HomeUncategorizedಸುನೆಹ್ರಿ ಬಾಗ್ ಮಸೀದಿ ಪ್ರಕರಣ HCCಗೆ ವಹಿಸಲಾಗಿದೆ: ಹೈಕೋರ್ಟ್‌ಗೆ ತಿಳಿಸಿದ ಪೊಲೀಸರು

ಸುನೆಹ್ರಿ ಬಾಗ್ ಮಸೀದಿ ಪ್ರಕರಣ HCCಗೆ ವಹಿಸಲಾಗಿದೆ: ಹೈಕೋರ್ಟ್‌ಗೆ ತಿಳಿಸಿದ ಪೊಲೀಸರು

- Advertisement -
- Advertisement -

150 ವರ್ಷಗಳಷ್ಟು ಹಳೆಯದಾದ ಸುನೆಹ್ರಿ ಬಾಗ್ ಮಸೀದಿ ಧ್ವಂಸದ ಕುರಿತ ಪ್ರಕರಣ ನಗರಾಭಿವೃದ್ಧಿ ಸಚಿವಾಲಯದ ಪಾರಂಪರಿಕ ಸಂರಕ್ಷಣಾ ಸಮಿತಿಗೆ (ಎಚ್‌ಸಿಸಿ) ವಹಿಸಲಾಗಿದೆ ಎಂದು ದೆಹಲಿ ಟ್ರಾಫಿಕ್ ಪೊಲೀಸರು ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಆ ಪ್ರದೇಶದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ದೆಹಲಿಯ ಟ್ರಾಫಿಕ್ ಪೋಲೀಸರಿಂದ  ಮನವಿಯನ್ನು ಸ್ವೀಕರಿಸಿದ ನಂತರ ನವದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ (NDMC) ಡಿಸೆಂಬರ್‌ನಲ್ಲಿ ಮಧ್ಯಕಾಲೀನ ಯುಗದ ಮಸೀದಿಯನ್ನು ತೆಗೆದುಹಾಕುವ ಬಗ್ಗೆ ಸಾರ್ವಜನಿಕ ಸೂಚನೆಯನ್ನು ನೀಡಿತ್ತು. ನಂತರ ಎನ್‌ಡಿಎಂಸಿ ಮಸೀದಿಯನ್ನು ತೆಗೆದುಹಾಕುವ ಉದ್ದೇಶಿತ ಕ್ರಮಕ್ಕೆ ಸಾರ್ವಜನಿಕ ಅಭಿಪ್ರಾಯವನ್ನು ಕೇಳಿದೆ.

ಎನ್‌ಡಿಎಂಸಿ ಪಾರಂಪರಿಕ ರಚನೆಯ ಭಾಗಗಳನ್ನು ಕೆಡವದಂತೆ ಅಥವಾ ಮಾರ್ಪಡಿಸದಂತೆ ತಡೆಯಲು ಕೋರಿ ದೆಹಲಿ ವಕ್ಫ್ ಬೋರ್ಡ್ (ಡಿಡಬ್ಲ್ಯೂಬಿ) ಮಾಡಿದ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಈ ಸೂಚನೆ ಬಂದಿತ್ತು. ಈ ನೋಟಿಸ್‌ ಪ್ರಶ್ನಿಸಿ ಮಸೀದಿಯ ಇಮಾಮ್‌ ಅಬ್ದುಲ್‌ ಅಜೀಜ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿದೆ. ದುರುದ್ದೇಶಪೂರಿತ ಉದ್ದೇಶದಿಂದ ನೋಟಿಸ್ ನೀಡಲಾಗಿದೆ ಮತ್ತು ಮಸೀದಿಯ ಉಪಸ್ಥಿತಿಯಿಂದಾಗಿ ಸಂಚಾರ ದಟ್ಟಣೆ ಉಂಟಾಗಿದೆ ಎಂಬುವುದಕ್ಕೆ ಪುರಾವೆಗಳು ಇಲ್ಲ ಎಂದು ಅಜೀಜ್ ವಾದಿಸಿದ್ದರು.

ನ್ಯಾಯಾಲಯದ ಕಲಾಪದಲ್ಲಿ ಸಂಚಾರಿ ಪೊಲೀಸರನ್ನು ಪ್ರತಿನಿಧಿಸುವ ಹಿರಿಯ ವಕೀಲ ಸಂಜಯ್ ಜೈನ್, ಎನ್‌ಡಿಎಂಸಿ ಸೂಚನೆಯನ್ನು ಪ್ರಶ್ನಿಸುವ ಅರ್ಜಿಯು ಪರಿಣಾಮಕಾರಿಯಾಗಿ ಇತ್ಯರ್ಥಗೊಂಡಿದೆ ಎಂದು ಪೀಠಕ್ಕೆ ತಿಳಿಸಿದ್ದಾರೆ. ಸಾರ್ವಜನಿಕ ಅಭಿಪ್ರಾಯಗಳನ್ನು ಪರಿಗಣಿಸಿದ ನಂತರ ವಿಷಯವನ್ನು ಎಚ್‌ಸಿಸಿಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ.

