Homeಮುಖಪುಟಚಲೋ ದೆಹಲಿ ಮೆರವಣಿಗೆ: ರೈತರ ಪ್ರತಿಭಟನೆಗೆ ಪಂಜಾಬ್ ಕಾಂಗ್ರೆಸ್ ಬೆಂಬಲ

ಚಲೋ ದೆಹಲಿ ಮೆರವಣಿಗೆ: ರೈತರ ಪ್ರತಿಭಟನೆಗೆ ಪಂಜಾಬ್ ಕಾಂಗ್ರೆಸ್ ಬೆಂಬಲ

- Advertisement -
- Advertisement -

ಎಂಎಸ್‌ಪಿ ಜಾರಿ, ಪಿಂಚಣಿ, ಮತ್ತು ಕೃಷಿ ಸಾಲ ಮನ್ನಾಗೆ ಕಾನೂನುಬದ್ಧ ಖಾತರಿ ಸೇರಿದಂತೆ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲು ರೈತರು ನಡೆಸುತ್ತಿರುವ ‘ಚಲೋ ದೆಹಲಿ; ಮೆರವಣಿಗೆಗೆ ಪಂಜಾಬ್ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ.

ಚಂಡೀಗಢದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ, ‘ಕಾಂಗ್ರೆಸ್ ರೈತರೊಂದಿಗೆ ನಿಂತಿದೆ ಮತ್ತು ಬಿಜೆಪಿಯ ದಬ್ಬಾಳಿಕೆ ವಿರುದ್ಧದ ಅವರ ನಿರಂತರ ಹೋರಾಟಕ್ಕೆ ವಂದನೆಗಳು’ ಎಂದು ಹೇಳಿದರು.

‘ರಾಷ್ಟ್ರ ರಾಜಧಾನಿಗೆ ರೈತರ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ನಾನು ಮತ್ತು ಇತರ ರಾಜ್ಯ ಕಾಂಗ್ರೆಸ್ ನಾಯಕರು ಉತ್ಸುಕರಾಗಿದ್ದಾರೆ’ ಎಂದು ಪಿಪಿಸಿಸಿ ಮುಖ್ಯಸ್ಥರು ಹೇಳಿದರು. ‘ರೈತ ಸಂಘಗಳು ರಾಜಕೀಯ ಪಕ್ಷಗಳು ಮತ್ತು ಮುಖಂಡರನ್ನು ದೂರವಿರಿ ಎಂದು ಕೇಳಿದ್ದರಿಂದ ನಾವು ಅವರೊಂದಿಗೆ ಸೇರಿಲ್ಲ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಮಗೆ ಅವಕಾಶ ನೀಡಿದಾಗ ನಾವು ಹೋಗುತ್ತೇವೆ’ ಎಂದು ಅವರು ಹೇಳಿದರು.

ರೈತರು ದೆಹಲಿಗೆ ಹೋಗುವುದನ್ನು ತಡೆಯಲು ಪಂಜಾಬ್‌ನ ಶಂಭು ಗಡಿಯಲ್ಲಿ ಪೊಲೀಸ್ ಕ್ರಮಕ್ಕಾಗಿ ಹರಿಯಾಣದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ‘ಇದು ಪಂಜಾಬ್ ಮತ್ತು ಅದರ ಜನರ ವಿರುದ್ಧವಾಗಿದೆ’ ಎಂದು ಆರೋಪಿಸಿದರು. ಅವರೊಂದಿಗೆ ಪಿಪಿಸಿಸಿ ಕಾರ್ಯಾಧ್ಯಕ್ಷ ಭರತ್ ಭೂಷಣ್ ಆಶು ಮತ್ತು ರಾಜ್ಯ ಘಟಕದ ಕಾನೂನು ಘಟಕದ ಅಧ್ಯಕ್ಷ ಬಿಪನ್ ಘಾಯ್ ಇದ್ದರು.

ರೈತರಿಗೆ ಉಚಿತ ಕಾನೂನು ನೆರವು ನೀಡಲು ಹೆಲ್ಪ್‌ಲೈನ್ ಪ್ರಾರಂಭಿಸಿದ್ದು, ‘ರೈತರಿಗೆ ಯಾವುದೇ ರೀತಿಯ ಕಾನೂನು ಸಹಾಯ ಅಗತ್ಯವಿದ್ದರೆ, ಅವರು ನಮ್ಮನ್ನು ಸಂಪರ್ಕಿಸಬಹುದು. ನಮ್ಮ ತಂಡವು ತಕ್ಷಣವೇ ಉಚಿತ ಕಾನೂನು ನೆರವು ನೀಡುತ್ತದೆ’ ಎಂದು ಹೇಳಿದರು.

ಈ ಬೆಳವಣಿಗೆಗಳ ನಡುವೆ, ಅಖಿಲ ಭಾರತ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ರೈತರಿಗೆ ಬೆಂಬಲ ನೀಡಲು ಶಂಭು ಗಡಿಯನ್ನು ತಲುಪಿದರು.

ಪಂಜಾಬ್‌ನ ರೈತರು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಮೋರ್ಚಾದ ಬ್ಯಾನರ್‌ನಡಿಯಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಅರ್ಜುನ್ ಮುಂಡಾ ಅವರ ನಾಯಕರ ಆರು ಗಂಟೆಗಳ ಸಭೆಯ ನಂತರ ತಮ್ಮ ಯೋಜನೆಯಂತೆ ಬೆಳಿಗ್ಗೆ ದೆಹಲಿಗೆ ತಮ್ಮ ಪಾದಯಾತ್ರೆಯನ್ನು ಪ್ರಾರಂಭಿಸಿದರು.

ಇದನ್ನೂ ಓದಿ; ‘ರೈತರಿಗೆ ತೊಂದರೆ ಕೊಡಬೇಡಿ, ನಾವು ಅವರಿಂದ ತುಂಬಾ ದೂರವಿಲ್ಲ..’; ಕೇಂದ್ರ ಸರ್ಕಾರಕ್ಕೆ ಟಿಕಾಯತ್ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...