Homeಮುಖಪುಟವಿಶೇಷ ಅಧಿವೇಶನ ಚುನಾಯಿತ ಸಂಸದನಿಗೆ ಅವಹೇಳನ ಮಾಡಲು ಕರೆಯಲಾಗಿದೆಯೇ?: ಡ್ಯಾನಿಶ್‌ ಅಲಿ

ವಿಶೇಷ ಅಧಿವೇಶನ ಚುನಾಯಿತ ಸಂಸದನಿಗೆ ಅವಹೇಳನ ಮಾಡಲು ಕರೆಯಲಾಗಿದೆಯೇ?: ಡ್ಯಾನಿಶ್‌ ಅಲಿ

- Advertisement -
- Advertisement -

ಲೋಕಸಭೆಯಲ್ಲಿ ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಅವರ  ಬಗ್ಗೆ ಮತ್ತು ಮುಸ್ಲಿಂ ಸಮುದಾಯದ ಬಗ್ಗೆ ನಿಂದನೆ ಮಾಡಿದ ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಮಧ್ಯೆ ವಿಶೇಷ ಅಧಿವೇಶನವನ್ನು ಚುನಾಯಿತ ಸಂಸದನಿಗೆ ಸಮುದಾಯಕ್ಕೆ ಲಿಂಕ್‌ ಮಾಡಿ ದಾಳಿ ಮಾಡಲು ಕರೆಯಲಾಗಿದೆಯೇ? ಎಂದು ಡ್ಯಾನಿಶ್‌ ಅಲಿ ಪ್ರಶ್ನಿಸಿದ್ದಾರೆ.

ಈ ಕುರಿತು ಮಾತನಾಡಿದ ಸಂಸದ ಡ್ಯಾನಿಶ್ ಅಲಿ, ರಮೇಶ್ ಬಿಧುರಿ ವಿರುದ್ಧ ಸ್ಪೀಕರ್‌ ಕ್ರಮಕೈಗೊಳ್ಳದಿದ್ದರೆ ನಾನು ಸಂಸತ್‌ನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ಅವಹೇಳನದಿಂದ ನೊಂದು ರಾತ್ರಿಯಿಡೀ ನನಗೆ ನಿದ್ರೆ ಬಂದಿಲ್ಲ. ವಿಶೇಷ ಅಧಿವೇಶನವನ್ನು ಚುನಾಯಿತ ಸಂಸದರನ್ನು ಅವರ ಸಮುದಾಯದ ಜೊತೆ ಲಿಂಕ್‌ ಮಾಡಿ ದಾಳಿ ಮಾಡಲು(ಅವಹೇಳನ ಮಾಡಲು) ಕರೆಯಲಾಗಿದೆಯಾ ?  ಈ ಬೆಳವಣಿಗೆ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಅವರ ಪಕ್ಷ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾ ಅಥವಾ  ಅವರಿಗೆ ಪ್ರಚಾರ ನೀಡುತ್ತಾ ಎಂದು ನಾವು ನೋಡುತ್ತೇವೆ. ಇದು ದ್ವೇಷದ ಮಾತು ಎಂದು ಹೇಳಿದ್ದಾರೆ.

ಇದಲ್ಲದೆ  ಸಂಸದ ರಮೇಶ್‌ ಬಿಧುರಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸ್ಪೀಕರ್‌ಗೆ ಪತ್ರ ಬರೆದಿರುವುದಾಗಿ ಡ್ಯಾನಿಶ್‌ ಅಲಿ ಹೇಳಿದ್ದಾರೆ. ಪತ್ರದಲ್ಲಿ ಅವರು ನನ್ನ ವಿರುದ್ಧ ಅತ್ಯಂತ ಅಸಹ್ಯಕರ, ನಿಂದನೀಯ ಪದ ಬಳಕೆ  ಮಾಡಿದ್ದಾರೆ.  ಅವರು ನನ್ನ ವಿರುದ್ಧ ಬಳಸಿದ ಪದಗಳಲ್ಲಿ ‘ಭದ್ವಾ’ (ಪಿಂಪ್), ‘ಕಟ್ವಾ’ (ಸುನ್ನತಿ ಮಾಡಿಸಿಕೊಂಡವರು), ‘ಮುಲ್ಲಾ ಉಗ್ರವಾದಿ’ ಮತ್ತು ‘ಮುಲ್ಲಾ ಆತಂಕ್ವಾದಿ’  ‘(ಮುಸ್ಲಿಂ ಭಯೋತ್ಪಾದಕ) ಇತ್ಯಾದಿ ಇದೆ. ಇದು ಅತ್ಯಂತ ದುರದೃಷ್ಟಕರ ಮತ್ತು ಸ್ಪೀಕರ್ ಆಗಿ ನಿಮ್ಮ ನೇತೃತ್ವದ ಹೊಸ ಸಂಸತ್ತಿನ ಕಟ್ಟಡದಲ್ಲಿ ಇದು ನಡೆದಿದೆ. ಈ ಮಹಾನ್ ರಾಷ್ಟ್ರದ ಅಲ್ಪಸಂಖ್ಯಾತ ಸದಸ್ಯ ಮತ್ತು ಚುನಾಯಿತ ಸಂಸದನಾಗಿ ನನಗೆ ನಿಜವಾಗಿಯೂ ಹೃದಯ ವಿದ್ರಾವಕ ಎನಿಸಿದೆ ಎಂದು ಬರೆದಿದ್ದಾರೆ.

