Homeಮುಖಪುಟಲೋಕಸಭೆಯಲ್ಲಿ ಬಿಜೆಪಿಯನ್ನು ಸೋಲಿಸದಿದ್ದಲ್ಲಿ ಆದಿವಾಸಿಗಳ ನಿರ್ಮೂಲನೆಯಾಗಲಿದೆ: ಜಾರ್ಖಂಡ್ ಸಿಎಂ

ಲೋಕಸಭೆಯಲ್ಲಿ ಬಿಜೆಪಿಯನ್ನು ಸೋಲಿಸದಿದ್ದಲ್ಲಿ ಆದಿವಾಸಿಗಳ ನಿರ್ಮೂಲನೆಯಾಗಲಿದೆ: ಜಾರ್ಖಂಡ್ ಸಿಎಂ

- Advertisement -
- Advertisement -

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷವನ್ನು ಸೋಲಿಸದಿದ್ದಲ್ಲಿ ಬಿಜೆಪಿ ಆದಿವಾಸಿಗಳ ಭೂಮಿಯನ್ನು ಲೂಟಿ ಮಾಡಿ ಅರಣ್ಯ ಮತ್ತು ಕಲ್ಲಿದ್ದಲು ಪ್ರದೇಶಗಳಿಂದ ಅವರನ್ನು ಹೊರಹಾಕಲಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಶನಿವಾರ ಆರೋಪಿಸಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರವು ಬುಡಕಟ್ಟು ಹಕ್ಕುಗಳನ್ನು ರಕ್ಷಿಸುವ ವಿವಿಧ ಕಾನೂನುಗಳನ್ನು ತಿದ್ದುಪಡಿ ಮಾಡಲು ಪ್ರಯತ್ನಿಸಿದೆ ಆದರೆ ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರವು ಅಂತಹ ಪ್ರಯತ್ನಗಳ ವಿರುದ್ಧ ಪ್ರತಿಭಟಿಸಲಿದೆ ಎಂದು ಹೇಳಿದ್ದಾರೆ.

ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದ ಕೊನೆಯ ದಿನ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಸದನದಲ್ಲಿ ಭಾಷಣವನ್ನು ಮಾಡಿದ್ದು, ಬಿಜೆಪಿ ಶಾಸಕರು ಸದನದಿಂದ ಹೊರ ನಡೆದಿದ್ದಾರೆ.

ಫೆಬ್ರವರಿ 23ರಿಂದ ಆರಂಭವಾದ ವಿಧಾನಸಭೆಯ ಏಳು ದಿನಗಳ ಬಜೆಟ್ ಅಧಿವೇಶನವನ್ನು ಸ್ಪೀಕರ್ ರವೀಂದ್ರ ನಾಥ್ ಮಹತೋ ಅವರು ಮುಂದೂಡಿದ್ದರು. ಅಧಿವೇಶನದ ಕೊನೆಯ ದಿನ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯ ಮಸೂದೆ-2024 ಸೇರಿದಂತೆ ನಾಲ್ಕು ಮಸೂದೆಗಳನ್ನು ಸದನದಲ್ಲಿ ಅಂಗೀಕರಿಸಲಾಗಿದೆ.

ಈ ಬಜೆಟ್ ಅಧಿವೇಶನವು ಕಳೆದ ನಾಲ್ಕು ವರ್ಷಗಳ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸುತ್ತದೆ. 2024-25ನೇ ಹಣಕಾಸು ವರ್ಷಕ್ಕೆ 1,28,900 ಕೋಟಿ ರೂಪಾಯಿಗಳ ಬಜೆಟ್‌ನ್ನು ಅಂಗೀಕರಿಸಲಾಗಿದೆ ಮತ್ತು 2029-30 ರ ವೇಳೆಗೆ ಜಾರ್ಖಂಡ್‌ನ್ನು 10 ಲಕ್ಷ ಕೋಟಿ ಆರ್ಥಿಕತೆಯನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದಿದ್ದು, ಅದರ ಅಡಿಯಲ್ಲಿ ಗ್ರಾಮ ಸಭೆಯ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ. ಅದೇ ರೀತಿ ಕಲ್ಲಿದ್ದಲು ಪ್ರದೇಶ (ಸ್ವಾಧೀನ ಮತ್ತು ಅಭಿವೃದ್ಧಿ) ಕಾಯ್ದೆ ಮತ್ತು ಚೋಟಾನಾಗಪುರಕ್ಕೆ ತಿದ್ದುಪಡಿ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಚಂಪೈ ಸೊರೆನ್ ಹೇಳಿದ್ದಾರೆ.

ತಿದ್ದುಪಡಿಗಳ ಮೂಲಕ ಅರಣ್ಯ, ಕಲ್ಲಿದ್ದಲು ಹೊಂದಿರುವ ಪ್ರದೇಶಗಳು ಮತ್ತು ಇತರ ಸ್ಥಳಗಳಿಂದ ಬುಡಕಟ್ಟು ಜನಾಂಗದವರನ್ನು ವ್ಯವಸ್ಥಿತವಾಗಿ ಓಡಿಸಲು ಕೇಂದ್ರವು ಯೋಜಿಸಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸದಿದ್ದರೆ ಆದಿವಾಸಿಗಳನ್ನು ಅವರ ನಿರ್ನಾಮ ಮಾಡುತ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿಯ ಈ ಉದ್ದೇಶದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಅವರು ಆಡಳಿತಾರೂಢ ಮೈತ್ರಿಕೂಟದ ಶಾಸಕರನ್ನು ಒತ್ತಾಯಿಸಿದ್ದು, ಬಿಜೆಪಿಯ ತಂತ್ರಗಾರಿಕೆಯನ್ನು ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ ಜಮೀನು ವಿಚಾರದಲ್ಲಿ ಅವರಿಗೆ ಜೈಲು ಸೇರಿಸಲಾಗಿದೆ, ಅವರ ಹೆಸರು ಎಲ್ಲಿಯೂ ಇಲ್ಲ. ಸಮ್ಮಿಶ್ರ ಸರ್ಕಾರವು ರಾಜ್ಯದ ಶಿಕ್ಷಣ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ಕೆಲಸ ಮಾಡಿದೆ,  ಎಲ್ಲರಿಗೂ ಆಹಾರವನ್ನು ಖಾತ್ರಿಪಡಿಸಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಬಿಲ್ಕಿಸ್ ಬಾನು ಪ್ರಕರಣ: ಕ್ಷಮಾಧಾನ ರದ್ದುಪಡಿಸಿದ ತೀರ್ಪು ಪ್ರಶ್ನಿಸಿ ಕೋರ್ಟ್‌ ಮೊರೆ ಹೋದ ಅಪರಾಧಿಗಳು 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...