Homeಮುಖಪುಟಮೊಬೈಲ್‌ನಲ್ಲಿ ಕ್ರಿಕೆಟ್‌ ವೀಕ್ಷಿಸುತ್ತಿದ್ದ ಲೊಕೊ ಪೈಲಟ್: ಆಂಧ್ರ ರೈಲು ದುರಂತದ ಕಾರಣ ಬಯಲು

ಮೊಬೈಲ್‌ನಲ್ಲಿ ಕ್ರಿಕೆಟ್‌ ವೀಕ್ಷಿಸುತ್ತಿದ್ದ ಲೊಕೊ ಪೈಲಟ್: ಆಂಧ್ರ ರೈಲು ದುರಂತದ ಕಾರಣ ಬಯಲು

- Advertisement -
ಆಂಧ್ರಪ್ರದೇಶದಲ್ಲಿ 2023ರ ಅಕ್ಟೋಬರ್ 29ರಂದು 14 ಪ್ರಯಾಣಿಕರ ಸಾವಿಗೆ ಕಾರಣವಾದ ಎರಡು ಪ್ಯಾಸೆಂಜರ್ ರೈಲುಗಳ ಅಪಘಾತಕ್ಕೆ ಇದೀಗ ಕಾರಣ ಬಯಲಾಗಿದ್ದು, ಪ್ಯಾಸೆಂಜರ್ ರೈಲುವೊಂದರ ಲೊಕೊ ಪೈಲಟ್ ಫೋನ್‌ನಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದರು ಎಂದು ತಿಳಿದು ಬಂದಿದೆ.

- Advertisement -

ಈ ಕುರಿತು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿಯನ್ನು ನೀಡಿದ್ದು, “ಇತ್ತೀಚೆಗೆ ಸಂಭವಿಸಿದ ಆಂಧ್ರ ರೈಲು ದುರಂತದಲ್ಲಿ ಲೊಕೊ ಪೈಲಟ್ ಮತ್ತು ಸಹ ಪೈಲಟ್ ಅವರು ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದರು. ಇಂಥ ಪ್ರಕರಣಗಳನ್ನು ಪತ್ತೆ ಮಾಡುವ ವ್ಯವಸ್ಥೆಯನ್ನು ನಾವು ಇದೀಗ ಅಳವಡಿಸುತ್ತಿದ್ದೇವೆ. ಈ ಮೂಲಕ ಲೋಕೊ ಪೈಲಟ್ ಹಾಗೂ ಸಹ ಪೈಲಟ್‍ಗಳು ರೈಲು ಚಲನೆ ಬಗ್ಗೆ ಗಮನ ಹರಿಸುವಂತೆ ಮಾಡುತ್ತಿದ್ದೇವೆ ಎಂದು  ಭಾರತೀಯ ರೈಲ್ವೇಯ ಹೊಸ ಸುರಕ್ಷತಾ ಕ್ರಮಗಳ ಬಗ್ಗೆ ಮಾತನಾಡುವಾಗ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.

ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಕಂಟಕಪಲ್ಲಿಯಲ್ಲಿ ಹೌರಾ-ಚೆನ್ನೈ ಮಾರ್ಗದಲ್ಲಿ 2023ರ ಅಕ್ಟೋಬರ್ 29ರಂದು ಸಂಜೆ 7 ಗಂಟೆಗೆ ರಾಯಗಢ ಪ್ಯಾಸೆಂಜರ್ ರೈಲು ವಿಶಾಖಪಟ್ಟಣಂ ಪಲಾಸ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು.

ನಾವು ಸುರಕ್ಷತೆಯತ್ತ ಗಮನ ಹರಿಸುವುದನ್ನು ಮುಂದುವರಿಸುತ್ತೇವೆ. ಪ್ರತಿ ಘಟನೆಯ ಮೂಲ ಕಾರಣವನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತೇವೆ ಮತ್ತು ಅದು ಪುನರಾವರ್ತನೆಯಾಗದಂತೆ ನಾವು ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಅಪಘಾತದ ಬಳಿಕ ಪ್ರಯಾಣಿಕರ ಸುರಕ್ಷತೆಗೆ ಹೊಸ ವ್ಯವಸ್ಥೆಯನ್ನು ಅಳವಡಿಸಿದ್ದು, ಇದರಿಂದ ಚಾಲಕ ಮತ್ತು ಸಹಾಯಕ ಚಾಲಕ ರೈಲಿನ ಚಲನೆಯ ಬಗ್ಗೆ ನಿಗಾವಹಿಸುತ್ತಿದ್ದಾರಾ ಎಂಬುದನ್ನು ತಿಳಿಯಲು ಸಾಧ್ಯವಿದೆ ಎಂದರು.

ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್) ನಡೆಸಿದ ತನಿಖಾ ವರದಿಯನ್ನು ಇನ್ನೂ ಸಾರ್ವಜನಿಕಗೊಳಿಸಬೇಕಾಗಿದ್ದರೂ, ಅಪಘಾತದ ಒಂದು ದಿನದ ನಂತರ ಪ್ರಾಥಮಿಕ ರೈಲ್ವೇ ತನಿಖೆಯು ಡಿಕ್ಕಿಗೆ ರಾಯಗಡ ಪ್ಯಾಸೆಂಜರ್ ರೈಲಿನ ಚಾಲಕ ಮತ್ತು ಸಹಾಯಕ ಚಾಲಕನನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ಅಪಘಾತದಲ್ಲಿ ಇಬ್ಬರು ಸಿಬ್ಬಂದಿಗಳು ಕೂಡ ಸಾವನ್ನಪ್ಪಿದ್ದಾರೆ.

ತಾಂತ್ರಿಕ ಕಾರಣದಿಂದಾಗಿ ನಿಲುಗಡೆಗೊಂಡಿದ್ದ ವಿಶಾಖಪಟ್ಟಣ–ರಾಯಗಢ ಪ್ರಯಾಣಿಕ ರೈಲಿಗೆ ವಿಶಾಖಪಟ್ಟಣ–ಪಲಾಸ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ರಾಯಗಢ ರೈಲಿನ ಹಿಂಬದಿಯ ಮೂರು ಬೋಗಿಗಳು ಹಳಿ ತಪ್ಪಿವೆ ಎಂದು ಈಸ್ಟ್‌ ಕೋಸ್ಟ್‌ ರೈಲ್ವೆ ಅಧಿಕಾರಿಗಳು ಮೊದಲು ಹೇಳಿದ್ದರು. ಇದೀಗ ಭೀಕರ ರೈಲು ದುರಂತಕ್ಕೆ ಕಾರಣ ಬಯಲಾಗಿದೆ.

ಇದನ್ನು ಓದಿ: ಲೋಕಸಭೆಯಲ್ಲಿ ಬಿಜೆಪಿಯನ್ನು ಸೋಲಿಸದಿದ್ದಲ್ಲಿ ಆದಿವಾಸಿಗಳ ನಿರ್ಮೂಲನೆಯಾಗಲಿದೆ: ಜಾರ್ಖಂಡ್ ಸಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...