ಅಜೀಜ್ ಮತ್ತು ಡಿಡಬ್ಲ್ಯೂಬಿ ಅವರನ್ನು ಪ್ರತಿನಿಧಿಸಿದ ವಕೀಲ ವಿರಾಜ್ ದಾತಾರ್ ಮತ್ತು ಹಿರಿಯ ವಕೀಲ ಸಂಜೋಯ್ ಘೋಸ್ , ಕಾನೂನಿನ ನಿಬಂಧನೆಗಳ ಅಡಿಯಲ್ಲಿ ನೋಟಿಸ್ ನೀಡಲಾಗಲಿಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದಿದ್ದಾರೆ.

ಎಚ್‌ಸಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ನಿರ್ಣಯವನ್ನು ಎಚ್‌ಸಿಸಿ ತೆಗೆದುಕೊಳ್ಳಬೇಕು, ನಾವಲ್ಲ, ಎಚ್‌ಸಿಸಿ ಅನುಮತಿಯಿಲ್ಲದೆ ನಾವು ಒಂದು ಇಟ್ಟಿಗೆಯನ್ನು ಕೂಡ ಮುಟ್ಟಲು ಸಹ ಸಾಧ್ಯವಿಲ್ಲ ಎಂದು ಇದಕ್ಕೂ ವಕೀಲ ಶ್ರೀಹರ್ಷ ಪೀಚರ ಮೂಲಕ ಎನ್‌ಡಿಎಂಸಿ ಕೋರ್ಟ್‌ಗೆ ಹೇಳಿತ್ತು.

ಇತಿಹಾಸಕಾರರ ರಾಷ್ಟ್ರೀಯ ಮಟ್ಟದ ಸಂಘಟನೆಯಾದ ಇಂಡಿಯನ್ ಹಿಸ್ಟರಿ ಕಾಂಗ್ರೆಸ್ (IHC), ಎನ್‌ಡಿಎಂಸಿಯ ನಿರ್ಧಾರವನ್ನು ಸ್ವೀಕಾರಾರ್ಹವಲ್ಲ ಮತ್ತು ಅವಿವೇಕದ ಪರಮಾವಧಿ ಎಂದು ಕರೆದಿದೆ ಮತ್ತು ಈ ವರ್ಷದ ಆರಂಭದಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ ಇತ್ತೀಚಿನ ದಿನಗಳಲ್ಲಿ ನಮ್ಮ ಮಧ್ಯಕಾಲೀನ ವಾಸ್ತುಶಿಲ್ಪದ ಪರಂಪರೆಯನ್ನು ನಾಶಮಾಡಲು ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದೆ.

ವೃತ್ತವನ್ನು ತೆಗೆದುಹಾಕುವ ಪ್ರಸ್ತಾಪವು ಸ್ವೀಕಾರಾರ್ಹವಲ್ಲ ಮತ್ತು ಇದು ನವ ದೆಹಲಿಯ ರಸ್ತೆ ಯೋಜನೆಯ ಬಗೆಗಿನ ಅವಿವೇಕದ ಕ್ರಮ, ಈ ಮಸೀದಿಯು 2009ರಲ್ಲಿ ಐತಿಹಾಸಿಕ ಪ್ರಾಮುಖ್ಯತೆಗಾಗಿ ಹೆರಿಟೇಜ್ III ಸ್ಥಾನಮಾನವನ್ನು ಪಡೆದಿದೆ. ಸುನೆಹ್ರಿ ಬಾಗ್ ಮಸೀದಿ ಕೇವಲ ಮಸೀದಿ ಅಲ್ಲ, ಇದು ನಮ್ಮ ಹಲವಾರು ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ನಿಕಟ ಸಂಬಂಧ ಹೊಂದಿರುವ ಇತಿಹಾಸವನ್ನು ಹೊಂದಿದೆ. ನಮ್ಮ ಸಂವಿಧಾನ ಸಭೆಯ ಸದಸ್ಯರಾದ ಹಸರತ್ ಮೊಹಾನಿ ಅವರು ಸಭೆಗಳಿಗೆ ಹಾಜರಾಗುವಾಗ ಇಲ್ಲಿಯೇ ಇರುತ್ತಿದ್ದರು, ಅದರ ಸುಪ್ರಸಿದ್ಧ ಇತಿಹಾಸದ ಬಗ್ಗೆ ಕಾಳಜಿ ವಹಿಸಿ ಎಂದು ಇತಿಹಾಸಕಾರ ಎಸ್.ಇರ್ಫಾನ್ ಹಬೀಬ್ ಎಕ್ಸ್ ನಲ್ಲಿ ಬರೆದಿದ್ದಾರೆ.

ಇದನ್ನು ಓದಿ: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದ ವಕೀಲ್‌ ಹಸನ್‌ ನಿವಾಸವನ್ನು ಕೆಡವಿದ ಸ್ಥಳೀಯಾಡಳಿತ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...