Homeಮುಖಪುಟಬ್ರಿಟನ್: ಉಪಚುನಾವಣೆಯಲ್ಲಿ ಎಡಪಂಥೀಯ ನಾಯಕ ಗ್ಯಾಲೋವೇಗೆ ಗೆಲುವು

ಬ್ರಿಟನ್: ಉಪಚುನಾವಣೆಯಲ್ಲಿ ಎಡಪಂಥೀಯ ನಾಯಕ ಗ್ಯಾಲೋವೇಗೆ ಗೆಲುವು

ಗಾಝಾ ಮೇಲಿನ ಇಸ್ರೇಲ್‌ ಆಕ್ರಮಣವನ್ನು ಗ್ಯಾಲೋವೇ ಖಂಡಿಸಿದ್ದರು

- Advertisement -
- Advertisement -

ಬ್ರಿಟನ್ ಸಂಸತ್‌ಗೆ ನಡೆದ ಉಪ ಚುನಾವಣೆಯಲ್ಲಿ ಹಿರಿಯ ಎಡಪಂಥೀಯ ನಾಯಕ ಜಾರ್ಜ್ ಗ್ಯಾಲೋವೇ ಜಯಗಳಿಸಿದ್ದಾರೆ. ಈ ಮೂಲಕ ಉತ್ತರ ಇಂಗ್ಲೆಂಡ್‌ನ ರೋಚ್‌ಡೇಲ್‌ ಕ್ಷೇತ್ರದ ನೂತನ ಸಂಸದನಾಗಿ ಅವರು ಆಯ್ಕೆಯಾಗಿದ್ದಾರೆ.

ಲೇಬರ್ ಪಕ್ಷದ ನಾಯಕರಾಗಿರುವ ಗ್ಯಾಲೋವೇ, ಗಾಝಾದಲ್ಲಿ ಇಸ್ರೇಲ್‌ ನಡೆಸುತ್ತಿರುವ ಆಕ್ರಮಣವನ್ನು ಕಟುವಾಗಿ ವಿರೋಧಿಸಿದ್ದರು. ಇದೇ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸಿದ್ದರು. ಗ್ಯಾಲೋವೇ ಅವರ ಗೆಲುವು ಇಸ್ರೇಲ್ ಬಗ್ಗೆ ಮೃಧು ಧೋರಣೆ ತಾಳಿರುವ ಪ್ರಧಾನಿ ರಿಶಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟು ಮಾಡಿದೆ.

ಗ್ಯಾಲೋವೆ ಅವರ ಅವರ ವರ್ಣರಂಜಿತ ಮತ್ತು ವಿವಾದಾತ್ಮಕ ರಾಜಕೀಯ ವೃತ್ತಿ ಜೀವನದ ಕೆಲವು ಗಮನಾರ್ಹ ವಿಷಯಗಳು ಇಲ್ಲಿವೆ.

ಸದ್ದಾಂ ಹುಸೇನ್ ಭೇಟಿ

ಸ್ಕಾಟಿಷ್ ನಗರವಾದ ಡುಂಡಿಯಲ್ಲಿ ಜನಿಸಿದ ಗ್ಯಾಲೋವೇ ಅವರು 1987ರಲ್ಲಿ ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಬ್ರಿಟನ್ ಸಂಸತ್ ಪ್ರವೇಶಿಸಿದ್ದರು. ಆ ಬಳಿಕ ಕೆಲವು ವಿವಾದಗಳಿಂದ ಅವರು ಪ್ರಸಿದ್ದಿ ಪಡೆದರು.

1994ರಲ್ಲಿ ಇರಾಕಿನ ನಾಯಕ ಸದ್ದಾಂ ಹುಸೇನ್ ಅವರನ್ನು ಭೇಟಿಯಾಗಿದ್ದ ಗ್ಯಾಲೋವೇ, “ಸರ್, ನಿಮ್ಮ ಧೈರ್ಯ, ಶಕ್ತಿ, ಮತ್ತು ಅವಿಶ್ರಾಂತತೆಗೆ ನಾನು ನಮಸ್ಕರಿಸುತ್ತೇನೆ” ಎಂದಿದ್ದರು. ಇದು ಭಾರೀ ಟೀಕೆಗೆ ಕಾರಣವಾಗಿತ್ತು.

