Homeಮುಖಪುಟಬಾಯ್ಕಟ್ ಜ್ಯೊಮ್ಯಾಟೋ ಟ್ವಿಟ್ಟರ್ ಟ್ರೆಂಡ್ ಎಂಬುದೊಂದು ಮಾನಸಿಕ ರೋಗ - ಡಾ.ಶ್ರೀಧರ್

ಬಾಯ್ಕಟ್ ಜ್ಯೊಮ್ಯಾಟೋ ಟ್ವಿಟ್ಟರ್ ಟ್ರೆಂಡ್ ಎಂಬುದೊಂದು ಮಾನಸಿಕ ರೋಗ – ಡಾ.ಶ್ರೀಧರ್

- Advertisement -
- Advertisement -

ಇದು ಬಹಳ ಅತಿರೇಕದ ವರ್ತನೆಯಾಗಿದೆ. ಹಾಗೆ ನೋಡಿದರೆ ಬೇಸಾಯ ಮಾಡುವವರು ವಿವಿಧ ಜಾತಿ ಧರ್ಮಗಳಿಗೆ ಸೇರಿರುತ್ತಾರೆ. ಅವುಗಳನ್ನು ಮಾರುವವರು ಸಹ ಅಷ್ಟೇ. ಅವರ ಬಳಿ ನಾವು ಕೊಂಡುಕೊಳ್ಳುವುದಿಲ್ಲ ಎನ್ನಲಾಗುತ್ತದೆಯೇ? ಎಂದು ಮನೋರೋಗ ಶಾಸ್ತ್ರಜ್ಞರಾದ ಡಾ.ಶ್ರೀಧರ್ ರವರು ಪ್ರಶ್ನಿಸಿದ್ದಾರೆ.

ಡೆಲಿವರಿ ಬಾಯ್ ಹಿಂದೂವಲ್ಲದ ಕಾರಣಕ್ಕೆ ಜೊಮ್ಯಾಟೊ ಆರ್ಡರ್ ರದ್ದು ಮಾಡಿ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ ವಿಷಯದ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು ಮಾಧ್ಯಮಗಳಲ್ಲಿ ವಿಶೇಷವಾಗಿ ತಂತ್ರಜ್ಞಾನದ ಸಾಮಾಜಿಕ ಜಾಲತಾಣಗಳು ವಿವೇಕ ಮತ್ತು ವಿವೇಚನೆಗಳನ್ನು ಹೆಚ್ಚಿಸುವ ಬದಲು ಭಾವುಕತನಕ್ಕೆ ತಕ್ಷಣದಲ್ಲಿ ಪ್ರತಿಕ್ರಿಯೆ ಕೊಡುವಂತದ್ದನ್ನು ಉತ್ತೇಜನ ನೀಡುತ್ತಿವೆ. ಹೀಗಾಗಿ ಬಾಯ್ಕಟ್ ಜೊಮ್ಯಾಟೋ ಟ್ವಿಟ್ಟರ್ ಟ್ರೆಂಡ್ ಆಗಿರುವ ಹಿನ್ನೆಲೆಯಲ್ಲಿ ನಾವು ನಂಬರ್ ಗಳನ್ನು ತೆಗೆದುಕೊಂಡರೆ ಅವರು ತಮ್ಮ ಮೊಬೈಲ್ ನಲ್ಲಿ ಗುಂಡಿ ಒತ್ತಿದ್ದಾರೆ ಅಷ್ಟೇ, ಅವರಿಗೆ ಸ್ವತಂತ್ರ ಚಿಂತನೆಗಳಿಲ್ಲ ಎಂದು ಟೀಕಿಸಿದ್ದಾರೆ ಎಂದಿದ್ದಾರೆ.

ಅವರ ಪ್ರತಿಕ್ರಿಯೆ ದೇಹದ ಬೆರಳುಗಳು ಆ ಕ್ಷಣದಲ್ಲಿ ಒತ್ತಿದ ಗುಂಡಿ ಅಷ್ಟೇ ಆಗಿದೆ. ಅದರಲ್ಲಿ ವಿವೇಚನೆ ಮಾಡುವ ಸಾಮರ್ಥ್ಯವಾಗಲಿ, ವಿಚಾರ ಮಾಡುವಂತಹ ಶಕ್ತಿಯ ಪ್ರದರ್ಶನವಾಗಲಿ ಇಲ್ಲದಿರುವುದರಿಂದ ಅವುಗಳನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಾಗುವುದಿಲ್ಲ. ಆ ಮಂದಿಯನ್ನು ಒಂದು ಕಡೆ ಕೂಡಿಸಿ, ಪ್ರಶ್ನೆ ಕೇಳಿದರೆ ಅವರಲ್ಲಿ ವಿಚಾರವಿರುವುದಿಲ್ಲ. ಕೊನೆಗೆ ನನಗೆ ಗೊತ್ತಿಲ್ಲದೇ ಗುಂಡಿ ಒತ್ತಿಬಿಟ್ಟೇ ಎಂದು ಹೇಳಬಹುದು. ಹಾಗಾಗಿ ಸಂಖ್ಯೆ ಮುಖ್ಯವಲ್ಲ ಎಂದರು.

ಆದರೆ ಆಹಾರ ನಿರಾಕರಿಸಿ ಆ ಒಬ್ಬ ವ್ಯಕ್ತಿ ಮಾಡಿದ್ದು ಕೋಟಿ ಜನಕ್ಕೆ ಮಾಡುವ ಅವಮಾನವಾಗಿದೆ. ಅವರು ಜನಗಳ ಮಧ್ಯೆ ಬದುಕಲು ಸಾಧ್ಯವಿಲ್ಲ ಎಂದರೆ ಬೇಕಾದರೆ ಹಿಮಾಲಯಕ್ಕೆ ಹೋಗಿ ಸೇರಿಕೊಳ್ಳಲ್ಲಿ. ಇದನ್ನು ಏಕೆ ಪ್ರತಿಭಟಿಸಬೇಕೆಂದರೆ ಇದೆಲ್ಲಾ ಮಾನಸಿಕ ಅಸ್ವಸ್ಥತೆಯ ಸಂಕೇತ ಆಗಿದೆ. ಇದನ್ನು ಪ್ಯಾರನೊಯ್ಡ್ ಎಂದು ಕರೆಯುತ್ತಾರೆ.

ಅಂದರೆ ತೀವ್ರ ಭಯ ಮತ್ತು ಆತಂಕದ ಕಾರಣಕ್ಕೆ ಅತಾರ್ಕಿಕವಾಗಿ ವಾದ ಮಾಡುವ ಅತಿ ಸಂದೇಹ ಮತ್ತು ಸಂಶಯಪಡುವ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಎಂದರ್ಥ. ಬಾಯ್ಕಟ್ ಜೊಮ್ಯಾಟೋ ಎಂದು ಟ್ವೀಟ್ ಮಾಡಿರುವವರು ಅತೀ ತೀವ್ರ ಸಂದೇಹ ಮತ್ತು ಸಂಶಯದಿಂದ ಬಳಲುತ್ತಿದ್ದೀರಿ, ಆದಷ್ಟು ಬೇಗ ನೀವು ಮಾನಸಿಕ ತಜ್ಞರನ್ನು ಭೇಟಿ ಮಾಡಿದರೆ ಒಳ್ಳೆಯದು ಮನೋರೋಗ ಶಾಸ್ತ್ರಜ್ಞರಾದ ಡಾ.ಶ್ರೀಧರ್ ರವರು ಸಲಹೆ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...