Homeಮುಖಪುಟಬಿಜೆಪಿ ಸೇರುವಂತೆ ಲಂಚ ಆಮಿಷದ ಆರೋಪ; ಆಶ್ಚರ್ಯವಾಗಿಲ್ಲ ಎಂದ ಸಚಿನ್ ಪೈಲಟ್

ಬಿಜೆಪಿ ಸೇರುವಂತೆ ಲಂಚ ಆಮಿಷದ ಆರೋಪ; ಆಶ್ಚರ್ಯವಾಗಿಲ್ಲ ಎಂದ ಸಚಿನ್ ಪೈಲಟ್

ಬಿಜೆಪಿ ಸೇರಲು ಲಂಚದ ಆಮಿಷ ನೀಡಿದ್ದಾರೆ ಎಂಬ ತನ್ನ ಮೇಲಿನ ಆರೋಪವನ್ನು ಸಚಿನ್ ಪೈಲಟ್ ನಿರಾಕರಿಸಿದ್ದಾರೆ.

- Advertisement -
- Advertisement -

ಬಿಜೆಪಿಗೆ ಸೇರ್ಪಡೆಗೊಳ್ಳಲು ಲಂಚ ನೀಡಲು ಪ್ರಯತ್ನಿಸಿದ್ದೇನೆ ಎಂಬ ಕಾಂಗ್ರೆಸ್ ಶಾಸಕರ ಹೇಳಿಕೆಯಿಂದ ತಾನು ದುಃಖಿತನಾಗಿದ್ದೇನೆ ಆದರೆ ಆಶ್ಚರ್ಯವಾಗಲಿಲ್ಲ ಎಂದು ಸಚಿನ್ ಪೈಲಟ್ ಹೇಳಿದ್ದಾರೆ. ಕಳೆದ ವರ್ಷ ಬಹುಜನ ಸಮಾಜ ಪಕ್ಷದಿಂದ (ಬಿಎಸ್ಪಿ)  ಕಾಂಗ್ರೆಸ್ ಗೆ ಪಕ್ಷಾಂತರವಾಗಿದ್ದ ಗಿರಿರಾಜ್ ಸಿಂಗ್ ಮಾಲಿಂಗ ವಿರುದ್ಧ ಸೂಕ್ತ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಲಿದ್ದೇನೆ ಎಂದು ಸಚಿನ್ ಪೈಲಟ್ ಹೇಳಿದ್ದಾರೆ.

ಪ್ರಸ್ತುತ ಕಾಂಗ್ರೆಸ್ ಶಾಸಕರಾದ ಗಿರಿರಾಜ್ ಸಿಂಗ್ ಮಾಲಿಂಗ, ಸಚಿನ್ ಪೈಲಟ್ ಅವರನ್ನು ಬಿಜೆಪಿಗೆ ಸೇರುವಂತೆ ಹೇಳಿ 35 ಕೋಟಿ ರೂ.ಗಳನ್ನು ಲಂಚ ಆಮಿಷ ನೀಡಿದ್ದಾರೆ, ಆದರೆ ತಾನು ಅದನ್ನು ನಿರಾಕರಿಸಿದ್ದೇನೆ ಎಂದು ಆರೋಪಿಸಿದ್ದಾರೆ. ಈ ರಹಸ್ಯ ಪ್ರಸ್ತಾಪದ ಬಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ತಿಳಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

“ಇದು ಹೊಸ ಬೆಳವಣಿಗೆ ಅಲ್ಲ, ಡಿಸೆಂಬರ್‌ನಿಂದ ನಡೆಯುತ್ತಿದ್ದು, ನಾನು ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ಹೇಳಿದೆ. ಈ ಬಗ್ಗೆ ನಾನು ಸಚಿನ್ ಪೈಲಟ್ ಅವರೊಂದಿಗೆ ಎರಡು ಮೂರು ಬಾರಿ ಮಾತನಾಡಿದೆ, ನನಗೆ 35 ಕೋಟಿ ರೂ. ನೀಡುವುದಾಗಿ ಅವರು ಹೇಳಿದ್ದರು” ಎಂದು ಮಾಲಿಂಗ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

“ಇಂತಹ ವಿಷಯಗಳಿಂದಾಗಿ ನಾನು ಬಿಎಸ್ಪಿಯನ್ನು ತೊರೆದಿದ್ದೇನೆ. ನಾನು ಕಾಂಗ್ರೆಸ್ ತೊರೆದರೆ ಸಾರ್ವಜನಿಕರಿಗೆ ಏನು ಹೇಳಲಿ?” ಎಂದು ಅವರು ಹೇಳಿದ್ದಾರೆ.

ಸಚಿನ್ ಪೈಲಟ್ ತನ್ನ ಆರೋಪಗಳನ್ನು ಬಲವಾಗಿ ಖಂಡಿಸಿದ್ದಾರೆ “ನನ್ನ ವಿರುದ್ಧ ಎದ್ದಿರುವ ಆಧಾರರಹಿತ ಮತ್ತು ಅಸಹ್ಯಕರ ಆರೋಪಗಳಿಗೆ ನಾನು ದುಃಖಿತನಾಗಿದ್ದೇನೆ ಆದರೆ ಆಶ್ಚರ್ಯವಾಗುತ್ತಿಲ್ಲ.ಈ ಆರೋಪ ನನ್ನನ್ನು ಕೆಣಕಲು ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯ ಹಾಗೂ ಶಾಸಕನಾಗಿ ರಾಜ್ಯ ನಾಯಕತ್ವದ ವಿರುದ್ಧ ನಾನು ಎತ್ತಿದ ನ್ಯಾಯಸಮ್ಮತ ಕಾಳಜಿಯನ್ನು ನಿಗ್ರಹಿಸಲು ಮಾತ್ರವಾಗಿದೆ” ಎಂದು ಅವರು ಹೇಳಿದರು. ಈ ಆರೋಪ ಅವರ ವಿಶ್ವಾಸಾರ್ಹತೆಯ ಮೇಲೆ ಆಕ್ರಮಣ ಮಾಡುವ ಪ್ರಯತ್ನ ಎಂದು ಆರೋಪಿಸಿದರು.


ಓದಿ: ಬಿಜೆಪಿ ಸೇರಲು ಸಚಿನ್ ಪೈಲಟ್‌ರಿಂದ 35 ಕೋಟಿ ರೂ ಆಮಿಷ: ಕಾಂಗ್ರೆಸ್ ಶಾಸಕನ ಆರೋಪ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read