Homeಮುಖಪುಟಚೀನಾ: ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಕ್ರಮ, 6,300 ಜನರಿಗೆ ಶಿಕ್ಷೆ

ಚೀನಾ: ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಕ್ರಮ, 6,300 ಜನರಿಗೆ ಶಿಕ್ಷೆ

- Advertisement -
- Advertisement -

ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಡುವುದರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಚೀನಾದ ಭದ್ರತಾ ಅಧಿಕಾರಿಗಳು 34,000 ಆನ್‌ಲೈನ್‌ ಖಾತೆಗಳನ್ನು ಮುಚ್ಚಿಸಿದ್ದಾರೆ. ಕಳೆದ ಏಪ್ರಿಲ್‌ನಿಂದ ಇದುವರೆಗೆ 6,300 ಜನರಿಗೆ ಶಿಕ್ಷೆ ವಿಧಿಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಸಿಸಿಟಿವಿ ವರದಿ ಮಾಡಿದೆ.

4,800ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 6,300ಕ್ಕೂ ಹೆಚ್ಚು ಜನರಿಗೆ ಶಿಕ್ಷೆ ವಿಧಿಸಲಾಗಿದೆ. ದೇಶದಾದ್ಯಂತ ವದಂತಿಗಳನ್ನು ಹರಡಿದ 34,000 ಆನ್‌ಲೈನ್‌ ಖಾತೆಗಳನ್ನು ಬಂದ್ ಮಾಡಲಾಗಿದೆ ಎಂದು ಸಾರ್ವಜನಿಕ ಭದ್ರತಾ ಸಚಿವಾಲಯದ ಅಧಿಕಾರಿ ಲಿ ಟಾಂಗ್ ತಿಳಿಸಿದ್ದಾರೆ.

ಸಾಮಾಜಿ ಸ್ಥಿರತೆ ಕಾಪಾಡಲು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬುವವರ ವಿರುದ್ಧ ಮುಂದಿನ 2024ರಲ್ಲಿ ವರ್ಷಪೂರ್ತಿ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಲಿ ಟಾಂಗ್ ಹೇಳಿದ್ದಾರೆ.

ಎಪ್ರಿಲ್ ನಲ್ಲಿ `ಕ್ಲೀನ್ನೆಟ್’ ಅಭಿಯಾನ ಆರಂಭವಾದಾಗಿನಿಂದ ಪೊಲೀಸರು ಸಾಮಾಜಿಕ ಮಾಧ್ಯಮಗಳಲ್ಲಿನ 27,000 ಮಾಹಿತಿಗಳನ್ನು ಅಳಿಸಿದ್ದಾರೆ ಮತ್ತು ಸೈಬರ್ ಕಿರುಕುಳದ ಕಾರಣಕ್ಕೆ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬ್ಲಾಕ್ ಮಾಡಿದ್ದಾರೆ ಎಂದು ವರದಿ ಹೇಳಿದೆ.

ಚೀನಾದಲ್ಲಿ ಇಂಟರ್‌ನೆಟ್‌ ವ್ಯವಸ್ಥೆ ಆಢಳಿತರೂಡ ಕಮ್ಯುನಿಷ್ಟ್ ಸರ್ಕಾರದ ಹಿಡಿತದಲ್ಲಿದೆ. ಇಲ್ಲಿ ಸರ್ಕಾರವನ್ನು ಟೀಕಿಸಿ ಯಾವುದೇ ಪೋಸ್ಟ್‌ಗಳನ್ನು ಹಾಕಿದರೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಕೋವಿಡ್ ಕುರಿತ ನಿಜವಾದ ಸುದ್ದಿಯನ್ನು ಬಿತ್ತರಿಸಿದ ಮಾಧ್ಯಮಗಳ ವಿರುದ್ಧವೂ ಸರ್ಕಾರ ಕ್ರಮ ಕೈಗೊಂಡಿದೆ.

ಕೋವಿಡ್ 19 ಕುರಿತಂತೆ ವರದಿ ಮಾಡಿದ್ದಕ್ಕಾಗಿ ಚೀನಾದ ಪತ್ರಕರ್ತೆಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದ ಬಗ್ಗೆ 2020ರ ನವೆಂಬರ್ 16ರಂದು ದಿ ಗಾರ್ಡಿಯನ್ ವರದಿ ಮಾಡಿತ್ತು. ಸುಳ್ಳು ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಮಾಜಿ ವಕೀಲೆ, ಪತ್ರಕರ್ತೆ ಜಾಂಗ್ ಝಾನ್ ಅವರನ್ನು 6 ತಿಂಗಳಿನಿಂದ ಶಾಂಫೈ ಬಂಧಿಖಾನೆಯಲ್ಲಿ ಇರಿಸಲಾಗಿತ್ತು. ಬಳಿಕ ನವೆಂಬರ್ 16ರಂದು ಆಕೆಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು ಎಂದು ದಿ ಗಾರ್ಡಿಯನ್ ಹೇಳಿತ್ತು.

ಇದನ್ನೂ ಓದಿ: ಸಾರ್ವಜನಿಕವಾಗಿ ನಿಂದನೆ ಮಾಡದಿದ್ದರೆ SC/ST ಕಾಯ್ದೆಯಡಿ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ

0
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ​​ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ಗೆಲುವು ಸಾಧಿಸಿದ್ದಾರೆ. ಸಿಬಲ್ 1,066 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಹಿರಿಯ ವಕೀಲ ಪ್ರದೀಪ್ ರೈ...