Homeಮುಖಪುಟ'ಇಸ್ರೇಲ್ ಸೃಷ್ಟಿಸಿದ ನಿರಾಶ್ರಿತರ ಗಾಝಾ': ಇಸ್ರೇಲಿ ಯಹೂದಿ ಪತ್ರಕರ್ತ

‘ಇಸ್ರೇಲ್ ಸೃಷ್ಟಿಸಿದ ನಿರಾಶ್ರಿತರ ಗಾಝಾ’: ಇಸ್ರೇಲಿ ಯಹೂದಿ ಪತ್ರಕರ್ತ

- Advertisement -
- Advertisement -

ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ನರಮೇದದ ಕುರಿತು ಅನೇಕ ದೇಶಗಳು ಖಂಡಿಸುತ್ತಿವೆ. ಅದೇ ರೀತಿ ಹಿರಿಯ ಇಸ್ರೇಲಿ ಯಹೂದಿ ಪತ್ರಕರ್ತ ಗೈಡನ್ ಲೆವಿ ಅವರು, ಇಸ್ರೇಲ್ ಸೃಷ್ಟಿಸಿದ ನಿರಾಶ್ರಿತರು ಇರುವ ಜಾಗ ಗಾಝಾ ಆಗಿದ್ದು, ಅಲ್ಲಿ ಒಂದು ದಿನವೂ ಸ್ವಾತಂತ್ರ ಇಲ್ಲದಾಗಿದೆ ಎಂದು ಟಿಪ್ಪಣಿಯೊಂದನ್ನು ಹಂಚಿಕೊಂಡಿದ್ದಾರೆ.

”ನಾವು ಅಮಾಯಕ ಪ್ಯಾಲೆಸ್ತೀನ್ ಜನರ ಮೇಲೆ ಗುಂಡು ಹಾರಿಸುತ್ತೇವೆ, ಪ್ಯಾಲೆಸ್ತೀನಿಯರ ಕಣ್ಣು ಕೀಳುತ್ತೇವೆ, ಅವರ ಮನೆಗಳಿಂದ, ಪ್ರದೇಶಗಳಿಂದ ಹೊರಹಾಕುತ್ತೇವೆ, ಅವರ ಆಸ್ತಿಪಾಸ್ತಿಗಳನ್ನು ಕಸಿದುಕೊಳ್ಳುತ್ತೇವೆ, ದರೋಡೆ ಮಾಡುತ್ತೇವೆ, ಹಾಸಿಗೆ ಮೇಲಿಂದ ಏಳಲು ಬಿಡದೆ ಎಳೆದೊಯ್ಯುತ್ತೇವೆ, ಜನಾಂಗೀಯ ಪರಿಶುದ್ದೀಕರಣ ನಡೆಸುತ್ತೇವೆ ಮತ್ತು ಊಹಿಸಲೂ ಅಸಾಧ್ಯವಾಗುವಂತಹ ರೀತಿಯಲ್ಲಿ ಗಾಝಾ ಪ್ರದೇಶದ ಮೇಲೆ ದಿಗಂಧನವನ್ನು ಮುಂದುವರಿಸುತ್ತೇವೆ. ಆದರೂ ಇವೆಲ್ಲಕ್ಕೂ ಯಾವ ಪ್ರತಿಕ್ರಿಯೆಯೂ ಬರದು, ಯಾವ ಪರಿಣಾಮವೂ ಇರದು ಎಂದು ನಂಬಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.

”ಇಂದು ಇಸ್ರೇಲಿನಲ್ಲಿ ನಡೆದಿರುವುದಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹುವೇ ಪ್ರಧಾನ ಹೊಣೆಗಾರರು. ಅವರು ಅದಕ್ಕೆ ಬೆಲೆಯನ್ನು ತೆರಲೇ ಬೇಕು. ಆದರೆ ಇದು ಅವರಿಂದ ಪ್ರಾರಂಭವಾಗಿರುವುದಲ್ಲ ಅಥವಾ ಅವರು ಹೋದ ನಂತರ ಮುಕ್ತಾಯವೂ ಆಗುವುದಿಲ್ಲ. ಈಗ ನಾವು ಬಲಿಯಾದ ಇಸ್ರೇಲಿಗಳಿಗಾಗಿಯೂ ಹೃದಯ ಬಿರಿಯುವಂತೆ ದುಃಖಿಸಬೇಕು, ಆದರೆ ಅದೇ ಸಮಯದಲ್ಲಿ ಗಾಝಾಗಾಗಿಯೂ ಅಳಬೇಕು” ಎಂದಿದ್ದಾರೆ.

”ಇಸ್ರೇಲ್ ಸೃಷ್ಟಿಸಿದ ನಿರಾಶ್ರಿತರೇ ಬಹುಪಾಲು ಇರುವ ಗಾಝಾದಲ್ಲಿ ಆದರೆ ಇಲ್ಲಿ ಜನರು ಒಂದೇ ಒಂದು ದಿನವೂ ಸ್ವಾತಂತ್ರ್ಯವನ್ನು ಅನುಭವಿಸಲಿಲ್ಲ” ಎಂದು ಗೈಡನ್ ಲೆವಿ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಗಾಜಾ ಸಂಘರ್ಷ: ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ತಯಾರಿಸುವುದಿಲ್ಲ; ಕೇರಳ ಉದ್ಯಮ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋಲ್ಕತ್ತಾ: ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದನ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆ

0
ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ಅನಾರ್ ಭಾರತದಲ್ಲಿ ನಾಪತ್ತೆಯಾದ ಎಂಟು ದಿನಗಳ ನಂತರ ಕೋಲ್ಕತ್ತಾ ಪೊಲೀಸರು ಅವರ ತುಂಡರಿಸಿದ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಕೋಲ್ಕತ್ತಾ ಪೊಲೀಸರು ಹತ್ಯೆಯು ಪೂರ್ವ ನಿಯೋಜಿತ ಎಂದು ಹೇಳಿಕೊಂಡಿದ್ದಾರೆ. ಅನಾರ್...