Homeಕರ್ನಾಟಕಜಗದೀಶ್ ಶೆಟ್ಟರ್‌ಗೆ ಐಟಿ ದಾಳಿಯ ಬೆದರಿಕೆ ಹಾಕಿದ ಬಿಜೆಪಿ: ಕಾಂಗ್ರೆಸ್ ಆರೋಪ

ಜಗದೀಶ್ ಶೆಟ್ಟರ್‌ಗೆ ಐಟಿ ದಾಳಿಯ ಬೆದರಿಕೆ ಹಾಕಿದ ಬಿಜೆಪಿ: ಕಾಂಗ್ರೆಸ್ ಆರೋಪ

- Advertisement -
- Advertisement -

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿ ಪಕ್ಷದಲ್ಲಿ ಉಳಿಸಿಕೊಳ್ಳಲು ಅವರಿಗೆ ಐಟಿ ದಾಳಿಯ ಬೆದರಿಕೆ ಹಾಕಲಾಗಿತ್ತು ಎಂದು ಕಾಂಗ್ರೆಸ್ ಹೊಸ ಬಾಂಬ್ ಸಿಡಿಸಿದೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಅವರು, ”ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಆಶ್ರಯದಲ್ಲಿ ರಾಜಕೀಯ ಆರಂಭಿಸಿದ ಪ್ರಹ್ಲಾದ್ ಜೋಶಿ ತಮ್ಮ ಅಧಿಕಾರದ ದರ್ಪದಿಂದ ಎರಡು ದಿನಗಳ ಹಿಂದೆ ಜಗದೀಶ್ ಶೆಟ್ಟರ್ ಅವರ ಮನವೊಲಿಕೆ ಪ್ರಯತ್ನದ ವೇಳೆ ಐಟಿ ದಾಳಿಯ ಬೆದರಿಕೆ ಹಾಕಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

”ಜಗದೀಶ್ ಶೆಟ್ಟರ್‌ಗೆ ನೀವು ಬಿಜೆಪಿ ತೊರೆದರೆ ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ಜೋಶಿ ಅವರು ಬೆದರಿಕೆ ಹಾಕಿದ್ದಾರೆ” ಎಂದು ರಮೇಶ್‌ ಬಾಬು ಹೇಳಿದರು.

”ಆದರೆ, ಮೂಲತಃ ಶೆಟ್ಟರ್ ವಕೀಲರಾಗಿದ್ದು, ಅವರು ಜೋಶಿ ಅವರಿಗೆ ‘ನಾನು ವಕೀಲ ನಿಮ್ಮ ಬೆದರಿಕೆಗೆ ಜಗ್ಗುವುದಿಲ್ಲ’ ಎಂದು ಹೇಳಿ ಬಿಜೆಪಿ ಬಿಡುವ ದೃಢ ನಿರ್ಧಾರಕ್ಕೆ ಬಂದರು. ಅವರು ತಮ್ಮ ಸ್ವಾಭಿಮಾನ ಹಾಗೂ ರಾಜಕೀಯ ಇಚ್ಛಾಶಕ್ತಿಗಾಗಿ ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಸೇರ್ಪಡೆಯಾಗಿದ್ದಾರೆ” ಎಂದು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್‌ನಿಂದ 4ನೇ ಪಟ್ಟಿ ಬಿಡುಗಡೆ: ಹು-ಧಾ ಸೆಂಟ್ರಲ್‌ನಿಂದ ಶೆಟ್ಟರ್ ಸ್ಪರ್ಧೆ

ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ”ಬಿಜೆಪಿ ಪ್ರಲ್ಹಾದ್ ಜೋಷಿ ಅವರನ್ನು ಶೆಟ್ಟರ್ ಅವರ ಮನೆಗೆ ಕಳುಹಿಸಿ ಐಟಿ, ಇಡಿ, ಸಿಬಿಐಗಳ ಹೆಸರಿನಲ್ಲಿ ಬೆದರಿಸುವ ಕೆಲಸ ಮಾಡಿದೆ. ಒಬ್ಬ ಹಿರಿಯ ರಾಜಕಾರಣಿಗೆ ಬೆದರಿಕೆ ಹಾಕಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಸಿ ಬಳಿಯುವ ಪ್ರಯತ್ನ. ಪ್ರಲ್ಹಾದ್ ಜೋಷಿ ಅವರು ಕೂಡಲೇ ಶೆಟ್ಟರ್ ಹಾಗೂ ರಾಜ್ಯದ ಜನರ ಕ್ಷಮೆ ಕೇಳಬೇಕು” ಎಂದು ಹೇಳಿದೆ.

