Homeಮುಖಪುಟಅಸ್ಸಾಂ: ಬಿಜೆಪಿ ಮಿತ್ರ ಪಕ್ಷದ ಮುಖಂಡ ಹಣದ ರಾಶಿ ಮೇಲೆ ಮಲಗಿರುವ ಫೋಟೋ ವೈರಲ್

ಅಸ್ಸಾಂ: ಬಿಜೆಪಿ ಮಿತ್ರ ಪಕ್ಷದ ಮುಖಂಡ ಹಣದ ರಾಶಿ ಮೇಲೆ ಮಲಗಿರುವ ಫೋಟೋ ವೈರಲ್

- Advertisement -
- Advertisement -

ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ಅಸ್ಸಾಂನಲ್ಲಿ ಬಿಜೆಪಿ ಮಿತ್ರ ಪಕ್ಷದ ಮುಖಂಡರೊಬ್ಬರು ನೋಟುಗಳ ರಾಶಿಯ ಮೇಲೆ ಮಲಗಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. India Today NE ಪ್ರಕಾರ, ವೈರಲ್ ಹಣದ ರಾಶಿ ಮೇಲೆ ಮಲಗಿರುವ ವ್ಯಕ್ತಿಯನ್ನು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯಪಿಪಿಎಲ್) ಸದಸ್ಯ ಬೆಂಜಮಿನ್ ಬಸುಮತರಿ ಎಂದು ಗುರುತಿಸಲಾಗಿದೆ.

ಬಸುಮತರಿ ಅವರು ಉದಲಗುರಿ ಜಿಲ್ಲೆಯ ಭೈರಗುರಿಯ ಗ್ರಾಮ ಸಭೆ ಅಭಿವೃದ್ಧಿ ಸಮಿತಿ (ವಿಸಿಡಿಸಿ) ಅಧ್ಯಕ್ಷರಾಗಿದ್ದಾರೆ . ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದಲ್ಲಿ (ಬಿಟಿಆರ್‌) ಯುಪಿಪಿಎಲ್ ಪಕ್ಷವು ಪ್ರಮೋದ್ ಬೋರೊ ನೇತೃತ್ವದಲ್ಲಿದೆ ಮತ್ತು ಅಸ್ಸಾಂನಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದೆ.

ವೈರಲ್ ಫೋಟೋದಲ್ಲಿರುವ ಬೆಂಜಮಿನ್ ಬಸುಮತರಿ 500 ರೂಪಾಯಿಯ ನೋಟುಗಳ ಮೇಲೆ ಅರೆ ನಗ್ನವಾಗಿ ಮಲಗಿ ಮೈಮೇಲೆ ನೋಟುಗಳನ್ನು ಹಾಕಿಕೊಂಡಿದ್ದಾರೆ. ಈ ಫೋಟೋ ಯುಪಿಪಿಎಲ್ ಮತ್ತು ಬಿಜೆಪಿಗೆ ತೀವ್ರ ಮುಖಭಂಗ ತರಿಸಿದೆ.

ವಿರೋಧ ಪಕ್ಷದ ನಾಯಕರು ಈ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಬಸುಮತರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

ವೈರಲ್ ಪೋಟೋ ಕುರಿತು ಪ್ರತಿಕ್ರಿಯಿಸಿರುವ ಅಸ್ಸಾಂನ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ, “ಆಘಾತಕಾರಿ ಮತ್ತು ಅವಮಾನಕರ! ಯುಪಿಪಿಎಲ್‌ ನಾಯಕನೊಬ್ಬ ಹಣದ ರಾಶಿ ಮೇಲೆ ಮಲಗಿರುವ ಫೋಟೋ ನೋಡಿ. ಇದು ಭ್ರಷ್ಟಾಚಾರದ ಪ್ರದರ್ಶನವಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಪೋಸ್ಟ್ ಟ್ಯಾಗ್‌ ಮಾಡಿ ನಿಮ್ಮ ಸಂಬಂಧಿಗಳ ಸಮಗ್ರತೆಯನ್ನು ಸಾಭೀತುಪಡಿಸಲು ಇದು ಸರಿಯಾದ ಸಮಯ” ಎಂದಿದ್ದಾರೆ.

ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಇಂಡಿಯಾ ಟುಡೇ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ಐಟಿ, ಇಡಿ,ಚುನಾವಣಾ ಆಯೋಗ ಈ ಬಗ್ಗೆ ಕ್ರಮ ಕೈಗೊಳ್ಳುತ್ತದಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಚುನಾವಣಾ ಬಾಂಡ್‌ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲೇ ಅತಿ ದೊಡ್ಡ ಹಗರಣ: ಪರಕಾಲ ಪ್ರಭಾಕರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...