Homeಮುಖಪುಟಮಹಾರಾಷ್ಟ್ರ: ಸಚಿವಾಲಯದ ಕಟ್ಟಡದಿಂದ ಜಿಗಿದ ಪ್ರತಿಭಟನಾ ನಿರತ ರೈತರು

ಮಹಾರಾಷ್ಟ್ರ: ಸಚಿವಾಲಯದ ಕಟ್ಟಡದಿಂದ ಜಿಗಿದ ಪ್ರತಿಭಟನಾ ನಿರತ ರೈತರು

- Advertisement -
- Advertisement -

ರೈತರು ತಮ್ಮ ಭೂಮಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದು, ಕೆಲ ಪ್ರತಿಭಟನಾಕಾರರು ಸಚಿವಾಲಯದ ಕಟ್ಟಡದಿಂದ ಕೆಳಕ್ಕೆ ಜಿಗಿದಿದ್ದಾರೆ.

ಆದರೆ ಪೊಲೀಸರು ಮುಂಜಾಗೃತ ಕ್ರಮವಾಗಿ ಸಚಿವಾಲಯದ ಕಟ್ಟಡದ ಆವರಣಕ್ಕೆ ನೆಟ್‌ಗಳನ್ನು ಹಾಕಿದ್ದರು. ವೈರಲ್ ವಿಡಿಯೋದಲ್ಲಿ ರೈತರು ಸಚಿವಾಲಯದ ಒಳಗೆ ಗುಂಪುಗೂಡಿರುವುದು ಕಂಡು ಬಂದಿದೆ.  ಅವರಲ್ಲಿ ಕೆಲವರು ಪ್ಲೇ ಕಾರ್ಡ್ ಗಳನ್ನು ಹಿಡಿದುಕೊಂಡಿದ್ದಾರೆ. ಕಟ್ಟಡದಿಂದ ಜಿಗಿದು ನೆಟ್‌ಗಳ ಮೇಲೆ ಕೆಲ ಪ್ರತಿಭಟನಾಕಾರರು ಇದ್ದರು. ಅವರನ್ನು ಪೊಲೀಸರು ರಕ್ಷಿಸಿದ್ದಾರೆ.

ಸಚಿವ ದಾದಾಜಿ ಭೂಸೆ ಸಚಿವಲಯದ ಕಟ್ಟಡದೊಳಗೆ ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ. ಕಟ್ಟಡದಿಂದ ಜಿಗಿಯಲು ಯತ್ನಿಸಿದ ಕೆಲವು ರೈತರನ್ನು ವಶಕ್ಕೆ ಪಡೆದುಕೊಂಡು ಮರೈನ್ ಡ್ರೈವ್ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ವಿದ್ಯುತ್ ಪ್ರಸರಣ ಕಂಪೆನಿ ಲಿಮಿಟೆಡ್‌ನಿಂದ ವಿದ್ಯುತ್ ಗೋಪುರದ ನಿರ್ಮಾಣಕ್ಕಾಗಿ ರೈತರ ಭೂಮಿಯನ್ನು ವಶಕ್ಕೆ ಪಡೆಯಲಾಗಿತ್ತು. ಇದಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ರೈತರು ಪ್ರತಿಭಟನೆಯನ್ನು ನಡೆಸಿದ್ದಾರೆ.

ಇತ್ತೀಚೆಗೆ ಈರುಳ್ಳಿ ರಫ್ತಿನ ಮೇಲೆ ಶೇ 40 ರಫ್ತು ಸುಂಕ ವಿಧಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ರೈತರು ಮತ್ತು ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ನವದೆಹಲಿ ಮತ್ತು ಮುಂಬೈ ಎರಡೂ ಕಡೆಗಳಲ್ಲೂ ಮೈತ್ರಿ ಸರಕಾರ ಹಾನಿ ನಿಯಂತ್ರಣಕ್ಕಾಗಿ ಹರಸಾಹಸ ಪಟ್ಟಿದೆ.

ಇದನ್ನು ಓದಿ: ಲಡಾಖ್‌ನಲ್ಲಿ ಚೀನಾ ಮಿಲಿಟರಿ ಪ್ರವೇಶಿಸಿದೆ: ರಾಹುಲ್ ಹೇಳಿದ್ದು ನಿಜವಾಗಿದೆ ಎಂದ ಸಂಜಯ್ ರಾವುತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...