Homeಕರ್ನಾಟಕಜಾತಿ ಪ್ರಾತಿನಿಧ್ಯ: ಬೊಮ್ಮಾಯಿ ಸಂಪುಟಕ್ಕಿಂತ ಸಿದ್ದರಾಮಯ್ಯ ಕ್ಯಾಬಿನೆಟ್ ವೈವಿಧ್ಯಮಯ

ಜಾತಿ ಪ್ರಾತಿನಿಧ್ಯ: ಬೊಮ್ಮಾಯಿ ಸಂಪುಟಕ್ಕಿಂತ ಸಿದ್ದರಾಮಯ್ಯ ಕ್ಯಾಬಿನೆಟ್ ವೈವಿಧ್ಯಮಯ

ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಎಷ್ಟು ಜಾತಿಗಳಿಗೆ ಪ್ರಾತಿನಿಧ್ಯ ಸಿಕ್ಕಿತ್ತು? ಸಿದ್ದರಾಮಯ್ಯನವರ ಸಂಪುಟ ವಿಶಿಷ್ಟವೇಕೆ?

- Advertisement -
- Advertisement -

ಭಾರತ ಸಾಮಾಜಿಕ ವ್ಯವಸ್ಥೆಯೇ ಜಾತಿ ಆಧಾರಿತವಾದ್ದು. ಹೀಗಾಗಿ ಪ್ರಾತಿನಿಧ್ಯವೆಂಬುದು ಇಲ್ಲಿ ಮಹತ್ವ ಪಡೆದಿದೆ. ಕುರುಬ ಸಮುದಾಯದ ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ, ಯಾವ ಯಾವ ಸಮುದಾಯದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿದೆ ಎಂಬ ಚರ್ಚೆಯಾಗುತ್ತಿದೆ. ಅದರ ಜೊತೆಗೆ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಯಾರ್‍ಯಾರಿಗೆ ಪ್ರಾತಿನಿಧ್ಯ ಸಿಕ್ಕಿತ್ತು ಎಂಬುದನ್ನೂ ತುಲನೆ ಮಾಡಿ ನೋಡುವ ಅಗತ್ಯವಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಎಂಟು ಶಾಸಕರು ಸಚಿವರಾಗಿ ಕಳೆದ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು. ಸಚಿವ ಸಂಪುಟದಲ್ಲಿ ಒಟ್ಟು 34 ಮಂದಿಯ ಸೇರ್ಪಡೆಗೆ ಅವಕಾಶ ಇದೆ. 24 ಮಂದಿಯ ಸೇರ್ಪಡೆ ಮೂಲಕ ಸಂಪುಟ ಸಂಪೂರ್ಣ ಭರ್ತಿಯಾದಂತೆ ಆಗಿದೆ.

ಈ ಹಿಂದಿನ ಬೊಮ್ಮಾಯಿಯವರ ಆಡಳಿತದ ಸಚಿವ ಸಂಪುಟಕ್ಕೂ ಈಗಿನ ಸಚಿವ ಸಂಪುಟಕ್ಕೂ ಹೋಲಿಕೆ ಮಾಡಿದರೆ ಹೆಚ್ಚಿನ ಸಮುದಾಯಗಳಿಗೆ ಸಿದ್ದರಾಮಯ್ಯನವರ ಕ್ಯಾಬಿನೆಟ್‌ನಲ್ಲಿ ಅವಕಾಶ ಸಿಕ್ಕಿರುವುದು ಮೇಲು ನೋಟಕ್ಕೆ ಕಾಣುತ್ತಿದೆ.

ಜಾತಿ ಹೊರತಾಗಿ ಮಹಿಳಾ ಪ್ರಾತಿನಿಧ್ಯದಲ್ಲಿ ಎರಡು ಪಕ್ಷಗಳು ಯಥಾಸ್ಥಿತಿಯನ್ನು ಮುಂದುವರಿಸಿವೆ. ಮುಖ್ಯವಾಗಿ ರಾಜ್ಯದ ಅಲ್ಪಸಂಖ್ಯಾತ ಸಮುದಾಯವನ್ನು ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿತ್ತು. ಆದರೆ ಸಿದ್ದರಾಮಯ್ಯನವರ ಕ್ಯಾಬಿನೇಟ್‌ನಲ್ಲಿ ನಾಲ್ವರು ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ದೊರೆತಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಾತಿನಿಧ್ಯದಲ್ಲಿ ಗಣನೀಯ ಪ್ರಗತಿಯನ್ನು ಈಗಿನ ಕಾಂಗ್ರೆಸ್ ಸರ್ಕಾರ ಸಾಧಿಸಿದೆ. ಆದರೆ ಬೊಮ್ಮಾಯಿ ಅವಧಿಯಲ್ಲಿ ಪರಿಶಿಷ್ಟರಿಗೆ ಹೆಚ್ಚಿನ ಸಚಿವ ಸ್ಥಾನಗಳು ದೊರೆತಿರಲಿಲ್ಲ.

