Homeಮುಖಪುಟಅಮೆರಿಕ ಮೂಲದ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ ಹಮಾಸ್

ಅಮೆರಿಕ ಮೂಲದ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ ಹಮಾಸ್

- Advertisement -
- Advertisement -

ಅಮೆರಿಕದ ಇಬ್ಬರು ಒತ್ತೆಯಾಳುಗಳನ್ನು ಹಮಾಸ್ ಸಶಸ್ತ್ರ ಗುಂಪು ಶುಕ್ರವಾರ ಬಿಡುಗಡೆ ಮಾಡಿದೆ. ಚಿಕಾಗೋ-ಪ್ರದೇಶದ ಮಹಿಳೆ ಮತ್ತು ಅವರ ಮಗಳು ಇಸ್ರೇಲ್‌ನಲ್ಲಿರುವ ತಮ್ಮ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡಿದ್ದಾರೆ.

ಜ್ಯುಡಿತ್ ತಾಯ್ ರಾನನ್ ಮತ್ತು ಆಕೆಯ ಮಗಳು ನತಾಲಿ ಶೋಷನಾ ರಾನನ್ ಅವರು ಶುಕ್ರವಾರ ಗಾಝಾ ಗಡಿಯಲ್ಲಿ ಇಸ್ರೇಲಿ ರಾಯಭಾರ ಕಚೇರಿ ಸಿಬ್ಬಂದಿಯನ್ನು ಭೇಟಿ ಮಾಡಿದ್ದು, ಅವರನ್ನು ಕೇಂದ್ರ ಇಸ್ರೇಲಿನ ಮಿಲಿಟರಿ ನೆಲೆಗೆ ಕರೆದೊಯ್ಯಲಾಗಿದೆ.

ಹಮಾಸ್‌ನ ಸಶಸ್ತ್ರ ವಿಭಾಗವಾದ ಇಝ್ ಎಲ್-ದೀನ್ ಅಲ್-ಕಸ್ಸಾಮ್ ಬ್ರಿಗೇಡ್ಸ್‌ನ ವಕ್ತಾರ ಅಬು ಉಬೈದಾ ಅವರು ಬಿಡುಗಡೆಯನ್ನು ಘೋಷಿಸಿದರು ಮತ್ತು ಸ್ವಲ್ಪ ಸಮಯದ ನಂತರ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹೇಳಿಕೆಯಲ್ಲಿ ದೃಢಪಡಿಸಿದರು.

ಇಲಿನಾಯ್ಸ್‌ನ ಇವಾನ್‌ಸ್ಟನ್‌ನ ಚಿಕಾಗೋ ಉಪನಗರದ ತಾಯಿ ಮತ್ತು ಮಗಳು ಮಿಲಿಟರಿ ನೆಲೆಯಲ್ಲಿ ಸಭೆಯ ಸ್ಥಳಕ್ಕೆ ಹೋಗುತ್ತಿದ್ದಾರೆ, ಅಲ್ಲಿ ಅವರ ಕುಟುಂಬ ಸದಸ್ಯರು ಅವರಿಗಾಗಿ ಕಾಯುತ್ತಿದ್ದಾರೆ ಎಂದು ಇಸ್ರೇಲಿ ನಾಯಕ ಹೇಳಿದರು.

ನತಾಲಿ ಶೋಷನಾ ರಾನನ್ ಅವರ ತಂದೆ ಉರಿ ರಾನನ್ ಅವರು ತಮ್ಮ ಮಗಳೊಂದಿಗೆ ಫೋನ್ ಮೂಲಕ ಮಾತನಾಡಿದ್ದು, ”ಅವಳು ತುಂಬಾ ಒಳ್ಳೆಯವಳು, ತುಂಬಾ ಸಂತೋಷವಾಗಿದ್ದಾಳೆ – ಮತ್ತು ಅವಳು ಚೆನ್ನಾಗಿ ಇದ್ದಾಳೆ” ಎಂದು ತಿಳಿಸಿದರು.

ರಾನನ್ ಅವರ ಚಿಕ್ಕಪ್ಪ ಅವ್ರಹಾಂ ಝಮೀರ್ ಮಾತನಾಡಿ, ”ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದರಿಂದ ಕುಟುಂಬವು ಸಂತೋಷವಾಗಿದೆ. ಆದರೆ ಇನ್ನೂ ಅನೇಕ ಕುಟುಂಬಗಳು ಅವರ ಪ್ರೀತಿಪಾತ್ರರನ್ನು ಇನ್ನೂ ಒತ್ತೆಯಾಳುಗಳಾಗಿ ಇರಿಸಲಾಗಿದೆ ಮತ್ತು ಅವರ ಬಿಡುಗಡೆಗಾಗಿ ನಾವು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು.

ಈ ಬಿಡುಗಡೆಯನ್ನು ದೃಢಪಡಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಉಭಯ ದೇಶಗಳ ಪುನಶ್ಚೇತನ ಮತ್ತು ಶಮನ ಪ್ರಕ್ರಿಯೆಯನ್ನು ಸರ್ಕಾರ ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದು ಘೋಷಿಸಿದ್ದಾರೆ.

”ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಹೋರಾಟಗಾರರು ನಡೆಸಿದ ದಾಳಿಯ ವೇಳೆ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಇಬ್ಬರು ಅಮೆರಿಕನ್ನರನ್ನು ಬಿಡುಗಡೆ ಮಾಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮ ಸಹ ಪ್ರಜೆಗಳು ಕಳೆದ 14 ದಿನಗಳಿಂದ ಈ ಭಯಾನಕ ಘಟನಾವಳಿಗಳಿಗೆ ಸಾಕ್ಷಿಯಾಗಿದ್ದಾರೆ. ಇವರು ಶೀಘ್ರವೇ ಭಯಭೀತರಾಗಿರುವ ತಮ್ಮ ಕುಟುಂಬಗಳ ಜತೆ ಮತ್ತೆ ಸೇರುವುದರಿಂದ ಅತೀವ ಸಂತಸವಾಗಿದೆ” ಎಂದು ಅಮೆರಿಕದ ಅಧ್ಯಕ್ಷ ಬೈಡನ್ ಹೇಳಿಕೆ ನೀಡಿದ್ದಾರೆ.

ಗಾಝಾ ಆಡಳಿತಗಾರರು ಸೆರೆ ಇರಿಸಿಕೊಂಡಿರುವ 200 ಒತ್ತೆಯಾಳುಗಳ ಪೈಕಿ ಬಿಡುಗಡೆಯಾದವರಲ್ಲಿ ರಾನನ್ ಮೊದಲಿಗರು. ನಾಗರಿಕ ಒತ್ತೆಯಾಳುಗಳ ಬಿಡುಗಡೆಗಾಗಿ ಹಮಾಸ್, ಕತಾರ್ ಹಾಗೂ ಈಜಿಪ್ಟ್ ಜತೆಗೆ ಕಾರ್ಯ ನಿರ್ವಹಿಸಲಿದ್ದು, ಇದರಿಂದ ಮತ್ತಷ್ಟು ಮಂದಿಯ ಬಿಡುಗಡೆಯ ಸುಳಿವು ಸಿಕ್ಕಿದೆ.

ಇದನ್ನೂ ಓದಿ: ‘ಇಸ್ರೇಲ್ ಸೃಷ್ಟಿಸಿದ ನಿರಾಶ್ರಿತರ ಗಾಝಾ’: ಇಸ್ರೇಲಿ ಯಹೂದಿ ಪತ್ರಕರ್ತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...