Homeಅಂಕಣಗಳುಎಲೆಮರೆಕಡುಬಡತನದಲ್ಲಿ ಬೆಳೆದು ನೂರಾರು ಮಕ್ಕಳಿಗೆ ನೆರಳಾದ ಒಂದು ಹೆಮ್ಮರ 'ಸಂತೋಷ ಗುಡ್ಡಿಯಂಗಡಿ’

ಕಡುಬಡತನದಲ್ಲಿ ಬೆಳೆದು ನೂರಾರು ಮಕ್ಕಳಿಗೆ ನೆರಳಾದ ಒಂದು ಹೆಮ್ಮರ ‘ಸಂತೋಷ ಗುಡ್ಡಿಯಂಗಡಿ’

ಶಾಲಾ ಶಿಕ್ಷಣದಲ್ಲಿ ರಂಗಭೂಮಿ ಕಸಿ ಮಾಡುತ್ತಿರುವ ಸಂತೋಷ್ ಗುಡ್ಡಿಯಂಗಡಿಯವರ ಕುರಿತು ಒಂದಿಷ್ಟು...

- Advertisement -
- Advertisement -

ಎಲೆಮರೆ-5

-ಅರುಣ್ ಜೋಳದಕೂಡ್ಲಿಗಿ.

ಶಿವಾಜಿಯ ಆಡಳಿತವಿದ್ದಾಗ ಆತನ ಸೈನ್ಯದಲ್ಲಿದ್ದ ಒಂದು ಗುಂಪು ಆತನ  ಸಾವಿನ ನಂತರ ಸಾಗರದ ಕಡೆಗೆ ವಲಸೆ ಬರುತ್ತಾರೆ. ಇಲ್ಲಿ ಹವ್ಯಕರ ಮನೆಗಳಲ್ಲಿ ಕೆಲವು ಕಾಲ ಜೀತ ಮಾಡಿಕೊಂಡಿದ್ದು, ಕಾಲಾನಂತರ ಶಿವನ ಭಕ್ತರಾಗಿದ್ದ ಇವರು ಕರಾವಳಿಯ ಕೋಟೇಶ್ವರಕ್ಕೆ ಬಂದು ಅಲ್ಲಿನ ಕೆರೆಗೆ ತಾವು ಕಟ್ಟಿದ್ದ ಲಿಂಗವನ್ನು ಎಸೆದು ಮೀನು ತಿನ್ನಲು ಶುರುಮಾಡಿದ ಪುಟ್ಟ ಸಮುದಾಯವೆ ‘ಕೂಸಾಳ’. ಜೀತ ಮಾಡುವವರನ್ನು ಒಡೆಯರು ಮನೆಯ ಮಕ್ಕಳೆಂದು ಪ್ರೀತಿಯಿಂದ ಕರೆಯುತ್ತಾರೆಂದು ನಂಬಿಸಿರುವ ‘ಕೂಸಾಳು’ ಪದವೇ ಸಮುದಾಯಕ್ಕೂ ಬಂದಿರಬಹುದು. ಉಡುಪಿ, ಕಾರ್ಕಳ, ಕುಂದಾಪುರ ಮುಂತಾದ ಕಡೆಗಳಲ್ಲಿ ನೆಲೆಸಿದ ಕೂಸಾಳುಗಳು ದಲಿತ ಅಸ್ಪೃಶ್ಯ ಸಮುದಾಯಕ್ಕೆ ಸೇರಿದ್ದು, ಇದೀಗ ತಮ್ಮನ್ನು ಆದಿ ದ್ರಾವಿಡ ಎಂದು ಕರೆದುಕೊಳ್ಳುತ್ತಾರೆ.

ಈ ಕೂಸಾಳು ಸಮುದಾಯ ‘ಕೀಳು’ ಎನ್ನುವ ಭೂತವನ್ನು ಆರಾಧಿಸುತ್ತಾರೆ. ಮರದ ಬಳಿ ಇಟ್ಟಿರುವ ಕಲ್ಲೇ ದೈವ, ಈ ದೈವದ ಹೆಸರೇ ಕೀಳು. ಹೀಗೆ ತಮ್ಮದೇ ಆದ ಪುಟ್ಟ ದೈವದ ಮನೆಗಳನ್ನು ಕಟ್ಟಿಕೊಂಡು ಪೂಜೆ ಮಾಡುತ್ತ ತಮ್ಮ ಗುರುತನ್ನು ಕಾಪಿಟ್ಟುಕೊಂಡ ಪುಟ್ಟದಾದ ಕೂಸಾಳು ಸಮುದಾಯದ ಒಳಗಿಂದ ಅಕ್ಷರದ ಬೆಳಕಿನಲ್ಲಿ ನಡೆದುಕೊಂಡು ಬಂದವರು ಸಂತೋಷ್ ಗುಡ್ಡಿಯಂಗಡಿ.