2023ರ ಕಾಂಗ್ರೆಸ್ ಸರ್ಕಾರದ ಪ್ರಾತಿನಿಧ್ಯ

ಕುರುಬರು (2 ಪ್ರಾತಿನಿಧ್ಯ): ಸಿದ್ದರಾಮಯ್ಯ (ಮುಖ್ಯಮಂತ್ರಿ), ಬೈರತಿ ಸುರೇಶ್‌

ಲಿಂಗಾಯತರು (8 ಪ್ರಾತಿನಿಧ್ಯ): ಎಂ.ಬಿ.ಪಾಟೀಲ (ಕೂಡು ಒಕ್ಕಲಿಗ ಲಿಂಗಾಯತರು), ಈಶ್ವರ ಖಂಡ್ರೆ (ಬಣಜಿಗ ಲಿಂಗಾಯತ), ಶರಣಬಸಪ್ಪ ದರ್ಶನಾಪುರ (ರಡ್ಡಿ ಲಿಂಗಾಯತ), ಶಿವಾನಂದ ಪಾಟೀಲ (ಪಂಚಮಸಾಲಿ), ಎಸ್‌.ಎಸ್‌.ಮಲ್ಲಿಕಾರ್ಜುನ (ಸಾದರ ಲಿಂಗಾಯತ), ಶರಣ ಪ್ರಕಾಶ ಪಾಟೀಲ (ಆದಿ ಬಣಜಿಗ ಲಿಂಗಾಯತ), ಲಕ್ಷ್ಮಿ ಹೆಬ್ಬಾಳಕರ್‌ (ಪಂಚಮಸಾಲಿ), ಎಚ್.ಕೆ.ಪಾಟೀಲ (ನಾಮಧಾರಿ ರೆಡ್ಡಿ- ಇವರು ಲಿಂಗಾಯತ ಸಂಪ್ರದಾಯ ಹಿನ್ನೆಲೆಯವರಲ್ಲ ಎಂಬ ವಾದವೂ ಇದೆ.)

ಒಕ್ಕಲಿಗರು (6 ಪ್ರಾತಿನಿಧ್ಯ): ಡಿ.ಕೆ.ಶಿವಕುಮಾರ್‌, ರಾಮಲಿಂಗ ರೆಡ್ಡಿ (ರೆಡ್ಡಿ ಒಕ್ಕಲಿಗ), ಕೃಷ್ಣ ಬೈರೇಗೌಡ, ಎನ್.ಚಲುವರಾಯಸ್ವಾಮಿ, ಕೆ.ವೆಂಕಟೇಶ್‌, ಡಾ.ಎಂ.ಸಿ.ಸುಧಾಕರ್‌.

ಪರಿಶಿಷ್ಟ ಜಾತಿಗಳು (6 ಪ್ರಾತಿನಿಧ್ಯ): ಬಲಗೈ (ಹೊಲೆಯ) ಸಮುದಾಯದ ಡಾ.ಎಚ್‌.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ, ಪ್ರಿಯಾಂಕ್ ಖರ್ಗೆ, ಎಡಗೈ (ಮಾದಿಗ) ಸಮುದಾಯದ ಆರ್.ಬಿ.ತಿಮ್ಮಾಪುರ, ಕೆ.ಎಚ್.ಮುನಿಯಪ್ಪ, ಭೋವಿ ಸಮುದಾಯದ ಶಿವರಾಜ ತಂಗಡಗಿ.

ಪರಿಶಿಷ್ಟ ಪಂಗಡಗಳು (3 ಪ್ರಾತಿನಿಧ್ಯ): ಸತೀಶ್ ಜಾರಕಿಹೊಳಿ, ಕೆ.ಎನ್‌.ರಾಜಣ್ಣ, ಬಿ.ನಾಗೇಂದ್ರ.

ಅಲ್ಪಸಂಖ್ಯಾತರು (4 ಪ್ರಾತಿನಿಧ್ಯ): ಜಮೀರ್ ಅಹ್ಮದ್ ಖಾನ್- ಮುಸ್ಲಿಂ, ರಹೀಂ ಖಾನ್‌- ಮುಸ್ಲಿಂ, ಕೆ.ಜೆ.ಜಾರ್ಜ್- ಕ್ರಿಶ್ಚಿಯನ್, ಡಿ.ಸುಧಾಕರ್‌- ಜೈನ.

