Homeದಲಿತ್ ಫೈಲ್ಸ್ಚಾಮರಾಜನಗರ: ದಲಿತ ಮಹಿಳೆ ನೀರು ಕುಡಿದ ಟ್ಯಾಂಕ್ ಶುದ್ದೀಕರಿಸಿ ಬಹಿರಂಗ ಅಸ್ಪೃಶ್ಯತೆ ಆಚರಣೆ

ಚಾಮರಾಜನಗರ: ದಲಿತ ಮಹಿಳೆ ನೀರು ಕುಡಿದ ಟ್ಯಾಂಕ್ ಶುದ್ದೀಕರಿಸಿ ಬಹಿರಂಗ ಅಸ್ಪೃಶ್ಯತೆ ಆಚರಣೆ

- Advertisement -
- Advertisement -

ದಲಿತ ಮಹಿಳೆಯೊಬ್ಬರು ಟ್ಯಾಂಕ್ ನಲ್ಲಿಯಲ್ಲಿ ನೀರು ಕುಡಿದರು ಎನ್ನುವ ಕಾರಣಕ್ಕೆ ಸವರ್ಣೀಯ ವ್ಯಕ್ತಿಯೊಬ್ಬ
ಇಡೀ ಟ್ಯಾಂಕಿನ ನೀರು ಖಾಲಿ ಮಾಡಿ, ಗೋಮೂತ್ರ ಸಿಂಪಡಿಸಿ ಬಹಿರಂಗ ಅಸ್ಪೃಶ್ಯತೆ ಆಚರಿಸಿರುವ
ಘಟನೆ ಚಾಮರಾಜನಗರ ತಾಲ್ಲೂಕಿನ ಹೆಗ್ಗೊಠಾರದಲ್ಲಿ ನಡೆದಿದೆ.

ನವೆಂಬರ್ 18ರ ಶುಕ್ರವಾರ ಹೆಗ್ಗೊಠಾರ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಯುವಕನ ಮದುವೆ ನಡೆದಿತ್ತು. ಹೆಣ್ಣಿನ ಕಡೆಯವರು ಗ್ರಾಮಕ್ಕೆ ಮದುವೆಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ದಲಿತ ಮಹಿಳೆಯೊಬ್ಬರು ಗ್ರಾಮದ ಹಳೆ ಮಾರಿಗುಡಿ ಬಳಿ ಲಿಂಗಾಯತರ ಬೀದಿಯಲ್ಲಿನ ಕಿರು ನೀರು ಸರಬರಾಜು ಟ್ಯಾಂಕ್‌ನಲ್ಲಿ ನೀರು ಕುಡಿದಿದ್ದಾರೆ. ಇದನ್ನು ನೋಡಿದ ಸವರ್ಣೀಯ ವ್ಯಕ್ತಿಯೊಬ್ಬ ಮೇಲಿನ ದುಷ್ಕೃತ್ಯ ಎಸಗಿದ್ದಾರೆ ಎಂದು ರಘು ನಾಯಕ್ ಎಂಬುವವರು ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ದಲಿತ ಮಹಿಳೆಯೊಬ್ಬರು ತೊಂಬೆ ನಲ್ಲಿಯಲ್ಲಿ ನೀರು ಕುಡಿದರು ಎನ್ನುವ ಕಾರಣಕ್ಕೆ ವೀರಶೈವ ಸಮೂದಾಯದವನೊಬ್ಬ ಇಡೀ ಟ್ಯಾಂಕಿನ ನೀರನ್ನು ಖಾಲಿ ಮಾಡಿ ಹಸುವಿನ ಉಚ್ಛೆ ಸಿಂಪಡಿಸಿ ಸ್ವಚ್ಛ ಮಾಡಿದ
ಘಟನೆ ಚಾಮರಾಜನಗರ ಜಿಲ್ಲಾ ಕೇಂದ್ರದಿಂದ 11km ಅಂತರದಲ್ಲಿರುವ ತಾಲ್ಲೂಕಿನ ಹೆಗ್ಗೊಠಾರದಲ್ಲಿ ನಡೆದಿದೆ….. ಇಂತಹ ಅಸಹ್ಯ ಮನಸ್ಥಿಯನ್ನ ನೋಡಿಯೂ ಅದು ಹೇಗೆ ನಾವೆಲ್ಲ ಒಂದೆನಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೂರಾರು ಜನರು ಅಸ್ಪೃಶ್ಯತೆ ಆಚರಣೆಯನ್ನು ಖಂಡಿಸಿದ್ದಾರೆ.

