Homeಮುಖಪುಟಮೋರ್ಬಿ ಸೇತುವೆ ದುರಂತ: ಜಯಸುಖ್ ಪಟೇಲ್ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಮೋರ್ಬಿ ಸೇತುವೆ ದುರಂತ: ಜಯಸುಖ್ ಪಟೇಲ್ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

- Advertisement -
- Advertisement -

ಅಸಮರ್ಪಕ ನಿರ್ವಹಣೆಯಿಂದ ಕಳೆದ ವರ್ಷ ಸಂಭವಿಸಿದ್ದ ಮೋರ್ಬಿ ಸೇತುವೆ ಕುಸಿತ ಪ್ರಕರಣದ ಪ್ರಮುಖ ಆರೋಪಿ ಒರೆವಾ ಗ್ರೂಪ್ ಎಂಡಿ ಜಯಸುಖ್ ಪಟೇಲ್ ಅವರ ಜಾಮೀನು ಅರ್ಜಿಯ ತೀರ್ಪನ್ನು ಗುಜರಾತ್ ಹೈಕೋರ್ಟ್ ಕಾಯ್ದಿರಿಸಿದೆ. ‘ನ್ಯಾಯಾಲಯವು ಜಾಮೀನು ನೀಡುವ ವಿವೇಚನಾಧಿಕಾರವನ್ನು ಚಲಾಯಿಸಬಹುದು’ ಎಂದು ಪ್ರಾಸಿಕ್ಯೂಷನ್ ವಾದಿಸಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೋರ್ಬಿ ಸೇತುವೆ ಕುಸಿದು 135 ಜನರು ಸಾವನ್ನಪ್ಪಿದ್ದರು. ಆರೋಪಿ ಪಟೇಲ್, ನರಹತ್ಯೆ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿದ್ದಾರೆ.

ಪಬ್ಲಿಕ್ ಪ್ರಾಸಿಕ್ಯೂಟರ್ ಮಿತೇಶ್ ಅಮೀನ್ ಅವರು ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಅವರ ಪೀಠದ ಮುಂದೆ ಬುಧವಾರ ಜಾಮೀನಿಗೆ ಮನವಿ ಸಲ್ಲಿಸಿದರು. ‘ಕೆಲವೊಮ್ಮೆ ನಿರ್ದಿಷ್ಟ ಸೆರೆವಾಸ ಅನುಭಿಸಿ, ತನಿಖೆ ಪೂರ್ಣಗೊಂಡ ನಂತರ, ಹೆಚ್ಚುವರಿ ಸಾಕ್ಷಿಗಳ ಅಗತ್ಯವಿಲ್ಲದೆ ಇದ್ದಾಗ, ಅವರು ಉದ್ಯಮಿಯಾಗಿದ್ದು ಓಡಿಹೋಗುವ ಸಾಧ್ಯತೆಯಿಲ್ಲ. ಆದ್ದರಿಂದ, ಯಾವುದೇ ಷರತ್ತುಗಳನ್ನು ಪರಿಗಣಿಸಿ ಜಾಮೀನು ನೀಡುವುದು ನ್ಯಾಯಾಲಯದ ವಿವೇಚನೆಗೆ ಬಿಟ್ಟದ್ದು’ ಎಂಬ ಸುಪ್ರೀಂಕೋರ್ಟಿನ ಸಲಹೆಯನ್ನು ಅವರು ಉಲ್ಲೇಖಿಸಿದ್ದಾರೆ.

ಈ ನಡುವೆ, ‘ಮೊರ್ಬಿ ಸೇತುವೆ ದುರಂತ ಸಂತ್ರಸ್ತರ ಸಂಘ’ದ ಅಡಿಯಲ್ಲಿ ಹಲವಾರು ಸಂತ್ರಸ್ತರ ಪರವಾಗಿ ವಾದ ಮಂಡಿಸಿದ ವಕೀಲ ರಾಹುಲ್ ಶರ್ಮಾ, ಈ ಹಿಂದಿನ ಜಾಮೀನು ಅರ್ಜಿಯನ್ನು ವಿರೋಧಿಸಿದ್ದರು. ಈ ಕೃತ್ಯವು ಸುಲಭವಾಗಿ ನಿರ್ಲಕ್ಷ್ಯ ಮಾಡುವ ಪ್ರಕರಣವಲ್ಲ. ಬದಲಿಗೆ, ಸಮಗ್ರ ನಿರ್ಲಕ್ಷ್ಯ ಎಂದು ಕೋರ್ಟಿಗೆ ಮನವರಿಕೆ ಮಾಡಿದ್ದರು. ‘ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾದರೆ ಸಾಕ್ಷ್ಯವನ್ನು ನಾಶ ಮಾಡುವ ಅಥವಾ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಯಿದೆ’ ಎಂದು ವಾದಿಸಿದ್ದರು.

ಬುಧವಾರ ವಾದ-ಪ್ರತಿವಾದಗಳು ಪೂರ್ಣಗೊಂಡ ನಂತರ, ನ್ಯಾಯಮೂರ್ತಿ ಜೋಶಿ ಅವರು ಜಾಮೀನು ಅರ್ಜಿಯನ್ನು ತೀರ್ಪನ್ನು ಕಾಯ್ದಿರಿಸಿದರು. ಹತ್ತು ಜನ ಆರೋಪಿಗಳು ಮೋರ್ಬಿ ಸೇತುವೆ ದುರಂತದ ಆರೋಪಿಗಳಾಗಿದ್ದಾರೆ. ಅದರಲ್ಲಿ ಆರು ಮಂದಿಗೆ ಈಗಾಗಲೇ ಜಾಮೀನು ನೀಡಲಾಗಿದ್ದು, ಜೈಸುಖ್ ಸೇರಿದಂತೆ ಉಳಿದ ಮೂವರು ಇನ್ನೂ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ; ಸಂಸತ್ತನ್ನೇ ಕಾಯಲಾಗದ ಚೌಕಿದಾರನಿಗೆ ದೇಶ ಕಾಯಲು ಸಾಧ್ಯವೇ: ಕಾಂಗ್ರೆಸ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...