Homeಮುಖಪುಟಲೋಕಸಭೆಯಿಂದ ಅಧೀರ್ ರಂಜನ್ ಚೌಧರಿ ಅಮಾನತು ರದ್ದು ಪಡಿಸಲು ನಿರ್ಣಯ

ಲೋಕಸಭೆಯಿಂದ ಅಧೀರ್ ರಂಜನ್ ಚೌಧರಿ ಅಮಾನತು ರದ್ದು ಪಡಿಸಲು ನಿರ್ಣಯ

- Advertisement -
- Advertisement -

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಅಮಾನತನ್ನು ರದ್ದುಪಡಿಸಲು ಲೋಕಸಭೆಯ ವಿಶೇಷಾಧಿಕಾರ ಸಮಿತಿ ಸರ್ವಾನುಮತದಿಂದ ನಿರ್ಣಯವನ್ನು ತೆಗೆದುಕೊಂಡಿದೆ.

ಲೋಕಸಭೆಯ ವಿಶೇಷಾಧಿಕಾರ ಸಮಿತಿಯು ಕಾಂಗ್ರೆಸ್ ನಾಯಕ ಅಧೀರ್ ರಾಜನ್ ಚೌಧರಿ ಅವರ ಅಮಾನತು ರದ್ದುಗೊಳಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಬುಧವಾರ ಕಾಂಗ್ರೆಸ್ ಸಂಸದ ಚೌಧರಿ ಅವರು ಸಮಿತಿಯ ಮುಂದೆ ಹಾಜರಾದ ನಂತರ ಸಮಿತಿಯು ಅಮಾನತು ಆದೇಶ ಹಿಂಪಡೆಯಲು ಶಿಫಾರಸು ಮಾಡುವ ನಿರ್ಣಯವನ್ನು ಅಂಗೀಕರಿಸಿದೆ. ಈ ಕುರಿತ ನಿರ್ಣಯವನ್ನು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಸಿಂಗ್ ಅಧ್ಯಕ್ಷತೆಯ ಸಂಸದೀಯ ಸಮಿತಿ ಶೀಘ್ರವೇ ಸ್ಪೀಕರ್‌ಗೆ ಕಳುಹಿಸಿಕೊಡಲಿದೆ.

ನನಗೆ ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಇರಲಿಲ್ಲ ಎಂದು ವಿಶೇಷಾಧಿಕಾರ ಸಮಿತಿ ಎದುರು ಚೌಧರಿ ಹೇಳಿ ವಿಷಾದ ವ್ಯಕ್ತಪಡಿಸಿದ ಹಿನ್ನೆಲೆ ಅಮಾನತು ನಿರ್ಧಾರ ವಾಪಾಸ್ಸು ಪಡೆಯುವ ನಿರ್ಧಾರ ಸಮಿತಿ ಕೈಗೊಂಡಿದೆ.

ಮಣಿಪುರ ಹಿಂಸಾಚಾರದ ಕುರಿತ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ  ಚೌಧರಿಗೆ ಆಗಸ್ಟ್ 11 ರಂದು ಅಶಿಸ್ತಿನ ವರ್ತನೆಗಾಗಿ ಅಮಾನತುಗೊಳಿಸಲಾಯಿತು. ಅವಿಶ್ವಾಸ ನಿರ್ಣಯದ ವೇಳೆ ಪ್ರಧಾನಿಯ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಅವಿಶ್ವಾಸ ನಿರ್ಣಯ ಮೋದಿಯನ್ನು ಸಂಸತ್ತಿಗೆ ಎಳೆದು ತಂದಿದ್ದು, ಇಲ್ಲವೆಂದರೆ ಅವರು ಸಂಸತ್ತಿಗೆ ಬರುವುದಿಲ್ಲ ಎಂದು ಪ್ರತಿಜ್ಞೆ ಕೈಗೊಳ್ಳುತ್ತಿದ್ದರು ಎಂದು  ಹೇಳಿದ್ದರು. ಇದಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರಾರಿಯಾದ ಬಿಲಿಯನೇರ್ ನೀರವ್ ಮೋದಿಗೆ ಹೋಲಿಕೆ ಮಾಡಿದ್ದರು.

ಸಂಸತ್ತಿನ ಅಧಿವೇಶನದ ವೇಳೆ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರ ಅಮಾನತು ನಿರ್ಣಯವನ್ನು ಮಂಡಿಸಿದ್ದರು. ಬಳಿಕ ವಿಶೇಷಾಧಿಕಾರ ಸಮಿತಿಯ  ತೀರ್ಮಾನದವರೆಗೆ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು.

ಇದನ್ನು ಓದಿ: ಮಹಾರಾಷ್ಟ್ರ: ಸಚಿವಾಲಯದ ಕಟ್ಟಡದಿಂದ ಜಿಗಿದ ಪ್ರತಿಭಟನಾ ನಿರತ ರೈತರು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...