“ಮಂತ್ರವಾದಿಯಾದ ತಾತ ಸಾಗರ – ಶಿವಮೊಗ್ಗದ ಕಡೆಯ ಘಟ್ಟಕ್ಕೆ ಹೋಗುವಾಗ ಕೊಲ್ಲೂರು ಕಾಡಲ್ಲಿ ರಾತ್ರಿಯಾಗುತ್ತದೆ. ಆಗ ಮಂತ್ರಶಕ್ತಿಯಿಂದ ಎರಡು ಹುಲಿಗಳನ್ನು ವಶಮಾಡಿಕೊಂಡು ತನ್ನ ಕಾಲು ಮತ್ತು ತಲೆಯ ಬಳಿ ಕಾವಲಿಗಿರಿಸಿ ಅಜ್ಜ ಮಲಗುತ್ತಾನೆ. ದಾರಿಹೋಕ ಬ್ರಿಟೀಷ್ ಅಧಿಕಾರಿ ಅಜ್ಜನನ್ನು ನೋಡುತ್ತಾನೆ. ಈ ಮನುಷ್ಯ ಅಸಾಮಾನ್ಯ, ಇಂತವರು ನಮ್ಮ ವಿರುದ್ಧ ತಿರುಗಿಬಿದ್ದರೆ ಕಷ್ಟವೆಂದು ಆ ಮಂತ್ರವಾದಿಯನ್ನು ಏಳು ಗುಂಡಿಟ್ಟು ಕೊಂದರಂತೆ. ಅಜ್ಜಿಯ ಮೇಲೆ ಭೂತ ಬಂದು ಮೈಮೇಲೆ ಅಳಕೊಂಡು ಈ ಕತೆಯನ್ನು ಹೇಳುತ್ತಿದ್ದರು” ಎನ್ನುತ್ತ ತನ್ನ ಮುತ್ತಾತನ ಕತೆ ಹೇಳುವ ಸಂತೋಷ ತನ್ನ ಸಮುದಾಯದ ಕಥನಗಳನ್ನು ಒಡಲೊಳಗಿಟ್ಟುಕೊಂಡ ಯುವಕ.

ನಂದನ್ ನೀಲೆಕಣಿ ಅವರ ಶಿರಸಿಯ ಕಡೆ ತೋಟದಲ್ಲಿ ಜೀತ ಮಾಡುತ್ತಿದ್ದ ತಂದೆತಾಯಿಯ ಮಗನಾದ ಸಂತೋಷ್, ಪಿಯುಸಿ ಫೇಲಾಗಿ ಮನೆಯಲ್ಲಿ ಸುಳ್ಳು ಹೇಳಿ, 4 ವರ್ಷ ಗಾರೆ ಕೆಲಸ ಮಾಡುತ್ತಾನೆ. ಹಿಮಕರ ಎನ್ನುವವರ ಸಂಪರ್ಕ ಸಿಕ್ಕು ‘ನಮ್ಮ ಭೂಮಿ’ ಸಂಸ್ಥೆಯ ಬೀದಿನಾಟಕಕ್ಕೆ ಸಂತೋಷ್ ಅವರನ್ನು ಪರಿಚಯಿಸುತ್ತಾರೆ. ನಂತರ ಮುರಾರಿ ಬಲ್ಲಾಳ್ ಎನ್ನುವವರು ನೀನಾಸಂಗೆ ದಾರಿ ತೋರುತ್ತಾರೆ. ನೀನಾಸಂ ತಿರುಗಾಟದಲ್ಲಿ ಮೂರು ವರ್ಷ ಓಡಾಟ ಮಾಡಿ, ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ ಒಂದು ವರ್ಷ ಮೇಷ್ಟ್ರಾಗಿ ಕೆಲಸ ಮಾಡುತ್ತಾರೆ. ಅದೇ ಹೊತ್ತಿಗೆ 2009 ರಲ್ಲಿ ಸರಕಾರಿ ಪ್ರೌಢಶಾಲೆಯ ನಾಟಕದ ಮೇಷ್ಟ್ರಾಗಿ ಕೆಲಸಕ್ಕೆ ಸೇರುತ್ತಾರೆ. ಇದೀಗ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ಒಂದು ದಶಕ ಪೂರೈಸಿದ್ದಾರೆ.

