Homeಮುಖಪುಟಎಸ್‌ಬಿಐ ಸೇರಿ 15 ಸಾಲದಾತ ಬ್ಯಾಂಕ್‌ಗಳಿಗೆ 3,800 ಕೋಟಿ ರೂ. ವಂಚನೆ

ಎಸ್‌ಬಿಐ ಸೇರಿ 15 ಸಾಲದಾತ ಬ್ಯಾಂಕ್‌ಗಳಿಗೆ 3,800 ಕೋಟಿ ರೂ. ವಂಚನೆ

- Advertisement -
- Advertisement -

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ 15 ಸಾಲದಾತ ಬ್ಯಾಂಕ್‌ಗಳಿಗೆ 3,847.58 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಮುಂಬೈ ಮೂಲದ ಯೂನಿಟಿ ಇನ್‌ಫ್ರಾಪ್ರಾಜೆಕ್ಟ್ಸ್ ಲಿಮಿಟೆಡ್ ಮತ್ತು ಅದರ ಅಧ್ಯಕ್ಷ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಅವರೇಕರ್ ಮತ್ತು ಮೂವರು ನಿರ್ದೇಶಕರು ಮತ್ತು ಅಪರಿಚಿತ ಸಾರ್ವಜನಿಕ ಸೇವಕರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.

ಮುಂಬೈನ ಎಸ್‌ಬಿಐನ ಡೆಪ್ಯುಟಿ ಜನರಲ್ ಮ್ಯಾನೇಜರ್‌ ಓರ್ವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಗುರುವಾರ ಎಫ್‌ಐಆರ್ ದಾಖಲಿಸಲಾಗಿದೆ.

ಯೂನಿಟಿ ಇನ್‌ಫ್ರಾಪ್ರಾಜೆಕ್ಟ್ಸ್ ಲಿಮಿಟೆಡ್, ಅದರ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಅವರ್‌ಸೇಕರ್, ಉಪಾಧ್ಯಕ್ಷ ಅಭಿಜಿತ್ ಅವರ್‌ಸೇಕರ್, ಕಾರ್ಯನಿರ್ವಾಹಕ ನಿರ್ದೇಶಕ ಆಶಿಶ್ ಅವರ್‌ಸೇಕರ್, ಪೂರ್ಣಾವಧಿ ನಿರ್ದೇಶಕಿ ಪುಷ್ಪಾ ಅವರ್‌ಸೇಕರ್ ಮತ್ತು ಅಪರಿಚಿತ ಸಾರ್ವಜನಿಕ ಸೇವಕರು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ದೂರಿನ ಪ್ರಕಾರ, ಸಾಲ ಸೌಲಭ್ಯಗಳು, ನಿಧಿ ಆಧಾರಿತ ಹಾಗೂ ನಿಧಿಯೇತರ ಸೇರಿ ಅಂದಾಜು 3,800 ಕೋಟಿ ರೂ.ಗಳನ್ನು ಯೂನಿಟಿ ಇನ್‌ಫ್ರಾಪ್ರಾಜೆಕ್ಟ್ಸ್ ಲಿಮಿಟೆಡ್‌ಗೆ ಎಸ್‌ಬಿಐ ಮತ್ತು ಇತರ ಸಾಲದಾತ ಬ್ಯಾಂಕ್‌ಗಳು ಮಂಜೂರು ಮಾಡಿವೆ.

ಮುಂಬೈನಲ್ಲಿರುವ ಅದರ ವಾಣಿಜ್ಯ ಶಾಖೆಯಲ್ಲಿ ವಂಚನೆ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳು ಬ್ಯಾಂಕ್‌ನ ಹಣವನ್ನು ನಕಲಿ ವಹಿವಾಟುಗಳನ್ನು ಮಾಡುವ ಮೂಲಕ ಮತ್ತು  ಡೇಟಾದ ಅಸಮರ್ಪಕ ನಮೂದುಗಳು, ಹೆಚ್ಚುವರಿ ಪಾವತಿಗಳ ಮೂಲಕ ಬ್ಯಾಂಕ್‌ನ ಹಣವನ್ನು ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ ಮತ್ತು 420 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13 (2), 13 (1) (ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನು ಓದಿ: ಉತ್ತರಪ್ರದೇಶ: ಪೊಲೀಸ್ ಅಧಿಕಾರಿಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...