Homeಕರ್ನಾಟಕಬಿಜೆಪಿಯ ಭ್ರಷ್ಟಾಚಾರದ ರೇಟ್ ಕಾರ್ಡ್ ಬಿಡುಗಡೆ; ವಿಧಾನಸೌಧವು 'ವ್ಯಾಪಾರಸೌಧ' ಆಗಿದೆ ಎಂದ ಕಾಂಗ್ರೆಸ್

ಬಿಜೆಪಿಯ ಭ್ರಷ್ಟಾಚಾರದ ರೇಟ್ ಕಾರ್ಡ್ ಬಿಡುಗಡೆ; ವಿಧಾನಸೌಧವು ‘ವ್ಯಾಪಾರಸೌಧ’ ಆಗಿದೆ ಎಂದ ಕಾಂಗ್ರೆಸ್

- Advertisement -
- Advertisement -

ರಾಜ್ಯ ವಿಧಾನಸಭಾ ಚುನಾವಣೆಯ ಈ ಸಂದರ್ಭದಲ್ಲಿ ರಾಜಕೀಯ ಮುಖಂಡರ ನಡುವಿನ ವಾಕ್ಸಮರವೂ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಪಟ್ಟಿಯನ್ನು ಕಾಂಗ್ರೆಸ್ ಇಂದು ಬಿಡುಗಡೆ ಮಾಡಿದೆ.

ಎಐಸಿಸಿ ವಕ್ತಾರ ಪವನ್ ಖೇರಾ ಅವರು ಇಂದು (ಮೇ.5) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಕುರಿತ ರೇಟ್​ ಕಾರ್ಡ್​ ಬಿಡುಗಡೆ ಮಾಡಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿದ ಅವರು ”ಬಿಜೆಪಿಯು ರಾಜ್ಯವನ್ನು ರಾಜಕೀಯ ಪ್ರವಾಸದ ಕೇಂದ್ರ ಮಾಡಿಕೊಂಡಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ. ರಾಜ್ಯದಲ್ಲಿ 40% ಅಲ್ಲ 50% ಕಮಿಷನ್ ನಡೆಯುತ್ತಿದೆ. ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ಕಮಿಷನ್​, ಮಂತ್ರಿ ಹುದ್ದೆಗೆ 500 ಕೋಟಿ, ವರ್ಗಾವಣೆಗೆ 5-15 ಕೋಟಿ, ಇಂಜಿನಿಯರ್​ ಹುದ್ದೆಗೆ 1ರಿಂದ 5 ಕೋಟಿ ನೀಡಬೇಕು” ಎಂದು ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.

”ಬಿಜೆಪಿ ಜನರ ಗಮನ ಬೇರೆ ಕಡೆ ಸೆಳೆಯಲು ಪ್ರಾರಂಭ ಮಾಡಿದೆ. ಆದರೆ, ಕರ್ನಾಟಕದ ಜನ ಮಾತ್ರ ಎಲ್ಲ ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಭ್ರಷ್ಟಾಚಾರದ ರೇಟ್ ಕಾರ್ಡ್ ಬಿಡುಗಡೆಯಿಂದ ಜನರಿಗೆ ಬಿಜೆಪಿಯವರ ಬಗ್ಗೆ ಸಿಟ್ಟಿದೆ. ಭ್ರಷ್ಟಾಚಾರದ ರೇಟ್ ಕಾರ್ಡ್ ಬಗ್ಗೆ ಜನರು ಆಕ್ರೋಶಗೊಂಡಿದ್ದಾರೆ. ಇದೇ ಸಿಟ್ಟು ಬಿಜೆಪಿ ವಿರುದ್ದ ಜನರು ಓಟು ಒತ್ತುವಂತೆ ಮಾಡುತ್ತದೆ. ಬಿಜೆಪಿ ಮತ್ತೆ ಬಂದರೆ 40% ಕಮಿಷನ್ ಭ್ರಷ್ಟಾಚಾರ 80% ಆಗುತ್ತದೆ ಎಂಬ ಭಯ ಆತಂಕ ಜನರಿಗೆ ಇದೆ. ಇದೇ ಭಾವನೆಗಳು ಬಿಜೆಪಿಗೆ ಹೊಡೆತ ಕೊಡಲಿದೆ” ಎಂದರು.

ಇನ್ನು ಈ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ”2019ರಿಂದ 2023ರ ರವರೆಗೆ ಆಡಳಿತದುದ್ದಕ್ಕೂ ಲೂಟಿಯನ್ನೇ ಪರಮದೈವ ಎಂದುಕೊಂಡು ರಾಜ್ಯದ ಖಜಾನೆಯನ್ನು ಬರಿದು ಮಾಡಿದ ಬಿಜೆಪಿ ಸರ್ಕಾರ ಕನ್ನಡಿಗರನ್ನು, ಕರ್ನಾಟಕದ ಅಭಿವೃದ್ಧಿಯನ್ನು ಬೀದಿಪಾಲು ಮಾಡಿದೆ. ಮತ ಹಾಕುವ ಮುನ್ನ ಕರ್ನಾಟಕದ ಭವಿಷ್ಯವನ್ನು ಪರಿಗಣಿಸಿ” ಎಂದು ಕಾಂಗ್ರೆಸ್‌ ಟ್ವೀಟ್ ಮಾಡಿದೆ.