ಶಾಲೆಗಳಲ್ಲಿ ರಂಗಶಿಕ್ಷಣಕ್ಕೆ ಇಂತದ್ದೇ ಮಾದರಿಯಿಲ್ಲ. ಆಯಾ ಶಾಲೆಯಲ್ಲಿ ಆಯ್ಕೆಯಾದ ರಂಗಶಿಕ್ಷಕರು ತಮ್ಮ ಕ್ರಿಯಾಶೀಲತೆ, ಹೊಸತನದಿಂದ ತಾವೇ ಮಾದರಿಗಳನ್ನು ರೂಪಿಸಬೇಕು. ಒಂದು ದಶಕದಲ್ಲಿ ಸಂಶೋಷ್ ಅವರು ರಂಗ ಶಿಕ್ಷಕರಾಗಿ ನಡೆಸಿದ ಪ್ರಯೋಗಗಳು ನಿಜಕ್ಕೂ ಅತ್ಯುತ್ತಮ ರಂಗಶಿಕ್ಷಣದ ಮಾದರಿಗಳಾಗಿವೆ. ಇಡೀ ಶಾಲೆಯನ್ನೇ ಒಂದು ರಂಗಮಂದಿರವನ್ನಾಗಿಸಿ, ಮಕ್ಕಳನ್ನು ರಂಗಭೂಮಿಯ ಕಣ್ಣೋಟದಿಂದ ಲೋಕವನ್ನು ನೋಡುವ ಮಾದರಿ ರೂಪಿಸಿದ್ದಾರೆ. ಈ ಪ್ರಯೋಗದಲ್ಲಿ ಮಕ್ಕಳಿಂದ ಈತನಕ 25 ನಾಟಕಗಳನ್ನು ಮಾಡಿಸಿದ್ದಾರೆ. ಸಂತೋಷ್ ಅವರು ‘ಸನಿಮಾತ್ಮೆ’ ಮತ್ತು ‘ಗಾಯ’ ಎನ್ನುವ ನಾಟಕಗಳನ್ನು ಬರೆದಿದ್ದಾರೆ. ಮಕ್ಕಳಿಗಾಗಿಯೇ ‘ಹುಲಿಯಜ್ಜ’, ‘ತಿಕ್ಕಲು ರಾಜ ತಿರಬೋಕಿ ರಾಜ್ಯ’, ‘ಭೂಮಿಗೆ ಜ್ವರ ಬಂದಿದೆ’, ‘ಜಟ್ರೋಫ ಎಂಬ ವರ’, ‘ಮಾಯದ ಡಬ್ಬಿ’, ‘ಪ್ಲಾಸ್ಟಿಕ್ ರಾಕ್ಷಸ’, ‘ಕಾಮನಬಿಲ್ಲಿನ ಸೈನಿಕರು’, ‘ಕಪ್ಪು ವಜ್ರ’ ನಾಟಕಗಳನ್ನು ಮಾಡಿಸಿದ್ದಾರೆ.

ಹೆಮ್ಮರಗಾಲ ಶಾಲೆಯಲ್ಲಿದ್ದಾಗ ಶಾಲಾ ಮಕ್ಕಳ ಬರಹಗಳನ್ನೊಳಗೊಂಡ “ಹೆಮ್ಮರ” ಕೈಬರಹದ ಮಾಸಿಕವನ್ನು ಸಂತೋಷ್‌ರವರು ಬಹಳ ವರ್ಷ ಪ್ರಕಟಿಸಿದ್ದಾರೆ. ಅದು ಮಕ್ಕಳ ವಿಶೇಷ ಪ್ರತಿಭೆಯನ್ನು ಅನಾವರಣಗೊಳಿಸಲು, ಮಕ್ಕಳಲ್ಲಿ ಓದಲು, ಬರೆಯಲು ದೊಡ್ಡ ಸ್ಫೂರ್ತಿಯನ್ನು ನೀಡಿತ್ತು.

