Homeಮುಖಪುಟಆದಿವಾಸಿಯ ಮೇಲೆ ಮೂತ್ರ ಮಾಡಿದ ಶುಕ್ಲಾ ಮನೆ ಮರುನಿರ್ಮಾಣಕ್ಕೆ ಬ್ರಾಹ್ಮಣ ಗುಂಪಿನಿಂದ ಹಣ ಸಂಗ್ರಹ

ಆದಿವಾಸಿಯ ಮೇಲೆ ಮೂತ್ರ ಮಾಡಿದ ಶುಕ್ಲಾ ಮನೆ ಮರುನಿರ್ಮಾಣಕ್ಕೆ ಬ್ರಾಹ್ಮಣ ಗುಂಪಿನಿಂದ ಹಣ ಸಂಗ್ರಹ

- Advertisement -
- Advertisement -

ಬುಡಕಟ್ಟು ಸಮುದಾಯದ ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಆರೋಪಿಯ ಮನೆ ಮರುನಿರ್ಮಾಣಕ್ಕೆ ಸಹಾಯ ಮಾಡಲು ಮಧ್ಯಪ್ರದೇಶದ ‘ಬ್ರಾಹ್ಮಣ ಸಮಾಜ’ದ ಸದಸ್ಯರು ನಿಧಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಆರೋಪಿ ಪ್ರವೇಶ್ ಶುಕ್ಲಾ ವಾಸಿಸುತ್ತಿದ್ದ ಮನೆಯನ್ನು ಅಕ್ರಮ ಜಾಗದಲ್ಲಿ ನಿರ್ಮಿಸಲಾಗಿತ್ತು ಎನ್ನುವ ಕಾರಣಕ್ಕೆ ಸರ್ಕಾರ ನೆಲಸಮಗೊಳಿಸಿತ್ತು. ಇದೀಗ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಬ್ರಾಹ್ಮಣ ಸಮುದಾಯವು ಆಕ್ರೋಶಗೊಂಡಿದೆ. ಕುಬ್ರಿ ಗ್ರಾಮದಲ್ಲಿರುವ ಮನೆಯನ್ನು ತನ್ನ ಅಜ್ಜಿ ನಿರ್ಮಿಸಿದ್ದು, ಪ್ರವೇಶ್ ಅಥವಾ ಅವರ ತಂದೆಯ ಹೆಸರಿನಲ್ಲಿಲ್ಲ ಎಂದು ಅವರ ಪತ್ನಿ ಕಾಂಚನ್ ಹೇಳಿದ್ದಾರೆ.

ಪ್ರವೇಶ್ ಶುಕ್ಲಾ ಅವರ ತಂದೆ ರಮಾಕಾಂತ್ ಶುಕ್ಲಾ ಅವರ ಖಾತೆ ಸಂಖ್ಯೆಯು ಸಮುದಾಯದ ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡುತ್ತಿದೆ ಮತ್ತು ಜನರು ರಾಜ್ಯಾದ್ಯಂತ ಹಣವನ್ನು ದೇಣಿಗೆ ನೀಡಲು ಪ್ರಾರಂಭಿಸಿದ್ದಾರೆ.

ಈ ಬಗ್ಗೆ ಅಖಿಲ ಭಾರತೀಯ ಬ್ರಾಹ್ಮಣ ಸಮಾಜದ ರಾಜ್ಯಾಧ್ಯಕ್ಷ ಪುಷ್ಪೇಂದ್ರ ಮಿಶ್ರಾ ಮಾತನಾಡಿ, ”ಮನೆ ನೆಲಸಮಗೊಳಿಸಲಾಗಿರುವ ಕುಟುಂಬಕ್ಕೆ ಸಂಘಟನೆಯೇ ಮನೆ ನಿರ್ಮಿಸಿಕೊಡುತ್ತದೆ. ನಾವು ಆರಂಭದಲ್ಲಿ 51 ಸಾವಿರ ರೂ. ಕುಟುಂಬದ ಮುಖ್ಯಸ್ಥರ ಖಾತೆಗೆ ಹಾಕಿದ್ದೇವೆ. ಇದೀಗ ಸಹಾಯಕ್ಕಾಗಿ ನಮ್ಮ ಸಂಸ್ಥೆಯಾದ್ಯಂತ ಪ್ರಸಾರ ಮಾಡಲಾಗಿದೆ. ಜನರು ಮನೆ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದಾರೆ” ಎಂದು ಹೇಳಿದರು.

ರಮಾಕಾಂತ್ ಶುಕ್ಲಾ ಮಾತನಾಡಿ, ”ಅವನು ನನ್ನ ಮಗ, ಆದರೆ ನಾನು ಕಾನೂನು ಪಾಲಿಸುವ ನಾಗರಿಕ ಮತ್ತು ನನ್ನ ಮಗನ ವಿರುದ್ಧ ಸಂವಿಧಾನದ ಪ್ರಕಾರ ಯಾವುದೇ ಕಾನೂನು ಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ ನಮ್ಮ ಮನೆಯನ್ನು ಏಕೆ ನೆಲಸಮ ಮಾಡಲಾಯಿತು? ಸಂಸದರ ಕಾನೂನು ಹೇಳುತ್ತದೆ ಮಳೆಗಾಲದಲ್ಲಿ ಅತಿಕ್ರಮಣಗಳನ್ನು ನೆಲಸಮ ಮಾಡಬಾರದು ಎಂದು… ನಮ್ಮ ಕುಟುಂಬವು ಯಾವುದೇ ತಪ್ಪಿಲ್ಲದೆ ಸಂಕಷ್ಟ ಎದುರಿಸುತ್ತಿದೆ. ಮೊದಲೆರಡು ದಿನ ನೆರೆಹೊರೆಯವರು ಊಟಕ್ಕೆ ವ್ಯವಸ್ಥೆ ಮಾಡಿದರು. ಈಗ ನಾವು ಹೇಗಾದರೂ ನಿರ್ವಹಿಸುತ್ತಿದ್ದೇವೆ” ಎಂದು TOI ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಘಟನೆ ಖಂಡಿಸಿ ಪಕ್ಷ ತೊರೆದ ಬಿಜೆಪಿ ನಾಯಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಜನರು ನಮಗೆ 56% ಮತ ನೀಡಿದ್ದಾರೆ, ಅವರು ಪಾಕಿಸ್ತಾನಿಗಳೇ..?’; ಅಮಿತ್‌ ಶಾ ವಿರುದ್ಧ...

0
'ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕಾರಣ ಅವರು ಅಹಂಕಾರಿಯಾಗಿದ್ದಾರೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್...