ಕಳೆದ ನಾಲ್ಕು ವರ್ಷಗಳಲ್ಲಿ 40 ಪರ್ಸೆಂಟ್ ಸರ್ಕಾರ ಕನ್ನಡಿಗರಿಂದ ₹1,50,000 ಕೋಟಿಗೂ ಹೆಚ್ಚು ಹಣ ಲೂಟಿ ಮಾಡಿದೆ. ಇದೇ ಗತಿಯಲ್ಲಿ ಸಾಗಿದರೆ ನಮ್ಮ ರಾಜ್ಯವೇ ನಾಶವಾಗುತ್ತದೆ. ಈ ಲೂಟಿಯನ್ನು ನಿಲ್ಲಿಸಿ! ಎಂದು ಕಾಂಗ್ರೆಸ್ ಮನವಿ ಮಾಡಿದೆ.

”ಬಿಜೆಪಿಯ ಭ್ರಷ್ಟಾಚಾರದ ರೇಟ್ ಕಾರ್ಡ್ ಇದು.. ಆಡಳಿತದುದ್ದಕ್ಕೂ ಲೂಟಿಯನ್ನೇ ಪರಮಧೈವ ಎಂದುಕೊಂಡು ರಾಜ್ಯದ ಖಜಾನೆಯನ್ನು ಬರಿದು ಮಾಡಿದ ಸರ್ಕಾರ ಕನ್ನಡಿಗರನ್ನು, ಕರ್ನಾಟಕದ ಅಭಿವೃದ್ಧಿಯನ್ನು ಬೀದಿಪಾಲು ಮಾಡಿದೆ. ಮತ ಹಾಕುವ ಮುನ್ನ ಕರ್ನಾಟಕದ ಭವಿಷ್ಯವನ್ನು ಪರಿಗಣಿಸಿ ಕಾಂಗ್ರೆಸ್ ಬೆಂಬಲಿಸ” ಎಂದು ಟ್ವೀಟ್ ಮಾಡಿದ್ದಾರೆ.

ಸಿಎಂ ಹುದ್ದೆಗೆ ₹2,500 ಕೋಟಿ

ಮಂತ್ರಿಗಳ ಹುದ್ದೆ ₹500 ಕೋಟಿ

ನೇಮಕಾತಿ ಮತ್ತು ವರ್ಗಾವಣೆ ದರ

ಕೆಎಸ್‌ಡಿಎಲ್‌ ₹5 ಕೋಟಿ –₹15 ಕೋಟಿ

ಎಂಜಿನಿಯರ್ ₹1 ಕೋಟಿ– ₹5 ಕೋಟಿ

ಸಬ್ ರಿಜಿಸ್ಟಾರ್‌ ₹ಲಕ್ಷ –₹5 ಕೋಟಿ

ಬೆಸ್ಕಾಂ ₹1 ಕೋಟಿ

ಪಿಎಸ್‌ಐ ₹80 ಲಕ್ಷ

ಸಹಾಯಕ ಪ್ರಾಧ್ಯಾಪಕ ₹50 ಲಕ್ಷ –₹70 ಲಕ್ಷ

ಉಪನ್ಯಾಸಕ ₹30 ಲಕ್ಷ –₹50 ಲಕ್ಷ

ಎಫ್‌ಡಿಎ ₹30 ಲಕ್ಷ

ಸಹಾಯಕ ಎಂಜಿನಿಯರ್ ₹30 ಲಕ್ಷ

ಬಮುಲ್ ₹25 ಲಕ್ಷ

ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್ ₹10 ಲಕ್ಷ

ಪೊಲೀಸ್ ₹10 ಲಕ್ಷ

ಹುದ್ದೆಗಳ ದರ

ಬಿಡಿಎ ಆಯುಕ್ತ ₹10 ಕೋಟಿ– ₹15 ಕೋಟಿ

ಕೆಪಿಎಸ್‌ಸಿ ಅಧ್ಯಕ್ಷ ₹5 ಕೋಟಿ –₹15 ಕೋಟಿ

ಡಿಸಿ ಮತ್ತು ಎಸ್‌ಸಿ ₹5 ಕೋಟಿ– ₹15 ಕೋಟಿ

ಉಪಕುಲಪತಿ ₹5 ಕೋಟಿ –₹10 ಕೋಟಿ

ಎಸಿ– ತಹಸೀಲ್ದಾರ್ ₹50 ಲಕ್ಷ –₹3 ಕೋಟಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆ ಗೋಹತ್ಯೆ ಮಾಡಿದ್ದಾರೆ ಎಂಬುವುದು ಸುಳ್ಳು

0
"ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ರಸ್ತೆ ಮಧ್ಯೆಯೇ ಬಹಿರಂಗವಾಗಿ ಗೋಹತ್ಯೆ ಮಾಡಿದ್ದಾರೆ" ಎಂದು ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಜೀಪ್‌ ಒಂದರ ಮುಂಭಾಗದಲ್ಲಿ ಹಸುವಿನ ಕಳೇಬರ ಕಟ್ಟಿದಂತೆ ಕಾಣುತ್ತಿದೆ. ಫ್ಯಾಕ್ಟ್‌ಚೆಕ್ : ವಿಡಿಯೋದ ಸತ್ಯಾಸತ್ಯತೆಯನ್ನು ನಾವು...