ಸ್ವೀಡನ್‌ನ 16 ವರ್ಷದ ಶಾಲಾ ಬಾಲಕಿ ಗ್ರೇಟಾ ಥನ್ಬರ್ಗ್ ಹವಾಮಾನ ವೈಪರೀತ್ಯ ಕಂಡು 2018 ರಲ್ಲಿ ‘ಸ್ಕೂಲ್ ಸ್ಟ್ರೈಕ್ ಫಾರ್ ಕ್ಲೈಮೆಟ್/ ಪ್ರೈಡೇಸ್ ಫಾರ್ ಫ್ಯೂಚರ್’ ಅಭಿಯಾನ ಆರಂಭಿಸಿದಳು. ಸೆಪ್ಟಂಬರ್ 23 ರಂದು ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ‘ನಿಮಗೆಷ್ಟು ಧೈರ್ಯ’? ನೀವು ನಿಮ್ಮ ಖಾಲಿ ಮಾತುಗಳಿಂದ ನನ್ನ ಬಾಲ್ಯ, ಕನಸುಗಳನ್ನು ಚೂರಾಗಿಸಿದ್ದೀರಿ ಎಂದು ಜಾಗತಿಕ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಳು. ಗ್ರೇಟಾ ಪ್ರಭಾವದಿಂದ ಸಂತೋಷ್ ತಮ್ಮ ಶಾಲೆಯ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಿ ‘ನಾಳೆಗಳು ನಮ್ಮದು’ ಎನ್ನುವ ಧ್ಯೇಯವಾಕ್ಯದೊಂದಿಗೆ ‘ನಿಮ್ಮ ಕಸ ನಿಮಗೆ’ ಎಂಬ ಅಭಿಯಾನವನ್ನು ಆರಂಭಿಸಿದರು. ಉತ್ಪಾದಕ ಕಂಪನಿಗಳಿಗೇ ಅವರ ಪ್ಲಾಸ್ಟಿಕ್ ಕಸವನ್ನು ಪೋಸ್ಟ್ ಮಾಡುವ ವಿಶಿಷ್ಟ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣಕ್ಕೆ ಹೆಗ್ಗಡನಳ್ಳಿ ಮಕ್ಕಳು ರಾಜ್ಯವ್ಯಾಪಿ ಗಮನ ಸೆಳೆಯುತ್ತಿದ್ದಾರೆ. ಇದು ಇಡೀ ದೇಶಕ್ಕೆ ಮಾದರಿಯಾಗಿದೆ.

ಸಂತೋಷ್ ಒಳ್ಳೆಯ ಕಥೆಗಾರ ಕೂಡ. ಅವರ ‘ಕೊರಬಾಡು’ ಕಥಾಸಂಕಲನ ಭಿನ್ನ ಪ್ರಯೋಗ. ಅಷ್ಟು ಚರ್ಚೆಗೆ ಬಾರದ ಈ ಸಂಕಲನದಲ್ಲಿ ದೇವನೂರು ಮಾದರಿಯ ಕಥನ ಶೈಲಿಯನ್ನು ಅನುಕರಿಸುತ್ತಲೇ ಅದನ್ನು ಮೀರಲು ಪ್ರಯತ್ನಿಸಲಾಗಿದೆ. ಬಹುಶಃ ದೇವನೂರೋತ್ತರ ನಂಜನಗೂಡಿನ ಜನರ ನುಡಿಗಟ್ಟನ್ನು ಸಂತೋಷ್ ಅವರ ಕತೆಗಳಲ್ಲಿ ಕಾಣಬಹುದು. ಕಥನ ಶೈಲಿಯಲ್ಲಿಯೂ ದೇವನೂರರ ಮಾದರಿಯನ್ನು ಹೊಸದಾಗಿ ವಿಸ್ತರಿಸಲು ಪ್ರಯತ್ನಿಸಿದ್ದಾರೆ. ಸಂತೋಷ್ ನಾಟಕದ ಹಿನ್ನೆಲೆಯವರಾದ ಕಾರಣ ಈ ಕತೆಗಳಲ್ಲಿನ ನಾಟಕೀಯ ಗುಣ ವಿಶಿಷ್ಟವಾಗಿ ಮೂಡಿಬಂದಿದೆ. ಹೊಸ ತಲೆಮಾರಿನ ಬರಹಗಾರರು ಓದಲೇಬೇಕಾದ ಕಥಾ ಸಂಕಲನವಿದು. ಹೀಗೆ ಸಂತೋಷ್ ತನ್ನದೇ ಲೋಕದಲ್ಲಿ ನಡೆಸುತ್ತಿರುವ ಕ್ರಿಯಾಶೀಲ ಚಟುವಟಿಕೆಗಳು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ನಮ್ಮೂರ ಸಂತೋಷ್ ಗುಡ್ಡಿಯಂಗಡಿಯವರ ಕುರಿತು ಹೆಮ್ಮೆಯೆನಿಸುತ್ತದೆ. ಲೇಖನಕ್ಕಾಗಿ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...