Homeಮುಖಪುಟಬಹುಕೋಟಿ ಅವ್ಯವಹಾರ: ನಿವೃತ್ತ RLDA ಅಧಿಕಾರಿಗಳು ಸೇರಿ ಐವರನ್ನು ಬಂಧಿಸಿದ ಸಿಬಿಐ

ಬಹುಕೋಟಿ ಅವ್ಯವಹಾರ: ನಿವೃತ್ತ RLDA ಅಧಿಕಾರಿಗಳು ಸೇರಿ ಐವರನ್ನು ಬಂಧಿಸಿದ ಸಿಬಿಐ

- Advertisement -
- Advertisement -

ರೈಲ್ ಲ್ಯಾಂಡ್ ಡೆವಲಪ್‌ಮೆಂಟ್ ಅಥಾರಿಟಿಯ 31.50 ಕೋಟಿ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ ಲ್ಯಾಂಡ್ ಡೆವಲಪ್‌ಮೆಂಟ್ ಅಥಾರಿಟಿಯ (ಆರ್‌ಎಲ್‌ಡಿಎ) ನಿವೃತ್ತ ಅಧಿಕಾರಿ ಮತ್ತು ನಿವೃತ್ತ ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಸೇರಿದಂತೆ ಐವರನ್ನು ಸಿಬಿಐ  ಬಂಧಿಸಿದೆ.

ಬಂಧಿತರಲ್ಲಿ ಆರ್‌ಎಲ್‌ಡಿಎ ಮಾಜಿ ಮ್ಯಾನೇಜರ್ ವಿವೇಕ್ ಕುಮಾರ್, ಬ್ಯಾಂಕ್ ಆಫ್ ಬರೋಡಾದ ಮಾಜಿ ಶಾಖಾ ವ್ಯವಸ್ಥಾಪಕ ಜಸ್ವಂತ್ ರೈ ಮತ್ತು ಮೂವರು ಖಾಸಗಿ ವ್ಯಕ್ತಿಗಳಾದ ಗೋಪಾಲ್ ಠಾಕೂರ್, ಹಿತೇಶ್ ಕರೇಲಿಯಾ ಮತ್ತು ನೀಲೇಶ್ ಭಟ್ ಸೇರಿದ್ದಾರೆ.

ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಬಂಧಿತರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಅಪರಿಚಿತ ವ್ಯಕ್ತಿಗಳಿಂದ 31.50 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿ ಆರ್‌ಎಲ್‌ಡಿಎ ನೀಡಿದ ದೂರಿನ ಮೇರೆಗೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಆರ್‌ಎಲ್‌ಡಿಎ ಆರಂಭದಲ್ಲಿ ಬ್ಯಾಂಕ್ ಆಫ್ ಬರೋಡಾ, ವಿಶ್ವಾಸ್ ನಗರ ಶಾಖೆ, ಶಹದ್ರಾ, ದೆಹಲಿಯಲ್ಲಿ ಸ್ಥಿರ ಠೇವಣಿ (ಎಫ್‌ಡಿ) ರೂಪದಲ್ಲಿ ಒಂದು ವರ್ಷಕ್ಕೆ 35 ಕೋಟಿ ರೂಪಾಯಿ (ಅಂದಾಜು) ಹೂಡಿಕೆ ಮಾಡಿದೆ ಮತ್ತು ನಂತರ ಮೆಚ್ಯೂರಿಟಿ ಆದಾಯವನ್ನು ನಿರೀಕ್ಷಿಸಿತ್ತು.

ಬ್ಯಾಂಕ್ ಕೇವಲ 3.50 ಕೋಟಿ ಹೂಡಿಕೆ ಮಾಡಿದ್ದು, ಉಳಿದ 31.50 ಕೋಟಿ ರೂ.ಗಳನ್ನು ಬ್ಯಾಂಕ್ ಅಧಿಕಾರಿಗಳು, ಆರ್‌ಎಲ್‌ಡಿಎ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ಸಹಕಾರದಿಂದ ವಿವಿಧ ಕಂಪನಿಗಳಿಗೆ ವರ್ಗಾಯಿಸಲಾಗಿದೆ. ಆರ್‌ಎಲ್‌ಡಿಎ ಅಧಿಕಾರಿಗಳು ನೀಡಿದ ನಕಲಿ ಪತ್ರಗಳನ್ನು ಬಳಸಿಕೊಂಡು ಮೊತ್ತವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನು ಓದಿ: ಎಎಪಿ ಶಾಸಕ ಅಮಾನತುಲ್ಲಾ ಖಾನ್ ನಿವಾಸದ ಮೇಲೆ ಇಡಿ ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read