”ರಾಜ್ಯ ಕಂಡಿರುವ ಕೆಲವೇ ಸಜ್ಜನ ರಾಜಕಾರಣಿಗಳಲ್ಲಿ ಜಗದೀಶ್ ಶೆಟ್ಟರ್ ಒಬ್ಬರು. ಬಹಳ ಪ್ರಾಮಾಣಿಕವಾಗಿ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ” ಎಂದು ರಮೇಶ್ ಬಾಬು ಹೇಳಿದರು.

ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ರೈಡ್ ಪ್ಲ್ಯಾನ್: ಡಿಕೆಶಿ

ಈ ರಾಜ್ಯ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ದಾಳಿ ನಡೆಸುವ ಮೂಲಕ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರನ್ನು ಮತ್ತು ಇತರೆ ಉದ್ಯಮಿಗಳನ್ನು ಹೆದರಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿಕೆ ಶಿವಕುಮಾರ್, ”ಐಟಿ ಅಧಿಕಾರಿಗಳು ಕೇವಲ ಕಾಂಗ್ರೆಸ್ ನಾಯಕರನ್ನು ಮಾತ್ರ ಗುರಿಯಾಗಿಸುತ್ತಿಲ್ಲ. ಜೊತೆಗೆ ನಮ್ಮ ನಾಯಕರ ಜೊತೆಗಿರುವ ಉದ್ದಿಮೆದಾರರನ್ನೂ ಸಹ ಗುರಿ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದರು.

”ಕಾಂಗ್ರೆಸ್ ನಾಯಕರ ಮನೆಗೆ ಬಂದು ಹೋಗುವ ‘ಬ್ಯುಸಿನೆಸ್‌ ಮನ್‌’ಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಐಟಿ ಅಧಿಕಾರಿಗಳ ದಾಳಿ ಕುರಿತು ಅವರೆಲ್ಲ ಭಯಬಿದ್ದಿದ್ದಾರೆ. ಆ ಕಾರಣದಿಂದ ಅವರು ನಮ್ಮ ಕರೆಗಳನ್ನೂ ಸ್ವೀಕರಿಸುತ್ತಿಲ್ಲ” ಎಂದು ಹೇಳಿಕೊಂಡಿದ್ದಾರೆ.

”ಐಟಿ ಅಧಿಕಾರಿಗಳು ನಮ್ಮ ಮೇಲಷ್ಟೆ ದಾಳಿ ಮಾಡುತ್ತಿದ್ದಾರೆ ಎಂದರೆ ಬಿಜೆಪಿಯಲ್ಲಿ ಇರುವವರೆಲ್ಲ ಸತ್ಯ ಹರಿಶ್ಚಂದ್ರರೇ? ಇಂತರ ರಾಜಕೀಯ ಪ್ರೇರಿತ ದಾಳಿಗಳನ್ನು ನಾವು ಎದುರಿಸುತ್ತೇವೆ” ಎಂದು  ಹೇಳಿದರು.

ಇದೇ ವೇಳೆ ಶೆಟ್ಟರ್, ಸವದಿ ಕುರಿತು ಮಾತನಾಡಿದ ಅವರು, ”ಈ ಮೊದಲು ನಮ್ಮ ಗುರಿ 140 ಸ್ಥಾನಗಳಾಗಿತ್ತು. ಆದರೆ, ಸವದಿ ಮತ್ತು ಶೆಟ್ಟರ್ ಆಗಮನದಿಂದ ನಾವು 150 ಸ್ಥಾನಗಳನ್ನು  ಗೆಲ್ಲಲಿದ್ದೇವೆ. ಲಿಂಗಾಯತ ಮತ್ತು ವಿರಶೈವ ಮತಗಳು ಈ ಚುನಾವಣೆಯಲ್ಲಿ ನಮಗೆ ಬರುತ್ತವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...