Homeಮುಖಪುಟಗಾಝಾದಲ್ಲಿ ಕದನ ವಿರಾಮ: ವಿಶ್ವಸಂಸ್ಥೆ ನಿರ್ಣಯ ಬೆಂಬಲಿಸಿದ ಭಾರತ

ಗಾಝಾದಲ್ಲಿ ಕದನ ವಿರಾಮ: ವಿಶ್ವಸಂಸ್ಥೆ ನಿರ್ಣಯ ಬೆಂಬಲಿಸಿದ ಭಾರತ

- Advertisement -
- Advertisement -

ಗಾಝಾ ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿಯನ್ನು ಕೊನೆಗೊಳಿಸಿ ಕದನ ವಿರಾಮ ಘೋಷಿಸುವಂತೆ ಒತ್ತಾಯಿಸುವ ವಿಶ್ವಸಂಸ್ಥೆಯ ನಿರ್ಣಯದ ಪರ ಭಾರತ ಮತ ಹಾಕಿದೆ.

ಕಳೆದ ಎರಡು ತಿಂಗಳ ಹಿಂದೆ ಇದೇ ರೀತಿಯ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಲಾಗಿತ್ತು. ಈ ನಿರ್ಣಯದ ಮತದಾನದಿಂದ ಭಾರತ ದೂರ ಉಳಿದಿತ್ತು.

ನ್ಯೂಯಾರ್ಕ್‌ನಲ್ಲಿ ಮಂಗಳವಾರ ನಡೆದ ವಿಶ್ವಸಂಸ್ಥೆಯ 10ನೇ ತುರ್ತು ವಿಶೇಷ ಅಧಿವೇಶನಲ್ಲಿ ಸುಮಾರು 80% ಸದಸ್ಯ ರಾಷ್ಟ್ರಗಳು ” ಗಾಝಾದ ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ನೆರವನ್ನು ಎತ್ತಿಹಿಡಿಯುವ” ನಿರ್ಣಯದ ಪರವಾಗಿ ಮತ ಚಲಾಯಿಸಿವೆ.

ಆಕ್ರಮಿತ ಪೂರ್ವ ಜೆರುಸಲೆಮ್ ಮತ್ತು ಉಳಿದ ಆಕ್ರಮಿತ ಪ್ಯಾಲೇಸ್ತೀನಿಯನ್ ಪ್ರದೇಶಗಳಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ಕಾನೂನುಬಾಹಿರ ಕ್ರಮಗಳನ್ನು ವಿರುದ್ಧ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ, ಗಾಝಾದಲ್ಲಿ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಕರೆ ನೀಡಿದ್ದ ವಿಶ್ವಸಂಸ್ಥೆಯ ನಿರ್ಣಯದ ಮತದಾನಕ್ಕೆ ಗೈರು ಹಾಜರಾದ 45 ರಾಷ್ಟ್ರಗಳಲ್ಲಿ ಭಾರತವೂ ಸೇರಿತ್ತು. ಅಕ್ಟೋಬರ್ 26ರಂದು ಮಂಡಿಸಿದ ಈ ನಿರ್ಣಯದ ಪರವಾಗಿ 120 ಮತ್ತು ವಿರುದ್ಧವಾಗಿ 14 ರಾಷ್ಟ್ರಗಳು ಮತ ಹಾಕಿತ್ತು.

ಯುಎಸ್, ಆಸ್ಟ್ರಿಯಾ, ಜೆಕಿಯಾ, ಲೈಬೀರಿಯಾ ಮತ್ತು ಪೆಸಿಫಿಕ್ ಮಿತ್ರರಾಷ್ಟ್ರಗಳನ್ನು ಒಳಗೊಂಡ ಗುಂಪು ಈ ಬಾರಿಯೂ ಕದನ ವಿರಾಮ ನಿರ್ಣಯದ ವಿರುದ್ಧ ಮತ ಹಾಕಿವೆ. ಆದರೂ, ಕಳೆದ ಬಾರಿಗಿಂತ ಈ ಬಾರಿ ವಿರುದ್ಧ ಮತ ಹಾಕಿದ ಒಟ್ಟು ರಾಷ್ಟ್ರಗಳ ಸಂಖ್ಯೆಯು 45 ರಿಂದ 23 ಕ್ಕೆ ಇಳಿಕೆಯಾಗಿದೆ.

ಅರಬ್ ಗ್ರೂಪ್ ಮತ್ತು ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್ ಮಂಡಿಸಿದ ನಿರ್ಣಯವನ್ನು ಬೆಂಬಸಿಲಿದ ರಾಷ್ಟ್ರಗಳ ಸಂಖ್ಯೆ, ರಷ್ಯಾ-ಉಕ್ರೇನ್ ಕದನ ವಿರಾಮದ ಬೆಂಬಲಿಸಿದ ರಾಷ್ಟ್ರಗಳಿಗಿಂತ ಹೆಚ್ಚಿತ್ತು.

ಇಂದಿಗೆ(ಡಿ.13) 68 ದಿನಗಳನ್ನು ಪೂರೈಸಿದ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಇದುವರೆಗೆ ಸುಮಾರು 18 ಸಾವಿರ ಗಾಝಾ ಅಥವಾ ಪ್ಯಾಲೆಸ್ತೀನಿಯನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ 1,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಮಾಸ್ 240 ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿತ್ತು. ಈ ಪೈಕಿ ಹಲವರನ್ನು ಈಗಾಗಲೇ ಬಿಡುಗಡೆ ಮಾಡಿದೆ.

ಇದನ್ನೂ ಓದಿ : ಮೋದಿ ಟೀಕಾಕಾರನ್ನು ಗುರಿಯಾಗಿಸಿ ಭಾರತದಿಂದ ರಹಸ್ಯ ಕಾರ್ಯಾಚರಣೆ: ವಾಷಿಂಗ್ಟನ್ ಪೋಸ್ಟ್ ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...