Homeಮುಖಪುಟತಮಿಳುನಾಡಿನಲ್ಲಿ ಕೋಮು ರಾಜಕೀಯ ಮಾಡಲೋಗಿ ಮತ್ತೆ ಕೈಸುಟ್ಟುಕೊಂಡ ಬಿಜೆಪಿ..

ತಮಿಳುನಾಡಿನಲ್ಲಿ ಕೋಮು ರಾಜಕೀಯ ಮಾಡಲೋಗಿ ಮತ್ತೆ ಕೈಸುಟ್ಟುಕೊಂಡ ಬಿಜೆಪಿ..

- Advertisement -
- Advertisement -

ಶತಾಯಗತಾಯ ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಬಿಜೆಪಿಗೆ ಸೋಲಿನ ಮೇಲೆ ಸೋಲುಗಳು ಎದುರಾಗಿವೆ. ದೇಶದಲ್ಲಿಯೇ ಭಾರೀ ಬಹುಮತವನ್ನು ಹೊಂದಿರುವ ಬಿಜೆಪಿ ದಕ್ಷಿಣದ ತಮಿಳುನಾಡಿನಲ್ಲಿ ಒಂದೂ ಸ್ಥಾನ ಗೆದ್ದಿಲ್ಲ.

ಅಷ್ಟು ಮಾತ್ರವಲ್ಲ ಪ್ರತಿ ಭಾರೀ ಮೋದಿ ತಮಿಳುನಾಡಿಗೆ ಭೇಟಿ ನೀಡಿದಾಗಲೆಲ್ಲಾ ಗೋಬ್ಯಾಕ್‌ ಮೋದಿ ಎಂಬ ಹ್ಯಾಷ್‌ಟ್ಯಾಗ್‌ಗಳು ಟ್ವಿಟ್ಟರ್‌ನಲ್ಲಿ ಸದ್ದು ಮಾಡುತ್ತವೆ. ಆದರೂ ಛಲಬಿಡದ ಬಿಜೆಪಿ ಏನಾದರೂ ಮಾಡಿ ನೆಲೆ ಕಂಡುಕೊಳ್ಳಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಬಳಸುತ್ತಿದೆ. ಕಳೆದ ತಿಂಗಳು ಚೀನಾದ ಅಧ್ಯಕ್ಷರನ್ನು ತಮಿಳುನಾಡಿನ ಮಾಮಲ್ಲಪುರಂಗೆ ಕರೆದುಕೊಂಡು ಹೋಗಿ ಪುಸಿ ಹೊಡೆದಿದ್ದ ಮೋದಿಪಡೆ ಈ ಬಾರಿ ತಮಿಳಿನ ಸಾಂಸ್ಕೃತಿಕ ಸಾಹಿತ್ಯಕ ಲೋಕಕ್ಕೆ ಪ್ರವೇಶಿಸಲು ನೋಡಿ ಕೈಸುಟ್ಟುಕೊಂಡಿದೆ.

ತಮಿಳಿನ ಪ್ರಖಾತ್ಯ ಕವಿ ತಿರುವಳ್ಳುವರ್‌ ಎಂದರೆ ಎಲ್ಲರಿಗೂ ಪ್ರೀತಿ. ತಮಿಳರಿಗೆ ಮಾತ್ರವಲ್ಲದೇ ಕರ್ನಾಟಕದಲ್ಲಿಯೂ ಕೂಡ ತಿರುವಳ್ಳುವರ್‌ ಪ್ರತಿಮೆ ನಿರ್ಮಿಸಿ ಗೌರವಿಸಲಾಗಿದೆ. ಇಂತಹ ತಿರುವಳ್ಳುವರ್‌ರವರ ಭಾವಚಿತ್ರವನ್ನು ಬಿಜೆಪಿ ತಿರುಚಲು ಹೋಗಿ ಸಿಕ್ಕಿಬಿದ್ದಿದೆ. ಬಿಳಿ ಬಣ್ಣದ ವಸ್ತ್ರ ಧರಿಸಿರುವ ತಿರುವಳ್ಳುವರ್‌ರವರ ಭಾವಚಿತ್ರಗಳು ತಮಿಳುನಾಡಿನ ಎಲ್ಲಾ ಮನೆಗಳಲ್ಲೂ ಮನೆಮಾತಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಬಿಜೆಪಿಗರೂ ತಿರುವಳ್ಳುವರ್‌ ಹಿಂದೂ ಧರ್ಮದವರಾದ್ದರಿಂದ ಅವರ ಭಾವಚಿತ್ರ ಕೇಸರಿ ಬಣ್ಣದಲ್ಲಿರಬೇಕೆಂದು ಬಯಸಿ ಕೇಸರಿ ಬಣ್ಣದ ಭಾವಚಿತ್ರಗಳನ್ನು ಟ್ವೀಟ್‌ ಮಾಡಿದ್ದಾರೆ.

