿಜಿಐಗೆ ಸೇರಿಸಲು ವೈದ್ಯರು ಸೂಚಿಸಿದ್ದಾರೆ.

ಪ್ರತಿದಿನದಂತೆ ಶುಕ್ರವಾರ ಸಂಜೆ ಅರ್ಸಲಾನ್ ಜಿಟಿ ರಸ್ತೆಯಲ್ಲಿ ರಸ್ತೆಬದಿಯಲ್ಲಿ ತರಕಾರಿ ಮಾರಾಟದಲ್ಲಿ ನಿರತರಾಗಿದ್ದರು. ಆ ಸಂದರ್ಭದಲ್ಲಿ ಸಬ್ ಇನ್ಸ್‌ಪೆಕ್ಟರ್ ಶದಬ್ ಖಾನ್ ಮತ್ತು ಹೆಡ್ ಕಾನ್ಸ್ಟೇಬಲ್ ರಾಕೇಶ್ ಕುಮಾರ್ ಅರ್ಸಲಾನ್ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಆತನ ಮೇಲೆ ಹಲ್ಲೆ ಮಾಡಿದ್ದಲ್ಲದೆ ಆತನ ತಕ್ಕಡಿಯನ್ನು ರೈಲು ಹಳಿಗಳ ಮೇಲೆ ಎಸೆದಿದ್ದಾರೆ. ಭಯಭೀತಗೊಂಡ ಅರ್ಸಲಾನ್ ಏನನ್ನು ಯೋಚಿಸಿದೆ ಮರುಕ್ಷಣವೇ ತಕ್ಕಡಿ ಎತ್ತಿಕೊಳ್ಳಲು ರೈಲು ಹಳಿ ತಲುಪಿದಾಗ ವೇಗವಾಗಿ ಬರುತ್ತಿದ್ದ ಮೆಮು ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಆತನ ಎರಡೂ ಕಾಲುಗಳಿಗೆ ಗಂಭೀರ ಗಾಯವಾಗಿದೆ.

ಕೂಡಲೇ ಜನರು ಮತ್ತು ಪೊಲೀಸರು ಆ ಬಾಲಕನ್ನು ರೈಲುಹಳಿಗಳಿಂದ ಎತ್ತಿಕೊಂಡು ಹೋಗುವಾಗ ಎರಡೂ ಕಾಲುಗಳು ಸಂಪೂರ್ಣ ನಜ್ಜುಗುಜ್ಜಾಗಿರುವುದನ್ನು ತೋರಿಸುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಷಯ ತಿಳಿದ ಕಾನ್ಪುರ ಪಶ್ಚಿಮ ಡಿಸಿಪಿ ವಿಜಯ್ ಧುಲ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಬದಿ ವ್ಯಾಪಾರಿ ಅರ್ಸಲಾನ್ ಮೇಲೆ ಹಲ್ಲೆ ನಡೆದಿರುವುದು, ಆತನ ತಕ್ಕಡಿಯನ್ನು ರೈಲು ಹಳಿಗಳ ಮೇಲೆ ಎಸೆದಿರುವುದು ನಿಜೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ಕಂಡುಬಂದ ನಂತರ ಆ ಇಬ್ಬರೂ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ ಮತ್ತು ಎಸಿಪಿ ಮಟ್ಟದಲ್ಲಿ ತನಿಖೆ ನಡೆಸಲು ಆದೇಶಿಸಿದ್ದಾರೆ.

ಇನ್ನೊಂದೆಡೆ ಅರ್ಸಲಾನ್‌ನ ಪರಿಸ್ಥಿತಿ ಗಂಭೀರವಾಗಿದೆ. ಆತನ ಕಾಲುಗಳು ತುಂಡರಿಸಿದ್ದು, ಹೆಚ್ಚಿನ ರಕ್ತ ಸೋರಿಕೆಯಾಗಿದೆಎ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ; ಕೋಲಾರದ ದಲಿತ ಯುವಕನ ಮೇಲಿನ ದೌರ್ಜನ್ಯ: ನಿರ್ದಾಕ್ಷಿಣ್ಯ ಕ್ರಮಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಈ ಪೊಲೀಸರನ್ನು ಕೂಡ ಅದೇ ರೈಲಿನ ಹಳ್ಳಿಗಳ ಮೇಲೆ ಅಡ್ಡಡ್ಡ ಮಲಗಿಸಬೇಕು ರೈಲು ಹೋಗುವಾಗ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...