Homeಕರ್ನಾಟಕವೇತನ ಪಾವತಿ ವಿಳಂಬ ವಿರೋಧಿಸಿ ಬಿಎಂಟಿಸಿ ಉದ್ಯೋಗಿಗಳಿಂದ ಪ್ರತಿಭಟನೆ

ವೇತನ ಪಾವತಿ ವಿಳಂಬ ವಿರೋಧಿಸಿ ಬಿಎಂಟಿಸಿ ಉದ್ಯೋಗಿಗಳಿಂದ ಪ್ರತಿಭಟನೆ

ಕಳೆದ ಡಿಸೆಂಬರ್‌ನಲ್ಲಿ ನಿಗಮದ ನೌಕರರು, ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಹಾಗೂ ಇನ್ನೂ ಕೆಲವು ಬೇಡಿಕೆಗಳನ್ನು ಮುಂದಿಟ್ಟು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಿದ್ದರು.

- Advertisement -
- Advertisement -

ವೇತನ ಪಾವತಿ ವಿಳಂಬದ ಬಗ್ಗೆ ಸಿಐಟಿಯು ಸೇರಿದಂತೆ ಸಾರಿಗೆ ಸಂಘಗಳು ಬುಧವಾರ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಿವೆ. ಆದರೆ, ಪ್ರತಿಭಟನೆ ವೇಳೆ ಬಸ್ ಸೇವೆಗಳಿಗೆ ತೊಂದರೆಯಾಗುವುದಿಲ್ಲ ಎಂದು ಸಾರಿಗೆ ನಿಗಮ ತಿಳಿಸಿದೆ.

“ಕೆಲವು ಒಕ್ಕೂಟಗಳು ಕೇಂದ್ರ ಕಚೇರಿಗೆ ಭೇಟಿ ನೀಡಿ ಬಿಎಂಟಿಸಿ ಆಡಳಿತ ಮಂಡಳಿಗೆ ಮನವಿ ಪತ್ರವನ್ನು ಸಲ್ಲಿಸಲಿವೆ. ಬಿಎಂಟಿಸಿ ಬಸ್ ಕಾರ್ಯಾಚರಣೆ ಎಂದಿನಂತೆ ಬುಧವಾರವು ಇರಲಿದೆ”ಎಂದು ಬಸ್ ಕಾರ್ಯಾಚರಣೆಯನ್ನು ಉಲ್ಲೇಖಿಸಿ ಬಿಎಂಟಿಸಿ ಸಾರ್ವಜನಿಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಸೆಂಬರ್‌‌ ಮತ್ತು ಜನವರಿಯಲ್ಲಿ ಸಾರಿಗೆ ಉದ್ಯೋಗಿಗಳಿಗೆ ಕೇವಲ ಅರ್ಧದಷ್ಟು ವೇತನವನ್ನು ಮಾತ್ರ ನೀಡಲಾಗಿದೆ ಎಂದು ಕಾರ್ಮಿಕ ಸಂಘದ ಸದಸ್ಯರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಸರ್ಕಾರ ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಬೇಕಾದುದ್ದು ಹೀಗೆ..: ಬಸ್ ಪ್ರಯಾಣಿಕರ ವೇದಿಕೆಯ ಸಲಹೆಗಳು

ಪ್ರತಿಭಟನೆಯು ಕೇವಲ ಸಂಬಳದ ವಿಳಂಬದ ಬಗ್ಗೆ ಮಾತ್ರವಲ್ಲ. ಅದರ ಹೊರತಾಗಿ, ಯಾವುದೇ ಷರತ್ತುಗಳಿಲ್ಲದೆ ಸಾಪ್ತಾಹಿಕ ರಜೆ ನೀಡುವುದು, ಬಿಎಂಟಿಸಿಯಲ್ಲಿ ಮಹಿಳಾ ಸಿಬ್ಬಂದಿಗೆ ಕೆಲಸಕ್ಕೆ ಆದ್ಯತೆ ನೀಡುವುದು ಮತ್ತು ನೌಕರರ ಕುಂದುಕೊರತೆ ಸಮಿತಿಯನ್ನು ರಚಿಸುವುದು ಸೇರಿದಂತೆ ಹಲವು ಬೇಡಿಕೆಗಳು ಸೇರಿವೆ ಎಂದು ಕಾರ್ಮಿಕ ಸಂಘದ ಸದಸ್ಯರು ಹೇಳಿದ್ದಾರೆ.

“ಕೊರೊನಾದ ಪ್ರಭಾವದಿಂದಾಗಿ ಸಂಬಳದ ವಿಳಂಬವಾಗಿದೆ. ಸರ್ಕಾರದ ಆರ್ಥಿಕ ವಾಸ್ತವತೆಗಳನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಕಾರ್ಮಿಕರಿಗೆ ಮನವಿ ಮಾಡುತ್ತೇನೆ. ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ, ಎರಡು ದಿನಗಳಲ್ಲಿ ಎಲ್ಲಾ ಚಾಲಕರು ಮತ್ತು ಕಂಡಕ್ಟರ್‌ಗಳ ವೇತನವನ್ನು ನೀಡಲಾಗುವುದು” ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕಳೆದ ಡಿಸೆಂಬರ್‌ನಲ್ಲಿ ನಿಗಮದ ನೌಕರರು, ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಹಾಗು ಇನ್ನೂ ಕೆಲವು ಬೇಡಿಕೆಗಳನ್ನು ಮುಂದಿಟ್ಟು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ: ಎನ್‌ಆರ್‌ಐಗಳಂತೆ ವಲಸೆ ಕಾರ್ಮಿಕರು ಮನುಷ್ಯರಲ್ಲವೇ? ಸರ್ಕಾರದಿಂದ ಈ ತಾರತಮ್ಯವೇತಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...