ಇದು ತಮಿಳರ ಸ್ವಾಭಿಮಾನವನ್ನು ಬಡಿದೆಬ್ಬಿಸಿದೆ. ಕೂಡಲೇ ’ಬಿಜೆಪಿ ತಿರುವಳ್ಳುವರ್‌ಗೆ ಅವಮಾನಿಸಿದ” #BJPInsultsThiruvalluvar ಎಂದು ಆರೋಪಿಸಿ ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಮಾಡಿದ್ದಾರೆ.

ತಮಿಳುನಾಡಿನಲ್ಲಿ 1000 ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಚಳುವಳಿಗಳು ನಡೆದಿವೆ. ಎಡ ಅಥವಾ ಬಲವಾಗಿರಲಿ ಅವರಲ್ಲಿ ಯಾರೂ ಕೂಡ ತಿರುವಳ್ಳುವರ್‌ರವರಿಗೆ ಕೋಮು ಬಣ್ಣವನ್ನು ನೀಡಿರಲಿಲ್ಲ ಅಥವಾ  ಅವರ ಸಿದ್ಧಾಂತಕ್ಕೆ ಬಣ್ಣ ಕೊಟ್ಟಿರಲಿಲ್ಲ. ಆದರೀಗ ಬಿಜೆಪಿಯ ಕೋಮುರಾಜಕೀಯಕ್ಕೆ ತಿರುವಳ್ಳುವರ್ ಸಹ ಉಳಿದಿಲ್ಲ ಎಂಬುದು ಬೇಸರದ ಸಂಗತಿ ಎಂದು ಹಲವು ಜನ ಅಭಿಪ್ರಾಯಪಟ್ಟಿದ್ದಾರೆ.

ಮಹಾನ್ ಕವಿ ತಿರುವಳ್ಳುವರ್ ಅವರಿಗೆ ಕೇಸರಿ ಬಣ್ಣ ನೀಡಿ ಬಿಜೆಪಿ ಅವಮಾನಿಸಿದೆ. ತಿರುವಳ್ಳುವರ್ ಅವರ ಕೆಲಸವನ್ನು ವಿಶ್ವದಾದ್ಯಂತ ಜಾತ್ಯತೀತ ಮನೋಭಾವದಿಂದ ಸ್ವೀಕರಿಸಲಾಗಿದೆ. ಈ ವಿವಾದವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಶೀಸ್‌ ವಿವೇಕ್‌ ಎಂಬುವವರು ಆಗ್ರಹಿಸಿದ್ದಾರೆ.

ಇಂದು ನಾನು ತುಂಬಾ ದುಃಖಿತನಾಗಿದ್ದೇನೆ. ನನ್ನ ಸಂಸ್ಕೃತಿ, ಸಾಹಿತ್ಯ, ಜನರು ಮತ್ತು ಸ್ಥಳಗಳೆಲ್ಲವೂ ಹಿಂದುತ್ವದಿಂದ ಅಪಾಯದಲ್ಲಿದೆ ಎಂದು ನಾವೆಲ್ಲರೂ ಸ್ಪಷ್ಟವಾಗಿ ನೋಡಬಹುದು.

ಬ್ರಿಟಿಷರಂತೆಯೇ ಬಿಜೆಪಿಯು ಸಹ ವಿಭಜನೆಯ ನಿಯಮವನ್ನು ಬಳಸಿಕೊಂಡು ತಮಿಳುನಾಡು ಪ್ರವೇಶಿಸಲು ಪ್ರಯತ್ನಿಸುತ್ತಿದೆ. ನಾನು ಇದನ್ನು ಕ್ಷಮಿಸುವುದಿಲ್ಲ ಅಥವಾ ಮರೆಯುವುದಿಲ್ಲ ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ಅಲ್ಲದೇ ಅಂಬೇಡ್ಕರ್‌ ಸೇರಿದಂತೆ ಎಲ್ಲಾ ನಾಯಕರನ್ನು ಕೇಸರಿ ಬಣ್ಣಕ್ಕೆ ತಿರುಗಿಸುವ ಬಿಜೆಪಿಯ ತಂತ್ರಕ್ಕೆ ಪ್ರತಿರೋಧ ವ್ಯಕ್ತವಾಗಿದೆ. ಬಣ್ಣವನ್ನಷ್ಟೇ ಬದಲಿಸಬಹದು ನಮ್ಮ ಚಿಂತನೆಗಳನ್ನು ಬದಲಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...