ಇರಾಕ್ ಯುದ್ಧ 

ಗ್ಯಾಲೋವೇ ಅವರು ಇರಾಕ್ ಯುದ್ಧದಲ್ಲಿ ಬ್ರಿಟನ್‌ ಪಾಲ್ಗೊಳ್ಳುವುದನ್ನು ಬಹಿರಂಗವಾಗಿ ವಿರೋಧಿಸಿದ್ದರು. ಇದು 2003ರಲ್ಲಿ ಲೇಬರ್‌ ಪಕ್ಷದಿಂದ ಅವರ ಅಮಾನತಿಗೆ ಕಾರಣವಾಯಿತು. 2005ರಲ್ಲಿ ಯುದ್ಧ ವಿರೋಧಿ ರೆಸ್ಪೆಕ್ಟ್ ಪಾರ್ಟಿಗೆ ಸೇರಿದ ಗ್ಯಾಲೋವೇ, ಅದೇ ವರ್ಷ ನಡೆದ ಸಾರ್ವತ್ರಿ ಚುನಾವಣೆಯಲ್ಲಿ ಲಂಡನ್‌ನ ಬೆತ್ನಾಲ್ ಗ್ರೀನ್ ಮತ್ತು ಬೋ ಕ್ಷೇತ್ರದಿಂದ ಜಯಗಳಿಸಿದ್ದರು.

ಸೆನೆಟ್ ವಿಚಾರಣೆ

ಇರಾಕ್‌ನ ನಾಯಕ ಸದ್ದಾಂ ಹುಸೇನ್ ಸುಪರ್ದಿಯಲ್ಲಿದ್ದ ತೈಲ ಕಂಪನಿಗಳ ಕುರಿತ ಪ್ರಕರಣವೊಂದರಕ್ಕೆ ಸಂಬಂಧಪಟ್ಟಂತೆ 2005ರಲ್ಲಿ ಯುಎಸ್ ಸೆನೆಟ್ ವಿಚಾರಣೆಗೆ ಗ್ಯಾಲೋವೇ ಹಾಜರಾಗಿದ್ದರು.

ಸೆಲೆಬ್ರಿಟಿ ಬಿಗ್ ಬ್ರದರ್

2006ರಲ್ಲಿ ಗ್ಯಾಲೋವೇ ಅವರು ಸೆಲೆಬ್ರಿಟಿ ಬಿಗ್ ಬ್ರದರ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅದರಲ್ಲಿ ಬೆಕ್ಕಿನಂತೆ ನಟಿಸಿ, ನಟಿ ರುಲಾ ಲೆನ್ಸ್ಕಾ ಅವರ ಕೈಯಿಂದ ಹಾಲು ಕುಡಿದ ವಿಚಾರಕ್ಕೆ ಗ್ಯಾಲೋವೇ ಸುದ್ದಿಯಾಗಿದ್ದರು.

2012ರಲ್ಲಿ ನಡೆದ ಉಪಚುನಾವಣೆಯಲ್ಲಿ ಗ್ಯಾಲೋವೇ ಬ್ರಾಡ್‌ಫೋರ್ಡ್ ವೆಸ್ಟ್ ಕ್ಷೇತ್ರದಿಂದ ಗೆಲುವು ದಾಖಲಿಸಿದ್ದರು. ಆ ಬಳಿಕ ಈ ಬಾರಿಯ ವಿಜಯದವರೆಗೆ ಒಂಬತ್ತು ವರ್ಷಗಳ ಕಾಲ ಅವರು ಸಂಸತ್ತಿನಿಂದ ಹೊರಗಿದ್ದರು.

ಇವಿಷ್ಟು ಮಾತ್ರವಲ್ಲದೆ ಹಲವು ವಿಚಾರಗಳಲ್ಲಿ ಗ್ಯಾಲೋವೇ ಬ್ರಿಟನ್ ಪ್ರಸಿದ್ದ ರಾಜಕೀಯ ನಾಯಕರಾಗಿದ್ದಾರೆ. ಅವರ ಗೆಲುವು ರಿಶಿ ಸುನಕ್ ಸರ್ಕಾರಕ್ಕೆ ದೊಡ್ಡ ಹಿನ್ನಡೆ ಎನ್ನಬಹುದು.

ಇದನ್ನೂ ಓದಿ : ಹಿಮಾಚಲ ಸಿಎಂ ವಿರುದ್ಧ ಬಂಡಾಯ ಶಾಸಕ ವಾಗ್ದಾಳಿ; ದೆಹಲಿಗೆ ತೆರಳುವ ಮುನ್ನ ವಿಕ್ರಮಾದಿತ್ಯ ಸಿಂಗ್ ಭೇಟಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...