ಇತರೆ ಜಾತಿಗಳಗ ಪ್ರಾತಿನಿಧ್ಯ

ಬ್ರಾಹ್ಮಣ: ದಿನೇಶ್‌ ಗುಂಡೂರಾವ್‌

ಮೊಗವೀರ: ಮಂಕಾಳ ಸುಬ್ಬ ವೈದ್ಯ

ಮರಾಠ: ಸಂತೋಷ್ ಎಸ್.ಲಾಡ್‌

ರಾಜು ಕ್ಷತ್ರೀಯ: ಎನ್‌.ಎಸ್.ಬೋಸರಾಜು

ಈಡಿಗ: ಮಧು ಬಂಗಾರಪ್ಪ

***

ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ

2018ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌- ಜೆಡಿಎಸ್‌ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಉರುಳಿಸಿ ಬಿಜೆಪಿ ಅಧಿಕಾರ ಹಿಡಿದಿತ್ತು. ಲಿಂಗಾಯತ ಸಮುದಾಯದ ಬಿ.ಎಸ್.ಯಡಿಯೂರಪ್ಪನವರ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಮಾಡಲಾಗಿತ್ತು. ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ 29 ಮಂದಿ ಸಂಪುಟದರ್ಜೆಯ ಸಚಿವರಿದ್ದರು.

ಬಿಜೆಪಿ ಸರ್ಕಾರದ ಜಾತಿ ಪ್ರಾತಿನಿಧ್ಯ

ಲಿಂಗಾಯತರು (10 ಪ್ರಾತಿನಿಧ್ಯ): ಬಸವರಾಜ ಬೊಮ್ಮಾಯಿ (ಸಾದರ), ಬಿ.ಸಿ.ಪಾಟೀಲ್ (ಸಾದರ), ಉಮೇಶ್ ಕತ್ತಿ (ಬಣಜಿಗರು), ಮುರುಗೇಶ್ ನಿರಾಣಿ (ಪಂಚಮಸಾಲಿ), ಶಶಿಕಲಾ ಜೊಲ್ಲೆ (ಆದಿ ಬಣಜಿಗರು), ಜೆ.ಸಿ.ಮಾಧುಸ್ವಾಮಿ (ನೊಣಬರು), ಶಂಕರ್ ಪಾಟೀಲ್ ಮುನೇನಕೊಪ್ಪ (ಪಂಚಮಸಾಲಿ), ವಿ.ಸೋಮಣ್ಣ (ಗೌಡ ಲಿಂಗಾಯತರು), ಸಿಸಿ‌ ಪಾಟೀಲ್ (ಪಂಚಮಸಾಲಿ), ಹಾಲಪ್ಪ ಆಚಾರ್ (ರಡ್ಡಿ ಲಿಂಗಾಯತ)

ಒಕ್ಕಲಿಗ (7 ಪ್ರಾತಿನಿಧ್ಯ): ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಕೆಸಿ ನಾರಾಯಣಗೌಡ, ಅರಗ ಜ್ಞಾನೇಂದ್ರ, ಗೋಪಾಲಯ್ಯ

ಕುರುಬರು (3 ಪ್ರಾತಿನಿಧ್ಯ) : ಕೆ.ಎಸ್.ಈಶ್ವರಪ್ಪ, ಬೈರತಿ‌ ಬಸವರಾಜ, ಎಂ.ಟಿ.ಬಿ.ನಾಗರಾಜ್

ಪರಿಶಿಷ್ಟ ಜಾತಿ (3 ಪ್ರಾತಿನಿಧ್ಯ): ಗೋವಿಂದ ಕಾರಜೋಳ (ಎಡಗೈ), ಪ್ರಭು ಚವ್ಹಾಣ್‌ ಔರಾದ್‌ (ಬಂಜಾರ), ಎಸ್.ಅಂಗಾರ (ಮೊಗೇರ)

ಪರಿಶಿಷ್ಟ ಪಂಗಡ (1 ಪ್ರಾತಿನಿಧ್ಯ): ಬಿ.ಶ್ರೀ ರಾಮುಲು

ಬ್ರಾಹ್ಮಣರು (2 ಪ್ರಾತಿನಿಧ್ಯ):  ಶಿವರಾಂ ಹೆಬ್ಬಾರ್, ಬಿ.ಸಿ.ನಾಗೇಶ್

ಬಿಲ್ಲವ (2 ಪ್ರಾತಿನಿಧ್ಯ): ಸುನೀಲ್‌ ಕುಮಾರ್‌, ಕೋಟಾ ಶ್ರೀನಿವಾಸ ಪೂಜಾರಿ

ನಾಯ್ಡು (1 ಪ್ರಾತಿನಿಧ್ಯ): ಮುನಿರತ್ನ

ರಜಪೂತ (1 ಪ್ರಾತಿನಿಧ್ಯ): ಆನಂದ್ ಸಿಂಗ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...