ಇನ್ನು ಅವಹೇಳನಕಾರಿ ಹೇಳಿಕೆಯನ್ನು ಕೊಟ್ಟ ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ಸ್ವಪಕ್ಷದ ಸಂಸದ ನಿಶಿಕಾಂತ್ ದುಬೆ ಟೀಕಿಸಿದ್ದು, ಇಂತಹ ಹೇಳಿಕೆಗಳು ಸುಸಂಸ್ಕೃತ ಸಮಾಜಕ್ಕೆ ಸೂಕ್ತವಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು, ತಮ್ಮ ಪಕ್ಷದ ಸಂಸದ ರಮೇಶ್ ಬಿಧುರಿ ಮತ್ತೋರ್ವ ಸಂಸದರ ವಿರುದ್ಧ ನೀಡಿದ್ದ ಕೋಮುವಾದಿ ಹೇಳಿಕೆಗಳನ್ನು ಖಂಡಿಸಿದ್ದಾರೆ ಮತ್ತು ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಅವಹೇಳನಾಕಾರಿ ಹೇಳಿಕೆ ಬಗ್ಗೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಬಿಜೆಪಿ ಸಂಸದ ಬಿಧುರಿಗೆ ಎಚ್ಚರಿಕೆಯನ್ನು ನೀಡಿದ್ದು, ಲೋಕಸಭೆಯ ಕಡತದಿಂದ ಹೇಳಿಕೆ ತೆಗೆದು ಹಾಕಿರುವುದಾಗಿ ಹೇಳಿದ್ದರು. ರಮೇಶ್ ಬಿಧುರಿ ಅವರು ನೀಡಿರುವ ಹೇಳಿಕೆಯನ್ನು ನಾಗರಿಕ ಸಮಾಜ ಸ್ವೀಕರಿಸಲು ಸಾಧ್ಯವಿಲ್ಲ. ಇದಕ್ಕೆ ಎಷ್ಟು ಖಂಡನೆ ವ್ಯಕ್ತಪಡಿಸಿದರೂ ಸಾಲದು. ಸಂಸದರ ಬಗೆಗಿನ ಹೇಳಿಕೆ ಮತ್ತು ಅಸಭ್ಯ ಪದಗಳ ಬಗ್ಗೆ ತನಿಖೆ ನಡೆಸಬೇಕು ಎಂದು ದುಬೆ ಹೇಳಿದ್ದಾರೆ.

ಬಿಜೆಪಿ ಸಂಸದರ ಹೇಳಿಕೆಗೆ ಪ್ರತಿಪಕ್ಷಗಳು ವ್ಯಾಪಕ ಖಂಡನೆಯನ್ನು ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ಪಾರ್ಟಿ ಸಂಸದರಿಗೆ ವಿವರಣೆ ಕೇಳಿ ಶೋಕಾಸ್‌ ನೊಟೀಸ್‌ ನೀಡಿದ್ದು, 15 ದಿನಗಳೊಳಗೆ ಉತ್ತರಿಸಬೇಕು ಎಂದು ಹೇಳಿದೆ.

ಇದನ್ನು ಓದಿ: ಸಂಸತ್ತಿನಲ್ಲಿ ಮುಸ್ಲಿಂ ವಿರೋಧಿ ನಿಂದನೆ: ಬಿಜೆಪಿಯ ನಿಜವಾದ ಬಣ್ಣ ಬಯಲಾಗಿದೆ ಎಂದ ಮಹುವಾ ಮೊಯಿತ್ರಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...