Homeಮುಖಪುಟವಿರೋಧ ಪಕ್ಷದಲ್ಲಿದ್ದಾಗ ಚೀನಾ ವಿರುದ್ಧ ಕೆಂಡಕಾರುತ್ತಿದ್ದ ಪ್ರಧಾನಿ ಈಗ ಏನು ಮಾಡುತ್ತಿದ್ದಾರೆ?: ಮೋದಿ ವಿರುದ್ಧ ಸಿಬಲ್...

ವಿರೋಧ ಪಕ್ಷದಲ್ಲಿದ್ದಾಗ ಚೀನಾ ವಿರುದ್ಧ ಕೆಂಡಕಾರುತ್ತಿದ್ದ ಪ್ರಧಾನಿ ಈಗ ಏನು ಮಾಡುತ್ತಿದ್ದಾರೆ?: ಮೋದಿ ವಿರುದ್ಧ ಸಿಬಲ್ ವಾಗ್ದಾಳಿ

- Advertisement -
- Advertisement -

ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಮೇಲೆ ಹಕ್ಕು ಸಾಧಿಸುವ ಚೀನಾ “ಸ್ಟ್ಯಾಂಡರ್ಡ್ ಮ್ಯಾಪ್” ಬಿಡುಗಡೆ ಮಾಡಿದೆ. ಈ ವಿಚಾರದಲ್ಲಿ ಪ್ರಧಾನಿ ಮೋದಿ ಮಾತನಾಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಮತ್ತೊಂದೆಡೆ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಅರುಣಾಚಲ ಪ್ರದೇಶದ ಮೇಲೆ ಚೀನಾ ಹಕ್ಕು ಪ್ರತಿಪಾದಿಸುತ್ತಿರುವುದು ಹೊಸ ವಿಷಯವಲ್ಲ ಎಂದು ಹೇಳಿದ್ದಾರೆ.

ANI ಸುದ್ದಿ ಸಂಸ್ಥೆಯ ಸಂದರ್ಶನದಲ್ಲಿ ಮಾತನಾಡಿರುವ ಅವರು, ”ಅಕ್ಸಾಯ್ ಚಿನ್ ಹಲವು ವರ್ಷಗಳಿಂದ ಚೀನಾದ ಅಡಿಯಲ್ಲಿದೆ ಎಂದು ನಮಗೆ ಈಗಾಗಲೇ ಗೊತ್ತಿದೆ… ಅದು ಹೊಸ ವಿಷಯವಲ್ಲ. ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಚೀನಾದ ಹಕ್ಕು ಹೊಸ ವಿಷಯವಲ್ಲ” ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.

ಪ್ರಧಾನಿ ಮೋದಿಯವರ ವಿರುದ್ಧ ಕಿಡಿಕಾರಿರುವ ಸಿಬಲ್, ”ಪ್ರಧಾನಿ ಅವರು ವಿರೋಧ ಪಕ್ಷದಲ್ಲಿದ್ದಾಗ ಚೀನಾದ ವಿರುದ್ಧ ಕೆಂಡಕಾರುತ್ತಿದ್ದರು. ಆದರೆ ಈಗ ಈ ಮಾತುಕತೆ ನಡೆಯುತ್ತಿರುವುದು ಕೇಂದ್ರದಲ್ಲಿಯೇ ಕಾಣಿಸುತ್ತಿದೆ. ಅದೇ ಬದಲಾವಣೆ” ಎಂದು ವ್ಯಂಗ್ಯ ಮಾಡಿದ್ದಾರೆ.

”ವಿದೇಶಾಂಗ ವ್ಯವಹಾರಗಳ ಸಚಿವ (ಎಸ್ ಜೈಶಂಕರ್) ಸ್ವತಃ ಚೀನಾ ನಮಗಿಂತ ದೊಡ್ಡ ಆರ್ಥಿಕ ಶಕ್ತಿ ಹೊಂದಿದೆ ಎಂದು ಹೇಳಿದ್ದಾರೆ… ಈ ಹೇಳಿಕೆಯು ನಮಗೆ ಹೆಚ್ಚಿನ ಸಂಧಾನ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ತೋರಿಸುತ್ತದೆ. ಹಲವು ಹಂತಗಳಲ್ಲಿ ಮಾತುಕತೆಗಳು ನಡೆದಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಹೇಳುತ್ತಾರೆ, ಆದರೆ ಚೀನಾದ ಸೇನಾಪಡೆ ಹಿಂದೆ ಸರಿದಿಲ್ಲ” ಎಂದು ಸಿಬಲ್ ಹೇಳಿದರು.

”ವಿದೇಶಾಂಗ ಸಚಿವರು, ಇದು ಆಕ್ಷೇಪಾರ್ಹ ಇದನ್ನು ನಾವು ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಆಗಾಗ್ಗೆ ಹೇಳುತ್ತಾರೆ, ಇದು ಸರಿ … ಆದರೆ ಹೇಳಿಕೆಗಳನ್ನು ನೀಡುವುದರಿಂದ ಪರಿಹಾರ ಸಿಗುವುದಿಲ್ಲ… ನಾವು ದೊಡ್ಡ ಆರ್ಥಿಕ ಶಕ್ತಿಯಾದಾಗ ಪರಿಹಾರವನ್ನು ಸಾಧಿಸಬಹುದು. ಆಗ ಮಾತ್ರ ನೀವು ಅವರೊಂದಿಗೆ ಸಮಾನವಾಗಿ ಮಾತನಾಡಬಹುದು”’ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.

ಇದನ್ನೂ ಓದಿ: ಚೀನಾ ಮ್ಯಾಪ್‌ ”ತುಂಬಾ ಗಂಭೀರ” ವಿಚಾರ, ಪ್ರಧಾನಿ ಮಾತನಾಡಲೇಬೇಕು: ರಾಹುಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...