Homeಮುಖಪುಟಏರ್ ಇಂಡಿಯಾ ತನಿಖೆ ಮುಗಿಸಿದ ಸಿಬಿಐ: 'ಬಿಜೆಪಿಯು ಮನಮೋಹನ್ ಸಿಂಗ್ ಕ್ಷಮೆ ಕೇಳಬೇಕು..' ಎಂದ ಸಂಜಯ್...

ಏರ್ ಇಂಡಿಯಾ ತನಿಖೆ ಮುಗಿಸಿದ ಸಿಬಿಐ: ‘ಬಿಜೆಪಿಯು ಮನಮೋಹನ್ ಸಿಂಗ್ ಕ್ಷಮೆ ಕೇಳಬೇಕು..’ ಎಂದ ಸಂಜಯ್ ರಾವತ್

- Advertisement -
- Advertisement -

ಏರ್ ಇಂಡಿಯಾ-ಇಂಡಿಯನ್ ಏರ್‌ಲೈನ್ಸ್ ವಿಲೀನ ಪ್ರಕರಣದಲ್ಲಿ ಸಿಬಿಐ ಮುಕ್ತಾಯದ ವರದಿಯನ್ನು ಸಲ್ಲಿಸಿದ ನಂತರ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕ್ಷಮೆಯಾಚಿಸಬೇಕು ಎಂದು ಬಿಜೆಪಿಯನ್ನು ಒತ್ತಾಯಿಸಿದ್ದಾರೆ.

ಯುಪಿಎ ಅವಧಿಯಲ್ಲಿ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್ ವಿಲೀನದಿಂದ ರೂಪುಗೊಂಡ ಕಂಪನಿಯಾದ ಎನ್‌ಎಸಿಎಲ್ ವಿಮಾನಗಳ ಗುತ್ತಿಗೆಯಲ್ಲಿನ ಅಕ್ರಮಗಳ ಕುರಿತು ತನಿಖೆಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣದ ಅಂತಿಮ ವರದಿಯನ್ನು ಸಲ್ಲಿಸಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದರು.

ಈಗ ಅಜಿತ್ ಪವಾರ್ ನೇತೃತ್ವದ ಪಕ್ಷಕ್ಕೆ ಸೇರಿದ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಗುತ್ತಿಗೆ ನೀಡಿದಾಗ ಹಿಂದಿನ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ ಅಲೈಯನ್ಸ್ (ಯುಪಿಎ) ಸರ್ಕಾರದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ನಡೆದ ಭ್ರಷ್ಟಾಚಾರದ ಆರೋಪದ ಕುರಿತು ಮೇಲೆ ಬಿಜೆಪಿ ಧ್ವನಿ ಎತ್ತಿತ್ತು. ಈಗ ಸಿಬಿಐ ಕೇಸ್ ಕ್ಲೋಸ್ ಮಾಡಿದ್ದು, ಬಿಜೆಪಿಯು ಡಾ. ಮನಮೋಹನ್ ಸಿಂಗ್ ಅವರ ಕ್ಷಮೆಯಾಚಿಸಬೇಕು ಎಂದು ಅವರು ಹೇಳಿದರು.

ಏರ್ ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್ ವಿಲೀನದ ನಂತರ ನ್ಯಾಷನಲ್ ಏವಿಯೇಷನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NACIL) ಅನ್ನು ರಚಿಸಲಾಯಿತು. ಈ ನಿರ್ಧಾರವನ್ನು “ಅಪ್ರಾಮಾಣಿಕವಾಗಿ” ತೆಗೆದುಕೊಳ್ಳಲಾಗಿದೆ, ಸ್ವಾಧೀನ ಕಾರ್ಯಕ್ರಮ ನಡೆಯುತ್ತಿರುವಾಗಲೂ ವಿಮಾನವನ್ನು ಗುತ್ತಿಗೆಗೆ ನೀಡಲಾಗಿದೆ ಎಂದು ಸಿಬಿಐ ಆರೋಪಿಸಿತ್ತು.

ಗುತ್ತಿಗೆ ನಿರ್ಧಾರವನ್ನು “ಬಾಹ್ಯ ಪರಿಗಣನೆಗಳ ಮೇಲೆ ಇತರ ಅಪರಿಚಿತ ವ್ಯಕ್ತಿಗಳೊಂದಿಗೆ ಪಿತೂರಿ” ಮಾಡಲಾಗಿದೆ. ಇದರ ಪರಿಣಾಮವಾಗಿ ಖಾಸಗಿ ಕಂಪನಿಗಳಿಗೆ “ಹಣಕಾಸಿನ ಲಾಭ” ಮತ್ತು ಪರಿಣಾಮವಾಗಿ “ಸರ್ಕಾರಿ ಬೊಕ್ಕಸಕ್ಕೆ ನಷ್ಟ” ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಆರೋಪಿಸಿದೆ.

ಸೀಟು ಹಂಚಿಕೆಯಲ್ಲಿ ಗೊಂದಲವಿಲ್ಲ:

ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಮಹಾ ವಿಕಾಸ್ ಅಘಾಡಿ (ಎಂವಿಎ) ಪಾಲುದಾರರ ನಡುವೆ ವರದಿಯಾದ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ ರಾವತ್, “ಸೀಟು ಹಂಚಿಕೆಯಲ್ಲಿ ಮಿತ್ರಪಕ್ಷಗಳ ನಡುವೆ ಯಾವುದೇ ವಿವಾದವಿಲ್ಲ” ಎಂದು ಹೇಳಿದರು.

‘ಏಪ್ರಿಲ್ 3 ರಂದು ಶಿವಾಲಯದಲ್ಲಿ ಎಂವಿಎ ನಾಯಕರ ಪತ್ರಿಕಾಗೋಷ್ಠಿ ನಡೆಯಲಿದೆ. ಉದ್ಧವ್ ಠಾಕ್ರೆ, ಶರದ್ ಪವಾರ್ ಮತ್ತು ಕಾಂಗ್ರೆಸ್ ಮುಖಂಡರಾದ ನಾನಾ ಪಟೋಲೆ, ಪೃಥ್ವಿರಾಜ್ ಚವ್ಹಾಣ್ ಮತ್ತು ಬಾಳಾಸಾಹೇಬ್ ಥೋರಟ್ ಉಪಸ್ಥಿತರಿರುವರು’ ಎಂದು ಅವರು ಹೇಳಿದರು.

ಮಾರ್ಚ್ 31 ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ “ದೇಶದ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಲು” ಆಯೋಜಿಸಲಾದ ಪ್ರತಿಪಕ್ಷ ಇಂಡಿಯಾ ಬ್ಲಾಕ್ ರ್ಯಾಲಿಯಲ್ಲಿ ಠಾಕ್ರೆ ಭಾಗವಹಿಸಲಿದ್ದಾರೆ ಎಂದು ಸಂಜಯ್ ರಾವತ್ ಹೇಳಿದರು.

ಇದನ್ನೂ ಓದಿ; ‘ಐಟಿ ಇಲಾಖೆಯು ಬಿಜೆಪಿಯಿಂದ ₹4,600 ಕೋಟಿಗೆ ಬೇಡಿಕೆ ಇಡಬೇಕು..’; ಕಾಂಗ್ರೆಸ್ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...