ರಾಜ್ಯದಲ್ಲಿ ನಡೆದ ಎರಡು ಉಪಚುನಾವಣೆಯಲ್ಲಿ ಆರ್.ಆರ್. ನಗರದಲ್ಲಿ ನಿರೀಕ್ಷಯಂತೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಭಾರಿ ಮುನ್ನಡೆಯಲ್ಲಿದ್ದು ಬಾಗಶಃ ವಿಜಯಿಯಾಗಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಮತ್ತು ಬಿಜೆಪಿ ಅಭ್ಯರ್ಥಿ ರಾಜೇಶ್‌ಗೌಡ ನಡುವೆ ನಿಕಟ ಪೈಪೋಟಿ ನಡೆಯುತ್ತಿದೆ.
ಶಿರಾ ಕ್ಷೇತ್ರದ 24 ಸುತ್ತಿನಲ್ಲಿ ಇದುವರೆಗೂ 19 ಸುತ್ತಿನ ಎಣಿಕೆ ಮುಗಿದಿದ್ದು, ಬಿಜೆಪಿಯ ರಾಜೇಶ್ ಗೌಡ 59437 ಮತಗಳನ್ನು ಪಡೆದಿದ್ದು ಮೊದಲನೇ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ 50544 ಮತಗಳನ್ನು ಪಡೆದಿದ್ದಾರೆ. ಮುಂದಿನ ಐದು ಸುತ್ತುಗಳು ಇನ್ನೂ ನಿರ್ಣಾಯವಾಗಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಭಾರಿ ಪೈಪೋಟಿ ನಡೆಸುತ್ತಿದೆ. ಇನ್ನು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ 27462 ಮತ ಪಡೆದಿದ್ದು ಭಾರಿ ಮುಖಭಂಗ ಅನುಭವಿಸಿದ್ದಾರೆ.
ಇದನ್ನೂ ಓದಿ: Bihar Election Results: JNU ಮಾಜಿ ವಿದ್ಯಾರ್ಥಿ ನಾಯಕನಿಗೆ ಭಾರಿ ಮುನ್ನಡೆ!
ನವೆಂಬರ್ 3 ರಂದು ಆರ್.ಆರ್. ನಗರ ಮತ್ತು ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು, ಹಾಗೂ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಂದ ಅಕ್ಟೋಬರ್ 28 ರಂದು ಚುನಾವಣೆ ನಡೆದಿತ್ತು.
ಎರಡು ವಿಧಾನ ಸಭಾದಲ್ಲಿ ಆರ್. ಆರ್. ನಗರ ಬಿಜೆಪಿಯ ಪಾಲಾಗುವುದು ಭಾಗಶಃ ನಿಚ್ಚಳವಾಗಿದ್ದು, ಶಿರಾ ಕ್ಷೇತ್ರದಲ್ಲಷ್ಟೇ ಮತದಾರರು, ಕೈ ಹಿಡಿಯಲಿದ್ದಾರಾ ಅಥವಾ ಕಮಲ ಮುಡಿಯಲಿದ್ದಾರಾ ಎಂಬುದು ಕೆಲವೇ ಕ್ಷಣದಲ್ಲಿ ತಿಳಿದುಬರುತ್ತದೆ.
ಇದನ್ನೂ ಓದಿ: Bihar Election Results: ಸ್ಪರ್ಧಿಸಿದ್ದ 19 ಕ್ಷೇತ್ರದಲ್ಲಿ 14 ರಲ್ಲಿ ಮುನ್ನಡೆ ಸಾಧಿಸಿದ ಸಿಪಿಐ(ಎಂ-ಎಲ್)