ಹಿಂದೂ ನಾವೆಲ್ಲ ಒಂದು ಎನ್ನುವವರು ಈಗ ಎಲ್ಲಿದ್ದಾರೆ? ಅಸ್ಪೃಶ್ಯತೆ ಇಲ್ಲ ಎನ್ನುವವರೆ ಎಲ್ಲಿದ್ದಾರೆ, ಬನ್ನಿ ಇಲ್ಲಿ ನೋಡಿ. ಇದು ಸರಿಯೇ ಎಂದು ತೀರ್ಮಾನಿಸಿ. ಬಸವಣ್ಣನವರ ನಿಜ ಆಶಯಗಳನ್ನು ಮರೆತು ಜಾತಿ ಪದ್ದತಿ ಆಚರಿಸುತ್ತಿರುವವರು ಈಗಲಾದರೂ ಅರ್ಥ ಮಾಡಿಕೊಳ್ಳಿ ಎಂದು ಹಲವು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಅಸ್ಫೃಶ್ಯತೆ ಆಚರಣೆ ವಿಡಿಯೋ ಹರಿದಾಡುತ್ತಿದ್ದಂತೆ ತಹಶೀಲ್ದಾರರ ಗಮನಕ್ಕೂ ಬಂದಿದೆ. ಅವರು ಕಂದಾಯ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಾಧಿಕಾಗಿಉ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಸೂಚಿಸಿದ್ದಾರೆ. ಗ್ರಾಮದಲ್ಲಿ ಸಭೆ ನಡೆಸಿ ವಿಚಾರಣೆ ನಡೆಸುತ್ತೇವೆ. ಘಟನೆ ನಡೆದಿರುವುದು ನಿಜವಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಐ.ಇ ಬಸವರಾಜು ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, “ಶನಿವಾರ ಸಂಜೆ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿತು. ವಾಸ್ತವಾಂಶ ಗೊತ್ತಿಲ್ಲ, ಹಾಗಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಕಳಿಸಿಕೊಟ್ಟಿದ್ದೇನೆ. ಈ ಬಗ್ಗೆ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.

ಸಂವಿಧಾನದ 17ನೇ ವಿಧಿಯು ಎಲ್ಲಾ ರೀತಿಯ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸುತ್ತದೆ. ದೇವಾಲಯ ಪ್ರವೇಶಕ್ಕೆ ನಿರಾಕರಣೆ, ಬಾವಿ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಕ್ಕೆ ತಡೆ, ಪ್ರಾರ್ಥನೆ ಮತ್ತು ಧಾರ್ಮಿಕ ವಿಧಿ-ವಿಧಾನಗಳನ್ನು ಆಚರಿಸುವುದರಲ್ಲಿ ತಾರತಮ್ಯವನ್ನು ನಿಷೇಧಿಸುತ್ತದೆ. ಈ ಆಚರಣೆಗೆಳು ಮುಂದುವರೆದರೆ ಅದನ್ನು ಅಸ್ಪೃಶ್ಯತೆ ಎಂದು ಪರಿಗಣಿಸುವುದು ಹಾಗೂ ಅದನ್ನು ಆಚರಿಸುವ ವ್ಯಕ್ತಿ ಆಪಾದಿತ ಎಂದು ಪರಿಗಣಿಸುವುದು ಹಾಗೂ ಅದನ್ನು ಅಲ್ಲಗಳೆಯುವ ಜವಾಬ್ದಾರಿಯನ್ನು ಆಪಾದಿತನ ಮೇಲೆ ಹೊರಿಸುವುದು ಕಾಯಿದೆಯ ಮುಖ್ಯ ಅಂಶವಾಗಿತ್ತು. ಆದರೆ ಶಿಕ್ಷೆಯ ಪ್ರಮಾಣ ಮುಂತಾದ ಹಲವು ನ್ಯೂನತೆಗಳಿಂದಾಗಿ ಕಾನೂನಿನಲ್ಲಿ ಬದಲಾವಣೆ ತರಬೇಕಾಯಿತು. ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು (ದೌರ್ಜನ್ಯಗಳ ತಡೆ) ಕಾಯಿದೆ 1989 ಮತ್ತು 1995ರಲ್ಲಿ ಅದರಡಿ ರೂಪಿಸಲಾದ ನಿಯಮಗಳು ಜಾರಿಯಲ್ಲಿವೆ.

ಇದನ್ನೂ ಓದಿ: ದಲಿತರ ಮದುವೆಗೆ ಕಲ್ಯಾಣ ಮಂಟಪ ನೀಡದೆ ಅಸ್ಪೃಶ್ಯತೆ ಆಚರಣೆ: ದೂರು – ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟ ಮಾಡುತ್ತಿದ್ದ ಯುವಕನಿಗೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...