Homeರಾಜಕೀಯಬಿಜೆಪಿ ಯಡವಟ್ಟು: ಗುಜರಾತ್‌ ಸರ್ಕಾರದ ಜಾಹಿರಾತಿನಲ್ಲಿ CPIM ನಾಯಕಿಯ ಚಿತ್ರ!

ಬಿಜೆಪಿ ಯಡವಟ್ಟು: ಗುಜರಾತ್‌ ಸರ್ಕಾರದ ಜಾಹಿರಾತಿನಲ್ಲಿ CPIM ನಾಯಕಿಯ ಚಿತ್ರ!

ಕೇರಳ ಬಿಜೆಪಿ ಆರ್ಯ ಅವರನ್ನು ಗುರಿಯಾಗಿಸಿಕೊಂಡು ತಿರುವನಂತಪುರಂ ಪಾಲಿಕೆಯಲ್ಲಿ ಇತ್ತೀಚೆಗೆ ದಿನಗಟ್ಟಲೆ ಪ್ರತಿಭಟನೆ ನಡೆಸಿತ್ತು

- Advertisement -
- Advertisement -

ಗುಜರಾತ್‌‌‌‌ ಸರ್ಕಾರದ ಯೋಜನೆಯೊಂದರ ಫ್ಲೆಕ್ಸ್‌‌ನಲ್ಲಿ ಕೇರಳದ ಸಿಪಿಐ(ಎಂ) ಪಕ್ಷದ ನಾಯಕಿ, ತಿರುವನಂದಪುರಂ ಪಾಲಿಕೆಯ ಮೇಯರ್ ಆರ್ಯ ರಾಜೇಂದ್ರನ್ ಅವರ ಚಿತ್ರ ಕಾಣಿಸಿಕೊಂಡಿದ್ದು, ಬಿಜೆಪಿ ವ್ಯಾಪಕ ವ್ಯಂಗಕ್ಕೀಡಾಗಿದೆ. ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದ ಮೂಲಕ ಸಬಲೀಕರಣದ ಜಾಹೀರಾತಿನಲ್ಲಿ ಆರ್ಯ ಕಾಣಸಿಕೊಂಡಿದ್ದಾರೆ.

ಮೇಯರ್ ಆರ್ಯ ಅವರ ಜೊತೆಗೆ ತಿರುವನಂದಪುರಂನ ಅಂದಿನ ಜಿಲ್ಲಾಧಿಕಾರಿ ಡಾ.ನವಜೋತ್ ಖೋಸ್ ಕೂಡಾ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಲೆಕ್ಸ್‌‌ನ ಮೇಲ್ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಚಿತ್ರಗಳಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದೇಶದ ಅತ್ಯಂತ ಕಿರಿಯ ಮೇಯರ್ ಆರ್ಯ ರಾಜೇಂದ್ರನ್‌‌ ಅವರು ಫ್ಲೆಕ್ಸ್‌ನಲ್ಲಿ ಮುಷ್ಟಿ ಹಿಡಿದ ಕೈಯನ್ನು ಮೇಲಕ್ಕೆ ಎತ್ತಿ ಹಿಡಿದಿರುವುದು ಕಂಡುಬರುತ್ತದೆ. ಫ್ಲೆಕ್ಸ್‌‌ ಗುಜರಾತಿ ಭಾಷೆಯಲ್ಲಿದ್ದು, ಅದನ್ನು ಎಲ್ಲಿ ಹಾಕಲಾಗಿದೆ ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ ಎಂದು ದಿ ವೀಕ್ ವರದಿ ಹೇಳಿದೆ. ಚಿತ್ರದ ಸತ್ಯಾಸತ್ಯತೆಯನ್ನು ಕೂಡಾ ದ ವೀಕ್ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ವರದಿ ಉಲ್ಲೇಖಿಸಿದೆ.

ಕುತೂಹಲಕಾರಿ ವಿಚಾರವೇನೆಂದರೆ ಕೇರಳ ಬಿಜೆಪಿಯು ಮೇಯರ್ ಆರ್ಯ ಅವರನ್ನು ಹಲವಾರು ವಿಷಯಗಳ ಮೇಲೆ ಗುರಿಯಾಗಿಸಿಕೊಂಡಿದ್ದು, ಇತ್ತೀಚೆಗೆ ತಿರುವನಂತಪುರಂ ಪಾಲಿಕೆಯಲ್ಲಿ ತಾತ್ಕಾಲಿಕ ನೇಮಕಾತಿಯ ವಿಷಯಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದಿನಗಟ್ಟಲೆ ಪ್ರತಿಭಟನೆ ನಡೆಸಿತ್ತು.

ಗುಜರಾತ್ ಬಿಜೆಪಿಯ ಮಾಧ್ಯಮ ಸಂಚಾಲಕ ಯಜ್ಞೇಶ್ ದವೆ ಅವರು ಪೋಸ್ಟರ್‌ಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದ್ದಾಗಿ ದಿ ವೀಕ್ ವರದಿ ಹೇಳಿದೆ.

ಇದನ್ನೂ ಓದಿ: ಮೋದಿ ಹುಬ್ಬಳ್ಳಿ ಭೇಟಿ: ಪ್ರಾಂಶುಪಾಲರಿಗೆ 100 ವಿದ್ಯಾರ್ಥಿಗಳನ್ನು ಕರೆತರುವಂತೆ ಟಾರ್ಗೆಟ್‌ ನೀಡಿದ ಶಿಕ್ಷಣ ಇಲಾಖೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...